ಕೆ.ಆರ್.ಪೇಟೆ :ನೂತನವಾಗಿ ಆರಂಭಿಸಿರುವ ಮಾಧ್ಯಮ ಸ್ಟುಡಿಯೋ ಕಛೇರಿಗೆ ಭೇಟಿ ನೀಡಿದ ನೂತನ ಶಾಸಕರಾದ ಹೆಚ್.ಟಿ.ಮಂಜು..!

ಕೆ.ಆರ್.ಪೇಟೆ :ನೂತನವಾಗಿ ಆರಂಭಿಸಿರುವ ಮಾಧ್ಯಮ ಸ್ಟುಡಿಯೋ ಕಛೇರಿಗೆ ಭೇಟಿ ನೀಡಿದ ನೂತನ ಶಾಸಕರಾದ ಹೆಚ್.ಟಿ.ಮಂಜು..!

ಕೆ.ಆರ್.ಪೇಟೆ ಪಟ್ಟಣದಲ್ಲಿ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಮಾಧ್ಯಮ ಸ್ಟುಡಿಯೋ ಕಛೇರಿಗೆ ಭೇಟಿ ನೀಡಿದ ನೂತನ ಶಾಸಕರಾದ ಹೆಚ್.ಟಿ.ಮಂಜು ರವರು ಮಾತನಾಡಿ ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆಯ ಹಾದಿಯಲ್ಲಿ ಪಂಚ ಪಾಂಡವರು ಕೆ.ಆರ್.ಪೇಟೆ ಪಟ್ಟಣದ ಹೃದಯಭಾಗದಲ್ಲಿ ಆರಂಭಿಸಿರುವ ಮಾಧ್ಯಮ ಸ್ಟುಡಿಯೋ ಕಛೇರಿಯ ವರದಿಗಾರರು ಸಮಾಜದ ಅಂಕು-ಡೊಂಕುಗಳ ಬಗ್ಗೆ ನಿಪಕ್ಷಪಾತವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಮಾಧ್ಯಮ ಸ್ಟುಡಿಯೋ ಕಛೇರಿಯ ಜಿ.ಪಿ.ರಾಜು, ಲೋಕೇಶ್.ವಿ, ಗೋವಿಂದರಾಜು ಶಾರಹಳ್ಳಿ, ಹೊಸಹೊಳಲು ಶ್ರೀನಿವಾಸ್, ಸಾಯಿಕುಮಾರ್ ನೂತನ ಶಾಸಕರಾದ ಹೆಚ್.ಟಿ.ಮಂಜು ರವರಿಗೆ ಸನ್ಮಾನಿಸಿ ಗೌರವಿಸಲಾಯಿತು..,
ವರದಿ -ರಾಜು ಜಿಪಿ ಕಿಕ್ಕೇರಿ

What's Your Reaction?

like

dislike

love

funny

angry

sad

wow