*ತಾಲೂಕು ಕಚೇರಿಯ ಅಧಿಕಾರಿಗಳು ಕ್ರಷರ್ ಮಾಲೀಕರ ಜೊತೆ ಶಾಮೀಲು

*ತಾಲೂಕು ಕಚೇರಿಯ ಅಧಿಕಾರಿಗಳು ಕ್ರಷರ್ ಮಾಲೀಕರ ಜೊತೆ  ಶಾಮೀಲು

*ತಾಲೂಕು ಕಚೇರಿಯ ಅಧಿಕಾರಿಗಳು ಕ್ರಷರ್ ಮಾಲೀಕರ ಜೊತೆ ಶಾಮೀಲು ದೂರುದಾರರ ಅರ್ಜಿಗೆ ಡೋಂಟ್ ಕೇರ್*

ಕುಣಿಗಲ್ ತಾಲೂಕು ಕಸಬಾ ಹೋಬಳಿ ತರೀಕೆರೆ ಗ್ರಾಮದ ಸರ್ವೆ ನಂಬರ್ 80, 81 ರಲ್ಲಿ ಇರುವ 7 ಅಕ್ರಮ ಕ್ರಷರ್ ಗಳ ಬಗ್ಗೆ ಈ ಹಿಂದೆ ತಾಲೂಕು ಸರ್ವೆಯರ್ ಅಧಿಕಾರಿಗಳು ಸರ್ವೆ ನಡೆಸಿ ಕ್ರಷರ್ ಗಳು ಸ್ಥಾಪನೆ ಆಗಿರುವುದು ಅಕ್ರಮವೆಂದು ಸಾಬೀತು ಪಡಿಸಲಾಗಿತ್ತು.

 ಇದರಿಂದ ಈ ಎಲ್ಲಾ ಏಳು ಕ್ರಷರ್ ಗಳು ಒಂದು ತಿಂಗಳುಗಳ ಕಾಲ ಬಂದ್ ಕೂಡ ಮಾಡಲಾಗಿತ್ತು. ಕ್ರಷರ್ ಮಾಲೀಕರು ಹೆಚ್ಚಿನ ಸರ್ವೇ ನಡೆಸುವಂತೆ ಕೋರಿಕೆ ಅರ್ಜಿ ನೀಡಲಾಗಿದ್ದು, ಈ ಅರ್ಜಿಯ ಮೇರೆಗೆ ಹೆಚ್ಚಿನ ಸರ್ವೇ ನಡೆಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ADLR ಸರ್ವೆ ಅಧಿಕಾರಿಗಳಿಂದ ಸರ್ವೆ ಮಾಡಿಸಲಲಾಗಿದ್ದು ADLR ಅಧಿಕಾರಿಗಳು ಕ್ರಷರ್ಗಳ ಜಾಗವನ್ನು ಸರ್ವೆ ಮಾಡಿ ಸ್ಕೆಚ್ ರೆಡಿ ಮಾಡಿ ತುಮಕೂರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ತಹಶೀಲ್ದಾರ್ ಅವರ ಕಚೇರಿಗೆ ರವಾನಿಸಿದ್ದು, ಕುಣಿಗಲ್ ತಹಸಿಲ್ದಾರ್ ವಿಶ್ವನಾಥ್ ರವರು ಆರ್ ಐ, ವಿಎ,ರವರ ವರದಿ ಪಡೆಯುವಂತೆ ನೆಪ ಮಾಡುತ್ತಾ ಕಸಬಾ ವಿ ಎ ಚಂದ್ರಶೇಖರ್ ಕಸಬಾ ಆರ್ ಐ ಪರಮೇಶ್ ಮತ್ತು ಕುಣಿಗಲ್ ತಾಲೂಕು ತಹಶೀಲ್ದಾರ್ ವಿಶ್ವನಾಥ್ ತಮ್ಮ ಕೆಲಸವನ್ನು ನಿರ್ವಹಿಸುವ ಬದಲು ADLR ಅಧಿಕಾರಿಗಳು ನೀಡಿರುವ ಸ್ಕೆಚ್ ಕಾಪಿಯನ್ನು ಕ್ರಷರ್ ಮಾಲೀಕರುಗಳಿಗೆ ಕಳುಹಿಸಿ ದುಡ್ಡು ಮಾಡಲು ಮುಂದಾಗಿದ್ದಾರೆ.

ಅರ್ಜಿದಾರರಾದ ಧನಂಜಯ ವಿ.ಎಸ್. ರವರು ಅರ್ಜಿಯನ್ನು ವಿಚಾರಣೆ ಮಾಡಿದರೆ ತಹಶೀಲ್ದಾರ್ ಆರ್ ಐ, ವಿ ಎ,ಮೇಲೆ ವಿ ಏ,ಆರ್ ಐ, ತಹಸೀಲ್ದಾರ್ ಮೇಲೆ ನೆಪ ಹೇಳುತ್ತಾ ಅರ್ಜಿಯನ್ನು ವಿಲೇ ಇಡುತ್ತಿದ್ದಾರೆ ಅರ್ಜಿದಾರರು ತಹಶೀಲ್ದಾರರನ್ನು ಭೇಟಿ ಮಾಡಿದರೆ ಯಾವುದೇ ರೀತಿಯ ರೆಸ್ಪಾನ್ಸ್ ನೀಡುವುದಿಲ್ಲ. ಅರ್ಜಿದಾರರು ತಹಶೀಲ್ದಾರ್ ಅವರ ಫೋನ್ ನಂಬರಿಗೆ ಕರೆ ಮಾಡಿದರೆ ಅವರ ಫೋನನ್ನು ಬ್ಲಾಕ್ ಲಿಸ್ಟ್ ಮಾಡುತ್ತಾರೆ.

ಈ ಸಂಬಂಧಪಟ್ಟ ವಿಎ ಅವರನ್ನು ಸಂಪರ್ಕ ಮಾಡಿದರೆ ಆರ್ ಐ, ಮತ್ತು ತಹಶೀಲ್ದಾರ್ ರವರು ಹೇಳಿದರೆ ಮಾತ್ರ ನಾನು ಫೈಲ್ ರವಾನೆ ಮಾಡುತ್ತೇನೆ, ನೀವು ಆರ್ ಐ,ಹತ್ತಿರ ಮಾತನಾಡಿ ತಹಶೀಲ್ದಾರ್ ಹತ್ತಿರ ಮಾತನಾಡಿ ಅವರು ಹೇಳಿದರೆ ನಾನು ಫೈಲ್ ಮೂವ್ ಮಾಡುತ್ತೇನೆ ನೀವು ಅವರ ಹತ್ತಿರ ಮಾತನಾಡಿ ಎಂದು ಉದಾಸನದಿಂದ ಮಾತನಾಡುವುದಲ್ಲದೆ,ಈ ಮೂರು ಅಧಿಕಾರಿಗಳು ಕೂಡ ಕರ್ತವಲೋಪ್ಯ ಎಸಗುತ್ತಿದ್ದಾರೆ. ಈ ಎಲ್ಲಾ ವ್ಯವಸ್ಥೆಯನ್ನು ನೋಡಿದರೆ ಕಂದಾಯ ಅಧಿಕಾರಿಗಳು ಮತ್ತು ಕ್ರಷರ್ ಮಾಲೀಕರುಗಳ ನಡುವೆ ದೊಡ್ಡ ಮಟ್ಟದಲ್ಲಿ ಲಂಚದ ವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅಧಿಕಾರಿಗಳ ಕಾಲ್ ಲಿಸ್ಟ್ ಮತ್ತು ವಾಟ್ಸಪ್ ಚೆಕ್ ಮಾಡಿದರೆ ಎಲ್ಲಾ ಅವ್ಯವಾರಗಳು ಬಟಾ ಬಯಲಾಗುವುದು ಖಚಿತ. ಮೇಲಾಧಿಕಾರಿಗಳು ಇದರ ಬಗ್ಗೆ ಕ್ರಮ ವಹಿಸಿ ಸೂಕ್ತ ಕಾನೂನು ಕ್ರಮ ಕ್ರಮ ಕೈಗೊಂಡು ಅರ್ಜಿದಾರರಿಗೆ ನ್ಯಾಯ ಒದಗಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

 ಹಿಂದೆ ಪತ್ರಿಕೆಯಲ್ಲಿ ಸುದ್ದಿ ಆದರೆ ನಮಗೆ ಮಾನ ಮರ್ಯಾದೆ ಹೋಗುತ್ತೆ ಎಂದು ಭಯಪಡುವ ಅಧಿಕಾರಿಗಳಿದ್ರು ಈಗ ಮೂರು ಬಿಟ್ಟು ನಾನೊಬ್ಬನೇ ಭ್ರಷ್ಟ ನಲ್ಲ ಎಲ್ಲರೂ ಭ್ರಷ್ಟರು ಅದರಲ್ಲಿ ನಾನು ಒಬ್ಬ ಎಂದು ಆರಾಮಾಗಿ ಓಡಾಡುವವರು ಸಂಖ್ಯೆ ಹೆಚ್ಚಾಗಿದೆ ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಭ್ರಷ್ಟರ ವಿರುದ್ಧ ಕ್ರಮ ಜರುಗಿಸಿ ದೂರುದಾರರಿಗೆ ನ್ಯಾಯ ಒದಗಿಸಿಕೊಡಿ ಎಂದು ದೂರುದಾರರ ಮನದಾಳದ ನೋವುಗಳನ್ನು ಮಾಧ್ಯಮದ ಮುಂದೆ ತೋಡಿಕೊಂಡಿದ್ದಾರೆ.

What's Your Reaction?

like

dislike

love

funny

angry

sad

wow