ಕೆ.ಆರ್.ಪೇಟೆ:ರಾಜ್ಯ ರೈತರ ಹಿತಕಾಯಲು ಹಾಗೂ ರೈತರ ಜೀವನಾಡಿ ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ

ಕೆ.ಆರ್.ಪೇಟೆ:ರಾಜ್ಯ ರೈತರ ಹಿತಕಾಯಲು ಹಾಗೂ ರೈತರ ಜೀವನಾಡಿ ಕಾವೇರಿ ನದಿ ನೀರಿನ ಸಮಸ್ಯೆಗೆ  ಶಾಶ್ವತವಾಗಿ ಪರಿಹಾರ

ಕಾವೇರಿ ನದಿ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಾಣಲು ನಮ್ಮ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಕುಮಾರಣ್ಣ ರವರ ಕೈ ಬಲಪಡಿಸಿ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಬ್ಬರದ ಪ್ರಚಾರ ನಡೆಸಿದರು.*

ತಾಲೂಕಿನ ಬೂಕನಕೆರೆ, ಸೋಮನಹಳ್ಳಿ, ಅಲಂಬಾಡಿ ಕಾವಲ್, ಅಕ್ಕಿಹೆಬ್ಬಾಳು, ಬಿರುವಹಳ್ಳಿ ಗ್ರಾಮಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು ರಾಜ್ಯದಲ್ಲಿ ಮಂಡ್ಯ ಜಿಲ್ಲೆ ನಮ್ಮ ಜೆಡಿಎಸ್ ಪಕ್ಷಕ್ಕೆ ಅತಿ ಹೆಚ್ಚು ಶಕ್ತಿ ತುಂಬಿದ ಜಿಲ್ಲೆ,ಅದರಂತೆ ನಮ್ಮ ಕುಮಾರಣ್ಣನ ಅವರ ಮುಖ್ಯ ಮಂತ್ರಿ ಅಧಿಕಾರದ ಅವಧಿಯಲ್ಲಿ ರಾಜ್ಯ ರೈತರ ಹಿತಕಾಪಾಡಲು 25,000 ಕೋಟಿ ರೈತರ ಸಾಲ ಮನ್ನಾ ಮಾಡಿ ಸುದೀರ್ಘ ಬಡವರ ರೈತರ ಅಭಿವೃದ್ಧಿಗೆ ಕನಸು ಕಾಣುತ್ತಿರುವ ಹೃದಯವಂತ ನಮ್ಮ ಅಭ್ಯರ್ಥಿ ಕುಮಾರಣ್ಣ ರವರು ಸ್ಪರ್ಧಿಸಿದ್ದಾರೆ ಅವರ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಹಣವಂತ ಅಭ್ಯರ್ಥಿ ನಿಲ್ಲಿಸಿದ್ದಾರೆ ಜಿಲ್ಲೆಯ ಜನರೇ ತೀರ್ಮಾನ ಮಾಡಲಿ ರಾಜ್ಯ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕುಮಾರಣ್ಣನಂತಹ ಹೃದಯವಂತ ಬೇಕು ಅಥವಾ ರೈತರ ಸಮಸ್ಯೆಗಳನ್ನೇ ತಿಳಿಯದ ಹಣವಂತರು ಬೇಕಾ ಎಂದು. ಪ್ರಸ್ತುತವಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದಿವಾಳಿಯ ನಡೆಗೆ ಕೊಂಡೊಯ್ಯುತ್ತಿದೆ, ಸೂತ್ರವಿಲ್ಲದ ಗಾಳಿಪಟದಂತೆ ಐದು ಗ್ಯಾರಂಟಿಗಳನ್ನ ಮುಂದಿಟ್ಟು ಚುನಾವಣೆ ಮಾಡುತ್ತಿದ್ದಾರೆ.

ಚುನಾವಣೆಯಲ್ಲಿ ನಮಗೆ ಕೈ ಬಲಪಡಿಸದಿದ್ದರೆ ಗ್ಯಾರಂಟಿ ಮಾಯವಾಗುತ್ತದೆ ಎಂದು ಮತದಾರರಿಗೆ ಹೇಳಿಕೆ ನೀಡಿ ಮತ ಕೇಳುತ್ತಿದ್ದಾರೆ ಅದಕ್ಕೆ ಮರುಳಾಗದೆ ರೈತರ ಏಳಿಗೆಗೆ ಕನಸು ಕಾಣುವ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಮತ್ತು ನಮ್ಮ ಕುಮಾರಣ್ಣ ಅವರ ಜೋಡಿ ಮುಂದಿನ ದಿನಗಳಲ್ಲಿ ರಾಜ್ಯ ರೈತರ ಕನಸನ್ನ ನನಸು ಮಾಡಲು ಪ್ರಾಮಾಣಿಕವಾಗಿ ದುಡಿಯುತ್ತಾರೆ ಎಂದು ನಮ್ಮೆಲ್ಲರಿಗು ಬರವಸೆ ಇದೆ ನಮ್ಮ ಅಭ್ಯರ್ಥಿ ಕುಮಾರಣ್ಣ ಸ್ವಾರ್ಥಕ್ಕಾಗಿ ಮಂಡ್ಯದಲ್ಲಿ ಸ್ಪರ್ಧಿಸಿಲ್ಲ ಜಿಲ್ಲೆಯ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಹಾಗೂ ರಾಜ್ಯ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸ್ಪರ್ಧಿಸಿದ್ದಾರೆ. ನೀವು ನೀಡುವ ಮತ ಬರಿ ಸಂಸದರ ಸ್ಥಾನಕ್ಕಲ್ಲ ನಿಮ್ಮ ಹಿತ ಕಾಯಲು ವಿಶ್ವ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಒಂದು ಉನ್ನತ ಸಚಿವ ಸ್ಥಾನಕ್ಕೆ ಎಂದು ನೀವೆಲ್ಲರೂ ತಿಳಿದುಕೊಳ್ಳಬೇಕು. ಹಾಗಾಗಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿಮ್ಮ ಸೇವೆಗಾಗಿ ಬಂದಿರುವ ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಬೇಕು ಎಂದು ಮತಬೇಟೆ ನಡೆಸಿದರು.

ಶಾಸಕ ಹೆಚ್.ಟಿ ಮಂಜು ಕಾಂಗ್ರೆಸ್ ಪಕ್ಷದ ಐದು ಗ್ಯಾರೆಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳು ಸಂಪೂರ್ಣ ಕುಂಠಿತವಾಗಿವೆ.ಕೇಂದ್ರ ಸರ್ಕಾರ ನೀಡಿರುವ ಯೋಜನೆಗಳು ಇಲ್ಲದಿದ್ದರೆ ಗ್ರಾಮೀಣ ಪ್ರದೇಶದಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳು ಮರಿಚಿಕೆಯಾಗುತ್ತಿದೆ.ರೈತರು ಸದೃಢವಾಗಬೇಕೆಂದರೆ ನಮ್ಮ ಅಭ್ಯರ್ಥಿ ಕುಮಾರಣ್ಣರವರನ್ನ ನಿಮ್ಮ ಅಮೂಲ್ಯವಾದ ಮತ ಹಾಕುವ ಮೂಲಕ ಕೈ ಬಲಪಡಿಸಬೇಕು ದೇಶ ಉಳಿಯಬೇಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕು ಎಂದರು.

ಬಳಿಕ ಮಾತನಾಡಿದ ಮಾಜಿ ಸಚಿವ ಕೆ.ಸಿ ನಾರಾಯಣಗೌಡ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಹಾಗೂ ನಮ್ಮ ಅಭ್ಯರ್ಥಿ ಕುಮಾರಣ್ಣ ಕೇಂದ್ರ ಸಚಿವ ಆಗುವುದು ಅಷ್ಟೇ ಸತ್ಯ. ನನ್ನ ತಾಲೂಕಿನ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷ ತೊರದೆ ಆದರೆ ನನ್ನ ರಾಜಕೀಯ ಗುರು ಎಂದಿಗೂ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರವರು ಅವರ ಸಹಕಾರದಿಂದಲೇ ನನ್ನ ಆಡಳಿತ ಅವಧಿಯಲ್ಲಿ ನನ್ನ ತಾಲೂಕಿಗೆ ಕೈಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂಬುವ ತೃಪ್ತಿ ತಂದಿದೆ ಮುಂದೆಯೂ ಶಾಸಕ ಎಚ್.ಟಿ ಮಂಜು ರವರ ಜೊತೆಗೂಡಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುತ್ತೇನೆ. ನಮ್ಮ ಮೈತ್ರಿ ಅಭ್ಯರ್ಥಿ ಕುಮಾರಣ್ಣರವರ ಅಂತರದ ಗೆಲುವಿಗೆ ನಾವೆಲ್ಲರೂ ಸಹಕಾರಿಗಳಾಗಿ ನಿಲ್ಲಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್, ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ,ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ,ಮೂಡ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್,ರಾಜ್ಯ ಸಹಕಾರ ಮಾರಟ ಮಹಾಮಂಡಳಿ ನಿರ್ದೇಶಕ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ,ತಾ.ಪಂ ಮಾಜಿ ಸದಸ್ಯ ಬೂಕನಕೆರೆ ಹುಲ್ಲೆಗೌಡ,ಮಲ್ಲೇನಹಳ್ಳಿ ಮೋಹನ್,ರೂಪ ಕೃಷ್ಣಗೌಡ,ಜೆಡಿಎಸ್ ಕಾನೂನು ಘಟಕ ತಾಲೂಕು ಅಧ್ಯಕ್ಷ ವಿ.ಎಸ್ ಧನಂಜಯ್ ಕುಮಾರ್,ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್,ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್,ಮಾಜಿ ನಿರ್ದೇಶಕ ಹೆಚ್.ಟಿ ಲೋಕೇಶ್,ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಆನೆಗೊಳ ಕಿರಣ್ ಕುಮಾರ್,ಅಕ್ಕಿಹೆಬ್ಬಾಳು ರಘು,ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್,ರಾಜ್ಯ ಜೆಡಿಎಸ್ ವಕ್ತರ ಗದ್ದೆಹೊಸೂರು ಅಶ್ವಿನ್, ಬಿಜೆಪಿ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು ಮಹೇಶ್ ನಾಯಕ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು,ಪುರಸಭಾ ಸದಸ್ಯ ಗಿರೀಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸಿಂಗನಹಳ್ಳಿ ರವಿ, ಎಸ್ ಟಿ ಮೋರ್ಚ ತಾಲೂಕ್ ಅಧ್ಯಕ್ಷ ರಾಜು ಜಿ ಪಿ, ಓಬಿಸಿ ಮೋರ್ಚಾದ ತಾಲೂಕ ಅಧ್ಯಕ್ಷ ಹಾದನೂರ ಮಂಜು, ಯುವ ಮೋರ್ಚಾ ತಾಲೂಕು ಅಧ್ಯಕ್ಷ ರಾಜು, ಎಸ್ಸಿ ಮೋರ್ಚದ ಅಧ್ಯಕ್ಷ ಏಲಕ್ಕಯ್ಯ,ಜೆಡಿಎಸ್ ತಾಲೂಕು ಕಾರ್ಯಧ್ಯಕ್ಷ ರಾಮಚಂದ್ರು,ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ,ಮುಖಂಡರಾದ ಬಸವಲಿಂಗಪ್ಪ,ಪೂವನಹಳ್ಳಿ ರೇವಣ್ಣ,ವಿಠಲಪುರ ವಿ.ಡಿ ಮೋಹನ್,ಬಿರುವಳ್ಳಿ ಕುಮಾರ್,ಬೂಕನಕೆರೆ ಗ್ರಾ.ಪಂ ಅಧ್ಯಕ್ಷ ಶ್ಯಾಮ್ ಪ್ರಸಾದ್,ಯುವ ಮುಖಂಡರಾದ ದಯಾನಂದ, ಮೊದುರು ಮಂಜು,ಹೆಗ್ಗಡಹಳ್ಳಿ ಅಲೋಕ್ ಕುಮಾರ್,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಜೆಡಿಎಸ್ ಅಲ್ಪ ಸಂಖ್ಯಾತರ ಘಟಕದ ತಾಲೂಕು ಅಧ್ಯಕ್ಷ ತನ್ವಿರ್ ಪಾಷ,ಅಲೋಕ್ ಕುಮಾರ್,ಸಚಿನ್ ಕೃಷ್ಣ,ಸೇರಿದಂತೆ ಉಪಸ್ಥಿತರಿದ್ದರು.

 *ವರದಿ ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ* 

What's Your Reaction?

like

dislike

love

funny

angry

sad

wow