ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಗೌಡಗೆರೆ ಗ್ರಾಮದಲ್ಲಿ ನಡೆದ ಶ್ರೀ ಆದಿಶಕ್ತಿ ಹುಲಿಕೆರಮ್ಮ ದೇವಿಯ ಜಾತ್ರೋತ್ಸವದಲ್ಲಿ ಕೆಂಡಕೊಂಡ ಹಾಯ್ದ ಸರ್ವಭಕ್ತರು

ಚನ್ನರಾಯಪಟ್ಟಣ: ಶ್ರೀ ಆದಿಶಕ್ತಿ ಹುಲಿಕೆರಮ್ಮ ದೇವಿಯ 16ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವವು ಶ್ರದ್ದಾ ಭಕ್ತಿಯಿಂದ ಜರುಗಿತು. ಗೌಡಗೆರೆ ಗ್ರಾಮದಲ್ಲಿ ಧರ್ಮದರ್ಶಿ ದೊರೆಸ್ವಾಮಿಯವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು ಶ್ರೀ ಆದಿಶಕ್ತಿ ಹುಲಿಕೆರೆಮ್ಮ ದೇವಿ, ಶ್ರೀ ಆದಿಶಕ್ತಿ ಚಂಡಿಮಾಯಮ್ಮ, ಶ್ರೀ ದುರ್ಗಾ ಮಾಯಮ್ಮ ದೇವಿಯ ಲೋಕ ಕಲ್ಯಾಣಾರ್ಥವಾಗಿ ದುರ್ಗಾ ಸಪ್ತಶತಿ ಹಾಗೂ ವರುಣನ ಕೃಪೆಗೋಸ್ಕರ ಜಪ, ಯಜ್ಞ, ಹೋಮಹಾಗೂ 16ನೇ ವರ್ಷದ ಕೆಂಡಕೊಂಡ ಜಾತ್ರಾ ಮಹೋತ್ಸವ, ಅಮ್ಮನವರ ಗರ್ಭಗುಡಿಯ ಮುಖ್ಯ ದ್ವಾರಕ್ಕೆ ಪಂಚಲೋಹದ ಲೇಪನ, ತೆಪ್ಪೋತ್ಸವ ಹಾಗೂ ಅನ್ನದಾಸೋಹ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದಲ್ಲಿ ಡಾ.ಮಹೇಶ್ವರಶಿವಾಚಾರ್ಯಸ್ವಾಮೀಜಿ, ಶಾಸಕರಾದ ಡಾ.ಸಿ.ಎನ್. ಬಾಲಕೃಷ್ಣ,
ಶ್ರೀಮತಿಗೀತಾಗೋಪಾಲಸ್ವಾಮಿ, ಅಣತಿ ಆನಂದ್, ಪುಣ್ಯ ಆಸ್ಪತ್ರೆ ಮುಖ್ಯಸ್ಥ ಡಾ. ಮಹೇಶ್, ನಾಗರಾಜ್, ಟಿಎಪಿಸಿಎಂಎಸ್ ಉಪಾಧ್ಯಕ್ಷರಾದ ಅಂತನಹಳ್ಳಿಸ್ವಾಮಿಗೌಡ, ಶ್ರೀ ಗುರು ಕಲಾ ಸಂಘದ ಅಧ್ಯಕ್ಷರಾದ ಎಚ್. ಎನ್.ರಾಮಣ್ಣ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಗಳನ್ನು ಬೆಳ್ಳಿರಥದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು. ಶನೈಶ್ಚರ ಸ್ವಾಮಿ, ಆದಿಶಕ್ತಿ ಹುಲಿಕರಮ್ಮ, ಶೆಟ್ಟಹಳ್ಳಿ ಅಮ್ಮ, ಸತ್ಯಮ್ಮ, ಬೀರಲಿಂಗೇಶ್ವರ ಮುಳ್ಳಕಟ್ಟಮ್ಮ, ಕಾಲಭೈರವೇಶ್ವರ, ದುರ್ಗಾ ಲಕ್ಷ್ಮಿ ದೇವಿ, ಭೂತ ರಾಯ ಸ್ವಾಮಿ ದೇವರ ಉತ್ಸವ ಜರುಗಿತು. ಇದೇ ಸಂದರ್ಭದಲ್ಲಿ ಶ್ರೀ ಆದಿಶಕ್ತಿ ಹುಲಿಕೆರೆಯಮ್ಮ ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಕರ್ನಾಟಕ ವೀರ ಸಮರ ಸೇನೆಯ ಜಿಲ್ಲಾಧ್ಯಕ್ಷರಾದ ಭರತ್ ಗೌಡ, ಖಜಾಂಚಿ ಮನು, ಕರ್ನಾಟಕ ವೀರ ಸಮರ ಸೇನೆಯ ತಾಲೂಕು ಅಧ್ಯಕ್ಷರಾದ ಸಂದೇಶ್ ಗೌಡ, ಶ್ರೀಹುಲಿಕೆರೆಮ್ಮ ಸೇವಾ ಸಮಿತಿಯ ಸದಸ್ಯರಾದ ಮಮತ, ಪವನ್, ವಜೇಶ್, ಕಾರ್ತಿಕ್, ಕೊಡಿಗೌಡ, ಆನಂದ್,ಪ್ರಜ್ವಲ್ ,ಪ್ರತಾಪ ಸೇರಿದಂತೆ ಇತರರು ಹಾಜರಿದ್ದರು.
What's Your Reaction?






