ಕೆ.ಆರ್.ಪೇಟೆ: ಕೇರಳದ ವಯನಾಡುನ ಭೂಕುಸಿತದಲ್ಲಿ ಅತ್ತೆ,ಮಗನ ಕಳೆದುಕೊಂಡ. ಸಾವು ಬದುಕಿನ ಜೊತೆ ಹೋರಾಡುತ್ತಿರುವ ಕೆ.ಆರ್. ಪೇಟೆಯ ಮಗಳು

ಕೆ.ಆರ್.ಪೇಟೆ: ಕೇರಳದ ವಯನಾಡುನ ಭೂಕುಸಿತದಲ್ಲಿ ಅತ್ತೆ,ಮಗನ ಕಳೆದುಕೊಂಡ. ಸಾವು ಬದುಕಿನ ಜೊತೆ ಹೋರಾಡುತ್ತಿರುವ ಕೆ.ಆರ್. ಪೇಟೆಯ ಮಗಳು

ಕೇರಳದ ವಯನಾಡು ನಲ್ಲಿ ಮಂಗಳವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 75 ಅಧಿಕ ಮಂದಿ ಸಾವಿಗಿಡಾಗಿದ್ದು ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಣ್ಮರೆಯಾಗಿ ಸುಮಾರು 400 ಕುಟುಂಬಗಳು ಅತಂತ್ರವಾಗಿದೆ. ಘಟನೆಯಲ್ಲಿ.

ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದ ಜಗದೀಶ್ ಮತ್ತು ಕುಳ್ಳಮ್ಮ ರವರ ಪುತ್ರಿ ಝಾನ್ಸಿರಾಣಿ ಅವರನ್ನ ಮೂಲತಃ ನಂಜನಗೂಡು ತಾಲೂಕಿನ ಸರಗೂರು ಹಾಲಿವಾಸ ಕೇರಳದ ಮುಂಡಕಾಯಿ ಗ್ರಾಮದ ಅನಿಲ್ ಕುಮಾರ್ ರವರಿಗೆ 2020 ರಲ್ಲಿ ತಾಲೂಕಿನ ಜಾನ್ಸಿರಾಣಿ ರವರನ್ನ ವಿವಾಹ ಮಾಡಕೊಡಲಾಗಿತ್ತು. ಕೇರಳದ ಮುಂಡಕಾಯಿ ವಾಸವಿದ್ದ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಘಟನೆಯಲ್ಲಿ ಸಿಲುಕಿ ಸಾವು ಬದುಕಿನಲ್ಲಿ

ಹೋರಾಡುತ್ತಿರುವ ಝಾನ್ಸಿರಾಣಿ ಮತ್ತು ಅವರ ಗಂಡ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು, ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಆದರೆ ಝಾನ್ಸಿರಾಣಿ ರವರ ಅತ್ತೆ ಲೀಲಾವತಿ(55), ಅವರ ಮುಗ್ಧ ಮಗ ನಿಹಾಲ್ (2.6) ಭೀಕರ ಭೂಕುಸಿತದಲ್ಲಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಏನೇ ಆಗಲಿ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಸಂಭವಿಸಿದ ಗುಡ್ಡ ದುರಂತದಲ್ಲಿ ಇನ್ನೂ ಮೃತ ದೇಹಗಳೇ ಪತ್ತೆ ಆಗಿಲ್ಲ, ಈ ಘಟನೆ ಮಾಸೋ ಮುನ್ನವೇ ಮತ್ತೊಂದು ಭೀಕರ ದುರಂತ ನಡೆದಿರುವುದು ದೇಶದ ಜನರ ಮನಸ್ಸಿನಲ್ಲಿ ಶ್ಲೋಕ ಮನೆಮಾಡಿದೆ.

What's Your Reaction?

like

dislike

love

funny

angry

sad

wow