ವಡ್ಡರಹಳ್ಳಿ ಕೃಷಿ ಪತ್ತಿನ ಸಹಕಾರದ ಸಂಘದ ಅಧ್ಯಕ್ಷರಾಗಿ ವಿ ಕೆ ಮಂಜುನಾಥ್ ಅವಿರೋಧವಾಗಿ ಆಯ್ಕೆ

ವಡ್ಡರಹಳ್ಳಿ ಕೃಷಿ ಪತ್ತಿನ ಸಹಕಾರದ ಸಂಘದ ಅಧ್ಯಕ್ಷರಾಗಿ ವಿ ಕೆ ಮಂಜುನಾಥ್ ಅವಿರೋಧವಾಗಿ ಆಯ್ಕೆ

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ವಡ್ಡರಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ ಕೆ ಮಂಜುನಾಥ್ ಅವರು ಅವಿರೋಧವಾಗಿ ಆಯ್ಕೆಗೊಂಡರು, ಹಿಂದಿನ ಅಧ್ಯಕ್ಷರಾಗಿದ್ದ ವೇಣುಗೋಪಾಲ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ನಡೆದು ಈ ಸ್ಥಾನಕ್ಕೆ ಮಂಜುನಾಥ ರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ

ಸಲ್ಲಿಸದ ಹಿನ್ನೆಲೆಯಲ್ಲಿ ವಿ ಕೆ ಮಂಜುನಾಥ್ ರವರ ಆಯ್ಕೆಯನ್ನು ಅವಿರೋಧವಾಗಿ ಘೋಷಣೆ ಮಾಡಿದರು, ನೂತನ ಅಧ್ಯಕ್ಷರಾದ ಮಂಜು ಮಾತನಾಡಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಕಾರಣಕರ್ತರಾದ ಶಾಸಕರಾದ ಸಿಎನ್ ಬಾಲಕೃಷ್ಣ ಹಾಗೂ ವಡ್ಡರಹಳ್ಳಿ ಸೊಸೈಟಿಯ ಎಲ್ಲಾ ನಿರ್ದೇಶಕರುಗಳಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ನಮ್ಮ ಸೊಸೈಟಿಯ ಷೇರುದಾರಿಗೆ ಹೆಚ್ಚುವರಿ ಸಾಲ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಎಲ್ಲಾ ಸದಸ್ಯರ ಹಿತವನ್ನು ಕಾಯಲು ಕಾಯಾ,ವಾಚ,ಮನಸಾ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.ಚುನಾವಣಾಧಿಕಾರಿಗಳಾಗಿ ಶ್ರೀಮತಿಲೀಲಾ

ಕಾರ್ಯನಿರ್ವಹಿಸಿದರು, ಇದೇ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಎಸ್ ಸರ್ ಮಧು, ಕಾರ್ಯದರ್ಶಿ ಬಿ ಆರ್ ನಟರಾಜು, ಅಧ್ಯಕ್ಷರಾದ ವಿ ಕೆ ಮಂಜುನಾಥ್,ಉಪಾಧ್ಯಕ್ಷರಾದ ವಿಜಯಲಕ್ಷ್ಮಿ, ಮಾಜಿ ಅಧ್ಯಕ್ಷರುಗಳಾದ ರಾಜಣ್ಣ, ಜಗನ್ನಾಥ್, ವೇಣುಗೋಪಾಲ್, ಮಾಜಿ ಉಪಾಧ್ಯಕ್ಷರಾದ ಮಂಜಣ್ಣ,ಪ್ರಕಾಶ್ , ಗಿರೀಶ್,ಯೋಗೇಶ್,ಜೆಡಿಎಸ್ ಮುಖಂಡರಾದ ಪರಮ ದೇವರಾಜೇಗೌಡ,ವಡ್ಡರಹಳ್ಳಿ ಗಣೇಶಗೌಡ, ಶ್ರೀಮತಿಪ್ರೇಮಿಳ ನಾಗರಾಜು, ವಿ ಬಿ ಮಂಜುನಾಥ್, ಮರಗೂರು ಅನಿಲ್ ,ಸಿ ಜಿ ಜಗದೀಶ್, ಚಿಕ್ಕಬೀಳ್ತಿ ಪ್ರವೀಣ್,ರಾಜೇಶ, ಸುರೇಶ,ದಿನೇಶ್,ಶೆಟ್ಟಿಹಳ್ಳಿ ಹೇಮಂತ್, ಸಿ ಆರ್ ಕುಮಾರ್, ಎ ಗೋಪಾಲ್, ಸಿ ಪಿ ಕೋದಂಡರಾಮ, ಚಾಮುಡಿಹಳ್ಳಿ ರವಿಕುಮಾರ್, ವಡ್ಡರಹಳ್ಳಿಪ್ರಸನ್ನ ,ವಡ್ಡರಹಳ್ಳಿ ಹಾಗೂ ಹೀರಿಬಿಳತಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

What's Your Reaction?

like

dislike

love

funny

angry

sad

wow