*ಕೆ.ಆರ್.ಪೇಟೆ:ಅಕ್ಟೋಬರ್ ೦2 ಪುನೀತ್ ಪುತ್ಥಳಿ ಅನಾವರಣ*

*ಕೆ.ಆರ್.ಪೇಟೆ:ಅಕ್ಟೋಬರ್ ೦2 ಪುನೀತ್ ಪುತ್ಥಳಿ ಅನಾವರಣ*

*ಕೆ.ಆರ್.ಪೇಟೆ:ಅಕ್ಟೋಬರ್ ೦2 ಪುನೀತ್ ಪುತ್ಥಳಿ ಅನಾವರಣ*

*ಕೃಷ್ಣರಾಜಪೇಟೆ ಪಟ್ಟಣದ ಮೈಸೂರು-ಚನ್ನರಾಯಪಟ್ಟಣ ರಸ್ತೆಯ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ತಾಲ್ಲೂಕು ಪಂಚಾಯತಿ ಕಛೇರಿಯ ಪ್ರವೇಶದ್ವಾರದ ಪಕ್ಕದಲ್ಲಿ ಡಾ|ಪುನೀತ್ ರಾಜ್‍ಕುಮಾರ್ ರವರ 6 ಅಡಿಯ ಎತ್ತರದ ಕಂಚಿನ ಪುತ್ಥಳಿಯನ್ನು ಆಕ್ಟೋಬರ್. 02 ಗಾಂಧಿ ಜಯಂತಿ ಯಂದು ಲೋಕಾರ್ಪಣೆಗೊಳಿಸಲು ಸಿದ್ದತೆ ನಡೆಸಲಾಗಿದೆ.*

*ಬೆಂಗಳೂರಿನ ಪುನೀತ್ ರಾಜ್‍ಕುಮಾರ್ ರವರ ನಿವಾಸದಲ್ಲಿ ಪುನೀತ್ ರಾಜ್‍ಕುಮಾರ್ ರವರ ಧರ್ಮ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ರವರನ್ನು ಅಖಿಲ ಕರ್ನಾಟಕ ಪುನೀತ್ ಅಭಿಮಾನಿಗಳ ಬಳಗದ ಘಟಕದ ಅಧ್ಯಕ್ಷ ಕಾಮನಹಳ್ಳಿ ಮಹೇಶ್ ಭೇಟಿ ಮಾಡಿ ಆಕ್ಟೋಬರ್ 2 ರಂದು ನಡೆಯಲಿರುವ ಪುನೀತ್ ಪುತ್ಥಳಿಯ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ಪತ್ರಿಕೆಯನ್ನು ನೀಡಿದ್ದು. ಅಶ್ವಿನಿ ರವರು ಕಾರ್ಯದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ,*

*ಕೃಷ್ಣರಾಜಪೇಟೆ ಪಟ್ಟಣದ ಎಂ.ಕೆ. ಬೋಮ್ಮೇಗೌಡ ವೃತದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಕಳೆದ ಒಂದು ವರ್ಷದಿಂದ ಅಖಿಲ ಕರ್ನಾಟಕ ಪುನೀತ್ ಅಭಿಮಾನಿಗಳ ಬಳಗದ ವತಿಯಿಂದ ಶ್ರಮಿಸಿ ಪುತ್ಥಳಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು. ಪುನೀತ್ ರವರ ಪತ್ನಿ ಅಶ್ವಿನಿ ಅವರು ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ,*

*ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಟ-ನಟಿಯರಾದ ರಾಘವೇಂದ್ರ ರಾಜಕುಮಾರ್,ಗೀತಾ ಶಿವರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್, ಸಪ್ತಮಿ ಗೌಡ(ಕಾಂತರಾ ನಟಿ),ನಿರೂಪಕಿ ಅನುಶ್ರೀ, ಕೆ.ಆರ್.ಪೇಟೆ ಶಿವರಾಜ್,ಕೋಳಿ ಕಳ್ಳ ಮನೋಹರ್,ಶೀಳನೆರೆ ಕೇಶವ,ಮಡೆನೂರು ಮನು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಆಗಮಿಸುತ್ತಿದ್ದು ಈ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾಧ್ಯಮಗಳ ಮೂಲಕ ಜಯಕರ್ನಾಟಕ ಸಂಘಟನೆಯ ಯೂತ್ ಅಧ್ಯಕ್ಷರಾದ ಕೆ.ಎಲ್.ಮಹೇಶ್ ರವರು ತಿಳಿಸಿದ್ದಾರೆ*

*ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow