ಕರುನಾಡು ಯುವ ಜನವೇದಿಕೆ ನೂತನ ತಾಲ್ಲೂಕು ಅಧ್ಯಕ್ಷರಆಯ್ಕೆ

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡು ಯುವಜನ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಟಿ.ಸಿ.ಶ್ರೀನಿವಾಸ್ ರವರ ಆದೇಶದಂತೆ, ಮಂಡ್ಯ ಜಿಲ್ಲಾ
ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ, ಜಿಲ್ಲಾಧ್ಯಕ್ಷರಾದ ಎಸ್.ರವಿ ರವರ ನೇತೃತ್ವದಲ್ಲಿ ಸಭೆ ನೆಡೆಸಲಾಯಿತು,
ಕರುನಾಡು ಯುವಜನ ವೇದಿಕೆ ಕೆ.ಆರ್.ಪೇಟೆ ತಾಲೋಕಿನಲ್ಲಿ ರಚನೆಯಾಗಿ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಯುವರಾಜ್ ರವರನ್ನು ಜಿಲ್ಲಾ ಉಪಾಧ್ಯಕ್ಷರಾಗಿ, ನೂತನ ತಾಲ್ಲೂಕು ಅಧ್ಯಕ್ಷರಾಗಿ ಶ್ಯಾಮ್ ಸುಂದರ್, ಕಾರ್ಯಾಧ್ಯಕ್ಷರಾಗಿ ಸುನೀಲ್ ಕುಮಾರ್ ಹಾಗೂ ಮಹಿಳಾ ತಾಲ್ಲೂಕು ಅಧ್ಯಕ್ಷರಾಗಿ ಧನಲಕ್ಷ್ಮಿ ರವರನ್ನು ಅಧಿಕೃತ ಜಿಲ್ಲಾಧ್ಯಕ್ಷರಾದ ಎಸ್.ರವಿ ರವರು ಆಯ್ಕೆ ಮಾಡಿದರು
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ.ರಾಜು ರವರು ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು ಸಾಮಾಜಿಕ ಕಾಳಜಿಯನ್ನು ಬೆಳೆಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಲು ಶ್ರಮಿಸಬೇಕೆಂದು ತಿಳಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಸೇರ್ಪಡೆಗೊಂಡ ಪದಾಧಿಕಾರಿಗಳಿಗೆ ಶುಭ ಕೋರಿದರು,
ಈ ಸಂದರ್ಭದಲ್ಲಿ ಕರುನಾಡು ಯುವಜನ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ.ರಾಜು, ನೂತನವಾಗಿ ಆಯ್ಕೆಯಾದ ಜಿಲ್ಲಾ ಉಪಾಧ್ಯಕ್ಷರಾದ ಯುವರಾಜ್,
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್,ನೂತನ ತಾಲ್ಲೋಕು ಅಧ್ಯಕ್ಷರಾದ ಶ್ಯಾಮ್ ಸುಂದರ್, ಮಹಿಳಾ ತಾಲ್ಲೂಕು ಅಧ್ಯಕ್ಷರಾದ ಧನಲಕ್ಷ್ಮೀ, ಕಾರ್ಯಾಧ್ಯಕ್ಷರಾದ ಸುನೀಲ್ ಕುಮಾರ್, ಸುಂದರೇಶ್, ಲಕ್ಷ್ಮೀ, ಯೋಗೇಶ್, ಪವನ್,ಶಶಿ ಕುಮಾರ್, ರಂಗನಾಥ್ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು
What's Your Reaction?






