ನವಲಿ: ಚೇಳು ಕಚ್ಚಿ ಅಂಗನವಾಡಿ ಕೇಂದ್ರದ ಮಗು ಆಸ್ಪತ್ರೆಗೆ ದಾಖಲು ಭಯಭೀತರಾದ ಪಾಲಕರು, ಅಂಗನವಾಡಿ ಸ್ಥಳಾಂತರಕ್ಕೆ ಸೂಚಿಸಿದ ಸಿಡಿಪಿಓ ವಿರೂಪಾಕ್ಷಿ ಸ್ವಾಮಿ
ಕಾರಟಗಿ:ಸಮೀಪದ ನವಲಿ ತಾಂಡಾದ ಕೃಷ್ಣ ಶ್ರೀಮತಿ ಲಕ್ಷ್ಮಿ ದಂಪತಿಗಳ ಪುತ್ರ ನಿಖಿಲ್ ನವಲಿ ತಾಂಡಾದ ಎರಡನೆಯ ಅಂಗನವಾಡಿ ಕೇಂದ್ರದ ಮುಂದುಗಡೆ ಮಧ್ಯಾಹ್ನ 3 ಗಂಟೆಗೆ ಆಟವಾಡುತ್ತಿದ್ದ ಐದು ವರ್ಷದ ಮಗು ನಿಖಿಲ್ ಗೆ ಚೇಳು ಕಚ್ಚಿದ ಪರಿಣಾಮ ಗಾಬರಿಗೊಂಡು ಭಯ ಬೀತರಾಗಿ ಅಂಗನವಾಡಿ ಕಾರ್ಯಕರ್ತೆ ಹನುಮಮ್ಮ ಮತ್ತು ಸಹಾಯಕಿ ನೋಡಲಾಗಿ ಹಾಗೂ ಮಗುವಿನ ಚಿಕ್ಕಪ್ಪ ಮಗುವನ್ನು ಗ್ರಾಮದ ವೈದ್ಯಾಧಿಕಾರಿಗಳ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಸ್ಥಳೀಯ ವೈದ್ಯರು ಕಾರಟಗಿಯ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲು. ಸೂಚಿಸಿದ್ದಾರೆ. ಕಾರಟಗಿಯ ಪದ್ಮಜಾ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಅಲ್ಲಿನ ಸಿಸ್ಟರ್ ಗಳು ಆ ಮಗುವಿನ ದೇಹ ತಣ್ಣಗಾಗಿದ್ದನ್ನು ಗಮನಿಸಿ ಕೂಡಲೆ ಸುರಕ್ಷಾ ಆಸ್ಪತ್ರೆಗೆ ಅಥವಾ ಗಂಗಾವತಿ ಕರೆದುಕೊಂಡು ಹೋಗಿ ಎಂದು ಹೇಳಿದ ಕಾರಣ ಹನುಮಮ್ಮ ಮತ್ತು ಸಹಾಯಕಿ ಮತ್ತು ಮಗುವಿನ ಪಾಲಕರು ಕೂಡಲೇ ಸುರಕ್ಷಾ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ನೋಡಲಾಗಿ ಮಗು ಎರಡು ಮೂರು ತಾಸು ಪ್ರಜ್ಞಾವಸ್ಥೆಯಲ್ಲಿ ಇರುವ ಕಾರಣ ವೈದ್ಯರು ಯಾವುದೇ ಹೇಳಲಾಗುವುದಿಲ್ಲ ಎಂದು ಆ ಮಗುವಿಗೆ ಚಿಕಿತ್ಸೆ ನೀಡಿದ್ದಾರೆ.
ನಂತರ ಅಂಗನವಾಡಿ ಕೇಂದ್ರದ ಕಾರ್ಯಕರ್ತ ಹನುಮಮ್ಮ ಮಾತನಾಡಿ ನಮ್ಮ ಅಂಗನವಾಡಿ ಕೇಂದ್ರ ಊರಿನಿಂದ ಎರಡು ನೂರು ಮೀಟರ್ ಅಂತರದಲ್ಲಿದೆ ಅಲ್ಲಿ ಗಿಡ ಗಂಟೆಗಳು ಬೇಲಿಗಳು ಅದಲ್ಲದೆ ನಮ್ಮ ಅಂಗನವಾಡಿ ಕೇಂದ್ರದಲ್ಲಿ ಪುಂಡಪೋಕರಿಗಳು ಮಧ್ಯವ್ಯಸನಿಗಳು ಗುಟ್ಕಾ ಮಧ್ಯಪಾನ ಸೇವಿಸಿ ಬಾಟಲಗಳನ್ನು ಹೊಡೆದು ಮತ್ತು ಅನೈತಿಕ ಚಟುವಟಿಕೆಗಳ ತಾಣ ಮಾಡಿಕೊಂಡಿದ್ದಾರೆ. ಮತ್ತು ನಮ್ಮ ಅಂಗನವಾಡಿ ಸುತ್ತ ಕ್ರಿಮಿ ಕೀಟಗಳ ಹಾವಳಿಯಿಂದ ಪಾಲಕರ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಮತ್ತು ಮಕ್ಕಳು ಕುಡಿಯುವ ನೀರಿನಲ್ಲಿ ಸತ್ತ ಬೆಕ್ಕುನ್ನು ಹಾಕಿದ್ದಾರೆ. ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೆ ಹೊಣೆಗಾರರು ನಾವೇ ಆಗುತ್ತೇವೆ. ಇದರಿಂದ ಗ್ರಾಮ ಪಂಚಾಯಿತಿಗೆ ಹಾಗೂ ಮೇಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ ನಾವು ದೂರ ಮಾಡಿದ ಮೂಲಕ ಮಾತನಾಡಿದಾಗ ಮೇಲಾಧಿಕಾರಿಗಳು ನಮ್ಮ ಅಂಗನವಾಡಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಲು ಭರವಸೆ ನೀಡಿದ್ದಾರೆ. ಎಂದರು*
ಮಗುವಿನ ಪಾಲಕರು ಮಾತನಾಡಿ ನಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಸಮರ್ಪಕವಾದ ಮಾರ್ಗವಿಲ್ಲ ಅಂಗನವಾಡಿ ಕೇಂದ್ರಕ್ಕಿಂತ ನಮಗೆ ನಮ್ಮ ಮಗುವಿನ ಜೀವ ಮುಖ್ಯ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿದರೆ ಮಾತ್ರ ನಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ ಎಂದರು.
ಆದಷ್ಟು ಬೇಗ ಈ ಅಂಗನವಾಡಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿಯಲು ಸೂಚಿಸಿದ್ದೇವೆ. ಆಸ್ಪತ್ರೆಯಲ್ಲಿರುವ ಮಗುವಿನ ಯೋಗ ಕ್ಷೇಮ ವಿಚಾರಿಸಲು ನಮ್ಮ ಅಂಗನವಾಡಿ ನಾನು ಕೂಡ ಭೇಟಿ ನೀಡುತ್ತೇನೆ
ಸಿಡಿಪಿಓ. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ವಿರೂಪಾಕ್ಷಯ್ಯ ಸ್ವಾಮಿ ಕನಕಗಿರಿ
What's Your Reaction?