ಗ್ರಾಹಕರು ಆನ್‌ಲೈನ್ ವಂಚನೆ ಇಂದ ಹಣ ಕೆಳೆದುಕೊಳ್ಳುವುದರ ಬಗ್ಗೆ ಬ್ಯಾಂಕ್ ಸಿಬ್ಬಂಗಳು ನಿಗಾವಹಿಸುವಂತೆ ಇನ್ಸ್ಪೆಕ್ಟರ್ ರೇವತಿ ರವರು ತಿಳಿಸಿದರು

ಗ್ರಾಹಕರು ಆನ್‌ಲೈನ್ ವಂಚನೆ ಇಂದ ಹಣ ಕೆಳೆದುಕೊಳ್ಳುವುದರ ಬಗ್ಗೆ   ಬ್ಯಾಂಕ್ ಸಿಬ್ಬಂಗಳು  ನಿಗಾವಹಿಸುವಂತೆ ಇನ್ಸ್ಪೆಕ್ಟರ್ ರೇವತಿ ರವರು ತಿಳಿಸಿದರು

ಕೃಷ್ಣರಾಜಪೇಟೆ ತಾಲ್ಲೂಕಿ ನ ಕಿಕ್ಕೇರಿ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇವತಿ ರವರು ಇಂದು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬ್ಯಾಂಕ್ಗಳ ಅಧಿಕಾರಿಗಳ ಸಭೆ ಆಯೋಜನೆ ಮಾಡಲಾಗಿತ್ತು ನಂತರ ಮಾತನಾಡಿ ಬ್ಯಾಂಕ್ ಲಾಕರ್, ಎಟಿಎಂ ಭದ್ರತೆ ಕುರಿತು ವಿಶೇಷ ನಿಗಾವಹಿಸಬೇಕಿದೆ, ಬ್ಯಾಂಕ್ ಅಧಿಕಾರಿಗಳು ಅವರವರ ಬ್ಯಾಂಕ್ ಎಟಿಎಂಗಳಿಗೆ ಸೆಕ್ಯೂರಿಟಿ ಗಾರ್ಡ್ ನೇಮಿಸುವಂತೆ, ಅಗತ್ಯವಿರುವೆಡೆ ಉತ್ತಮ ಮಟ್ಟದ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯವಾಗಬೇಕೆಂದು ತಿಳಿಸಿದ್ರು 

ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಯಾವುದೇ ರೀತಿಯ ಕಳ್ಳತನವಾಗದ ರೀತಿಯಲ್ಲಿ ಹಣಕಾಸು ಸಂಸ್ಥೆಗಳು ಸುರಕ್ಷಿತವಾಗಿರಬೇಕು. ಕೆಲವೊಂದು‌ ಆನ್ ಲೈನ್ ಮೊಬೈಲ್ ಆಪ್ ಗಳಲ್ಲಿ ಗ್ರಾಹಕರು ಕಷ್ಟ ಪಟ್ಟು ದುಡಿದ ಹಣವನ್ನು ಕರಳೆದುಕೊಳ್ಳುತ್ತಾ ಇದ್ದಾರೆ ನೀವು ತಮ್ಮ ಗ್ರಾಹಕರಿಗೆ ಅರಿವು ನಕಲಿ ಆಪ್ ಗಳನ್ನಹ ಬಳಸದಂತೆ ಅರಿವು ಮೂಡಿಸಬೇಕು, ಅಲ್ಲದೆ ಮೊತ್ತೊಂದೆಡೆ ನಾವು ಬ್ಯಾಂಕ್ ಸಿಬ್ಬಂದಿ ನಿಮ್ಮ ಎಟಿಎಂ ಕಾರ್ಡ್ ಅವಧಿ‌ಮುಕ್ತಾಯವಾಗಿದೆ ನೀವು ಓಟಿಪಿ ನೀಡಿದ್ರೆ ಹೊಸ ಕಾರ್ಡ್ ಕಳಿಸುವುದಾಗಿ ಕೆರೆ ಮಾಡಿ ಗ್ರಾಹರ ಖಾತೆಯಲ್ಲಿರು ಹಣವನ್ನು ದೋಚುತ್ತಿರುವುದು ಕೆಲವು ದೂರುಗಳು ಕೇಳಿ ಬರುತ್ತಿದೆ. ಅದಕ್ಕಾಗಿ ಆನ್ ಲೈನ್ ವಂಚನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಅಗತ್ಯ ಕ್ರಮವಹಿಸಬೇಕೆಂದು ಸಭೆಯಲ್ಲಿ ತಿಳಿಸಿದ್ರು..

ಈ ಸಭೆಯಲ್ಲಿ ಬ್ಯಾಂಕ್ ಗಳ ವ್ಯವಸ್ಥಾಪಕರು, ಅಧಿಕಾರಿಗಳು ಪೋಲೀಸ್ ಸಿಬ್ಬಂದಿಗಳಾದ ಕುಮಾರ್, ವಿನೋಧ್, ಸುನೀಲ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

 ವರದಿ ರಾಜು ಜಿ ಪಿ ಕೆ ಆರ್ ಪೇಟೆ

What's Your Reaction?

like

dislike

love

funny

angry

sad

wow