*ಹೇಮಗಿರಿ, ಬಿಜಿಎಸ್ ಶಾಖ ಮಠದ ಕಾರ್ಯದರ್ಶಿಗಳಾದ ಡಾ, ಜೆ,ಎನ್,ರಾಮಕೃಷ್ಣೇಗೌಡ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿಯ ಆಚರಣೆ.*
ಕೆ ಆರ್ ಪೇಟೆ,ಹೇಮಗಿರಿ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ ವೈಕುಂಠ ಏಕಾದಶಿ ಪ್ರಯುಕ್ತ (ಉತ್ತರ ದ್ವಾರದರ್ಶನ)
ವೈಕುಂಠ ಏಕಾದಶಿಯ ಪರ್ವ ದಿನದಂದು ಉತ್ತರದ್ವಾರದಲ್ಲಿ ವೈಕುಂಠ ನಾರಾಯಣನ ದರ್ಶನವು ಏರ್ಪಡಿಸಲಾಗಿದ್ದು ಭಕ್ತರು ವೈಕುಂಠ ನಾರಾಯಣನ ದರ್ಶನವನ್ನು ಪಡೆದು ಶ್ರೀ ಸ್ವಾಮಿಯವರ ಕೃಪೆಗೆ ಭಕ್ತರು ಪಾತ್ರರಾದರು. ಹಾಗೇ ಲಕ್ಷ್ಮಿದೇವಿಗೆ ಹಾಗೂ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ಮಾಡಿ.
ಮಾತನಾಡಿದ ಸೇವಾ ಪ್ರಶಸ್ತಿ ಪುರಸ್ಕೃತರು ಕನ್ನಡ ರಾಜ್ಯೋತ್ಸವ ಪುರಸ್ಕೃತರು ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಮಾನಸ ಪುತ್ರರಾದ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ, ಜೆ ಎನ್ ರಾಮಕೃಷ್ಣೇಗೌಡ ರವರು ವೈಕುಂಠ ಏಕಾದಶಿಯ ದಿನದಂದು ನಾರಾಯಣನನ್ನು ಪೂಜಿಸಲು ಸಕಲ ದೇವತೆಗಳು ಸೂಕ್ಷ್ಮ ರೂಪದಲ್ಲಿ ಸಾನಿಧ್ಯವನ್ನು ವಹಿಸಿರುತ್ತಾರೆ ಆ ಸಮಯದಲ್ಲಿ ಭಕ್ತರು ಆ ದಿನದಂದು ತುಳಸಿ ಸಹಿತ ದೇವಾಲಯಕ್ಕೆ ಹೋಗಿ ದೇವರ ದರ್ಶನವನ್ನು ಮಾಡಿ ಬಂದರೆ 10,000 ವಿಷ್ಣುಯಾಗದ ಫಲವು ಹಾಗೂ ವಿಷ್ಣು ಲೋಕವು ಪ್ರಾಪ್ತಿಯಾಗುವುದು ಎಂದು ಋಷಿಗಳು ಹೇಳಿದ್ದಾರೆ ಎಂದು ಗ್ರಂಥ ಪುರಾಣಗಳಲ್ಲಿ ವಿವರಿಸಿದ್ದಾರೆ ವೈಕುಂಠ ಏಕಾದಶಿಯ ದಿನದಂದು ಸ್ವಾಮಿಯವರಿಗೆ ಪ್ರಾರ್ಥಕಾಲದಲ್ಲಿ
ಆರಾಧನೆ ಪುಷ್ಪಾಲಂಕಾರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಉತ್ಸವ ಮೂರ್ತಿಯನ್ನು ದೇವಾಲಯದ ಪ್ರಕಾರ ಉತ್ಸವ ವನ್ನು ಮಾಡಿ ಉತ್ತರ ದ್ವಾರವನ್ನು ಪೂಜಿಸಿ ಉತ್ತರ ದ್ವಾರದಲಿ ಸ್ವಾಮಿಯನ್ನು ಕೂರಿಸಿ ವಿಶೇಷ ಆರಾಧನೆ ಆಸ್ಥಾನ ಸೇವೆಗಳು ಮಾಡಿ ಮಹಾಮಂಗಳಾರತಿಯ ನಂತರ ಭಕ್ತಾದಿಗಳಿಗೆ ಉತ್ತರ ದ್ವಾರದಲ್ಲಿ ಪ್ರವೇಶವನ್ನು ಮಾಡಲು ಅನುಕೂಲಗಳನ್ನು ಮಾಡಿಕೊಡಲಾಯಿತು ಎಂದು ತಿಳಿಸಿದರು.
ವಿಶೇಷವಾಗಿ ಹೇಮಗಿರಿ ಬಿಜಿಎಸ್ ಶಾಖ ಮಠದ ವತಿಯಿಂದ ಭಕ್ತಾದಿಗಳು ಸ್ವಾಮಿಯವರ ದರ್ಶನ ಭಾಗ್ಯವು ಇರುವುದರಿಂದ ಭಕ್ತಾದಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಿ
(ದೇವರಿಗೆ ಸೇವೆ ಮಾಡಿಸಿ ಭಕ್ತರು ಪ್ರಸಾದ ಸೇವೆ ಪುಷ್ಪಾಲಂಕಾರ ಅಥವಾ ಇತರೆ ಸೇವೆಗಳನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಹೇಮಗಿರಿ, ಬಿಜಿಎಸ್ ಶಾಖ ಮಠದ ಕಾರ್ಯದರ್ಶಿಗಳಾದ ಡಾ. ಜೆ ಎನ್ ರಾಮಕೃಷ್ಣೇಗೌಡ ರವರು, ಕನ್ನಡ ಕುವೆಂಪು ಗೆಳೆಯರ ಬಳಗ ಸಂಸ್ಥಾಪಕ ಅಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರು
ಹಿರಿಯ ಪತ್ರಕರ್ತರಾದ ಹರಿಚರಣ್ ತಿಲಕ್, ಕೆ ಆರ್ ನೀಲಕಂಠ, ಬಸವರಾಜ್, ಲೋಕೇಶ್ ವಿ, ರಾಜು ಜಿ ಪಿ, ಕಲೀಲ್, ಮನು, ಅರ್ಚಕರಾದ ರಾಘವೇಂದ್ರ. ವೆಂಕಟರಮಣ ಸ್ವಾಮಿ ದೇವಸ್ಥಾನದ ಅರ್ಚಕರಾದ ರಾಮ ಭಟ್ಟರು.ಹೇಮಗಿರಿ ಬಿಜಿಎಸ್ ಶಾಲೆಯ ಪ್ರಿನ್ಸಿಪಾಲರಾದ ಆನಂದ್, ಶಿಕ್ಷಕ ಶಿಕ್ಷಕಿಯರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಿದ್ದರು.
*ವರದಿ, ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*
,
What's Your Reaction?