ಭಗವಾನ್ ರವರು ಕೂಡಲೇ ಒಕ್ಕಲಿಗ ಸಮಾಜದ ಮುಂದೆ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ ಗಂಗಾಧರ್,*

ಭಗವಾನ್ ರವರು ಕೂಡಲೇ ಒಕ್ಕಲಿಗ ಸಮಾಜದ ಮುಂದೆ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ ಗಂಗಾಧರ್,*

*ಭಗವಾನ್ ರವರು ಕೂಡಲೇ ಒಕ್ಕಲಿಗ ಸಮಾಜದ ಮುಂದೆ ಕ್ಷಮೆಯಾಚಿಸಬೇಕು ಎಂದು ಎಚ್ಚರಿಕೆ ನೀಡಿದ ಗಂಗಾಧರ್,*

ಕೆ ಆರ್ ಪೇಟೆ ಭಗವಾನ್ ರವರು ಮಹಿಷಾ ದಸರಾ ಸಭೆಯಲ್ಲಿ ಒಕ್ಕಲಿಗ ಸಮಾಜದ ಬಗ್ಗೆ ಅವಹೇಳನ ಹೇಳಿಕೆ ನೀಡಿರುವುದು ವಿರೋಧಿಸಿ ಹಾಗೂ ಅನಾವಶ್ಯಕವಾಗಿ ಕುವೆಂಪು ರವರ ಹೆಸರನ್ನು ಬಳಸಿರುವುದು ಖಂಡಿಸಿ ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಅಧ್ಯಕ್ಷರಾದ ಗಂಗಾಧರವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಒಕ್ಕಲಿಗ ಸಮಾಜ ಯಾರನ್ನು ನೋಯಿಸದೆ ಸದ್ದು ಗದ್ದಲವಿಲ್ಲದೆ ಒಕ್ಕಲುತನ ಮಾಡುವ ಮೂಲಕ ಜಾತಿ ಮತ ಭೇದವನ್ನು ಬಿಟ್ಟು ಎಲ್ಲರಿಗೂ ಅನ್ನವನ್ನು ನೀಡುವ ಮೂಲಕ ಎಲ್ಲಾ ಸಮಾಜದವರನ್ನು ಅಣ್ಣತಮ್ಮಂದಿರಂತೆ ಹೊಂದಾಣಿಕೆಯಿಂದ ಇರುವ ಸಮಾಜವನ್ನು ಅನವಶ್ಯಕವಾಗಿ ಅವಹೇಳನ ಕರಿ ಮಾತುಗಳನ್ನು ಹೇಳುವ ಮೂಲಕ ಜಾತಿ ಸಂಘರ್ಷನಕ್ಕೆ ಕಾರಣವಾಗಿರುವ ಭಗವಾನ್ ರವರು ಕೂಡಲೇ ಸಮಾಜದ ಮುಂದೆ ಕ್ಷಮೆಯಾಚಿಸಬೇಕು ಇಲ್ಲವಾದರೆ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು

 ಇದೇ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರಾದ ಪ್ರೇಮ ನಾಗರಾಜ್ ಮಾತನಾಡಿ ಭಗವಾನ್ ರವರು ವಿದ್ಯಾವಂತರು ಕವಿಗಳು ಆಗಿ ಸಮಾಜದ ನಡುವೆ ಅವಹೇಳನ ಹೇಳಿಕೆ ನೀಡುವ ಮೂಲಕ ಸಮಾಜಗಳ ನಡುವೆ ಸಂಘರ್ಷಣ ತಂದಿಟ್ಟು ತಮಾಷೆ ನೋಡುತ್ತಿರುವುದು ಎಲ್ಲಾ ವಿಷಯಗಳಲ್ಲೂ ಇದೇ ತರ ಮನಸ ಇಚ್ಛೆ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಸ್ಥ ಹಾಳು ಮಾಡುವ ಮೂಲಕ ಸಾರ್ವಜನಿಕರ ಮನಸ್ಸಿನಲ್ಲಿ ಗೊಂದಲ ಮೂಡಿಸುತ್ತಿರುವುದು ಇದು ತಮಗೆ ಸರಿ ಎನಿಸುವುದಿಲ್ಲ ಕೂಡಲೇ ನಿಮ್ಮ ತಪ್ಪುಗಳನ್ನು ಅರಿತುಕೊಂಡು ನಮ್ಮ ಜಾತಿಯ ಹೆಸರು ಬಳಸುವ ಮೂಲಕ ಆಹೇಳನ ಹೇಳಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಭಗವಾನ್ ರವರ ವಿರುದ್ಧ ಕಿಡಿಕಾರಿದರು.

 ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗ ಸಂಘದ ಜಿಲ್ಲಾಅಧ್ಯಕ್ಷರಾದ ಗಂಗಾಧರ್, ಉಪಾಧ್ಯಕ್ಷರಾದ ಬೋರೇಗೌಡ್ರು, ಜಿಲ್ಲಾ ಕಾರ್ಯಧ್ಯಕ್ಷರಾದ ಭರತ್, ಮಹಿಳಾ ಅಧ್ಯಕ್ಷರಾದ ಪ್ರೇಮ ನಾಗರಾಜ್, ಮಹಿಳಾ ಉಪಾಧ್ಯಕ್ಷರಾದ ರೇಣುಕಾ ಚಂದ್ರು, ಕೃಷ್ಣರಾಜಪೇಟೆ ತಾಲೂಕು ಛಾಯಾಗ್ರ ಸಂಘದ ಅಧ್ಯಕ್ಷರಾದ ಗೌಡ ಜೈ ಕುಮಾರ್, ಕರವೇ ತಾಲೂಕು ಸಂಘಟನಾ ಕಾರ್ಯದರ್ಶಿ ಗೋಪಿ ಗೌಡ, ಹಾಗೂ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.

 *ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow