ಶ್ರವಣಬೆಳಗೊಳ ಗ್ರಾಪಂ ಬಾಕಿ ವಿದ್ಯುತ್ ಬಿಲ್ ಸಂದಾಯ ಮಾಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ ಶಾಸಕ ಸಿ ಎನ್ ಬಾಲಕೃಷ್ಣ

ಶ್ರವಣಬೆಳಗೊಳ ಗ್ರಾಪಂ ಬಾಕಿ ವಿದ್ಯುತ್ ಬಿಲ್ ಸಂದಾಯ ಮಾಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿದ ಶಾಸಕ ಸಿ ಎನ್ ಬಾಲಕೃಷ್ಣ

ಚನ್ನರಾಯಪಟ್ಟಣ: 18ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲೂಕಿನ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಯುವ ನೀರಿನ ವಿದ್ಯುತ್ ಬಿಲ್ ಬಾಬು 6.33 ಕೋಟಿ ರೂ.ಗಳನ್ನು ಸೆಸ್ಕ್‌ಗೆ ಸರ್ಕಾರ ಬಿಡುಗಡೆ ಮಾಡಿದ್ದು, ಆ ಮೂಲಕ ದಶಕಗಳ ತಮ್ಮ ಹೋರಾಟಕ್ಕೆ ಫಲ ಸಿಕ್ಕಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಶ್ರವಣಬೆಳಗೊಳ ಗ್ರಾಮದ ಮತ್ತು ಸುತ್ತಮುತ್ತಲ ಕೆಲ ಹಳ್ಳಿಗಳಿಗೆ 2004ರ ಮಹಾಮಸ್ತಕಾಭಿಷೇಕದ ವೇಳೆ ತಾಲೂಕಿನ ಗನ್ನಿಕಡದ ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಯನ್ನು ಒದಗಿಸಲಾಗಿತ್ತು. ನೀರೆತ್ತುವ ಮೋಟಾರ್‌ಗಳ ವಿದ್ಯುತ್ ಬಿಲ್ 6,33,29, 427 ಬಾಕಿ ಉಳಿಸಿಕೊಂಡು ಬಂದಿದ್ದ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ಬಾಕಿ ಹಣವನ್ನು ಪಾವತಿ ಮಾಡಲಾರದ ಸ್ಥಿತಿಯಲ್ಲಿತ್ತು. ಇದಕ್ಕಾಗಿ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು, ಸರ್ಕಾರವೇ ಹಣ ತುಂಬುವಂತೆ ನನ್ನ ಬಳಿ ಕೋರಿದ್ದರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸರ್ಕಾರದೊಂದಿಗಿನ ನಿರಂತರ

ಹೋರಾಟದ ಫಲ ಇದೀಗ ನೀರು ಸರಬರಾಜು ಮಂಡಳಿಯಿಂದ ಸೆಸ್ಕಾಂ ಗೆ ಸಂಪೂರ್ಣ ಹಣವನ್ನು ವರ್ಗಾಯಿಸುವ ಮೂಲಕ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಗೆ ಶಕ್ತಿ ತುಂಬಲಾಗಿದೆ ಎಂದರು.

ಇದಕ್ಕಾಗಿ ಕಳೆದ ಎರಡು ವರ್ಷಗಳಿಂದ ಸೆಸ್ಕ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮುತುವರ್ಜಿ ವಹಿಸಲಾಗಿತ್ತು.ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈ ಯೋಜನೆಯನ್ನು ಸೇರಿಸುವ ಮೂಲಕ ಮಾರ್ಪಡು ಮಾಡಲಾಗಿದೆ. ಇದರಿಂದ ಮುಂದೆ ವಿದ್ಯುತ್ ಸಮಸ್ಯೆಯೇ ಆಗದಂತೆ ಗಮನಹರಿಸಲಾಗಿದೆ. ಇದುವರೆವಿಗೂ ಗ್ರಾಮ ಪಂಚಾಯಿತಿಗೆ ಬರುತ್ತಿದ್ದ ವಿವಿಧ ಅನುದಾನಗಳನ್ನು ಕರೆಂಟ್ ಬಿಲ್ ಪಾವತಿಗೆ ಬಳಸಬೇಕಾದ ಅನಿವಾರ್ಯತೆ ಇತ್ತು. ಇದೀಗ ವಾರ್ಷಿಕ 60 ಲಕ್ಷ ರೂ. ಪಂಚಾಯಿತಿಗೆ ಉಳಿತಾಯವಾಗಲಿದ್ದು, ಇದನ್ನು ಸ್ವಚ್ಛತೆಗೆ ಬಳಸಿಕೊಳ್ಳುವಂತೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಯಶೋದ ಲೋಕೇಶ್, ಸೆಸ್ಕ್ ಇಇ ಅಂಬಿಕಾ, ಜೆಜೆಎಂ ನ ಎಇಇ ನಳಿನಾ, ವೆಂಕಟೇಶ ಸೇರಿದಂತೆ ಇತರರು ಹಾಜರಿದ್ದ

ರು.

What's Your Reaction?

like

dislike

love

funny

angry

sad

wow