*ಕೆ.ಆರ್.ಪೇಟೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋದಿಸಿ ಬಂದ್*

*ಕೆ.ಆರ್.ಪೇಟೆ ತಮಿಳುನಾಡಿಗೆ  ಕಾವೇರಿ ನೀರು ಬಿಡುಗಡೆ ವಿರೋದಿಸಿ ಬಂದ್*

*ಕೆ.ಆರ್.ಪೇಟೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋದಿಸಿ ಬಂದ್*

 ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ ಅಂಗವಾಗಿ ತಾಲ್ಲೂಕಿನ ವಿವಿಧ ಕನ್ನಡಪರ ಸಂಘಟನೆಗಳು ಕೆ.ಆರ್‌ಪೇಟೆ ಪಟ್ಟಣದಲ್ಲಿ ಸೆ.26ರಂದು ಮಂಗಳವಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ಮತ್ತೆ ಬಂದ್ ಮಾಡಿದರೆ ತೋಂದರೆಯಾಗುತ್ತದೆ ಎಂದು ‌ನಿರ್ಧರಿಸಿ ಇಂದು ನಡೆದ ಬಂದ್ ನೈತಿಕ ಬೆಂಬಲ ಘೋಷಿಸಿ, ಬಂಡಿಹೊಳೆ ಸಮೀಪ ಇರುವ ಹೇಮಾವತಿ ಅಣೆಕಟ್ಟೆ ಬಳಿ ಧರಣಿ ನಡೆಸಿ ಹೇಮಾವತಿ ನದಿಗೆ ಪೂಜೆ ಮಾಡುವ ಮೂಲಕ ಸರ್ಕಾರದ ವಿರುದ್ದ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು.

 ಬಂಡಿಹೊಳೆ ಯಿಂದ ತಾಲ್ಲೂಕು ಕಚೇರಿ ವರೆಗೆ ಬೈಕ್ ರಾಲಿ ನಡೆಸಿ ತಹಸೀಲ್ದಾರ್ ನಿಸರ್ಗ ಪ್ರಿಯ ಅವರಿಗೆ ಮನವಿ ಸಲ್ಲಿಸಿದರು.

  ಪ್ರತಿಭಟನೆಯಲ್ಲಿ ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷ ಸಮೀರ್, ಜಿಲ್ಲಾ ಉಪಾಧ್ಯಕ್ಷ ಎ.ಸಿ.ಕಾಂತರಾಜು, ಕಾನೂನು ಘಟಕದ ಅಧ್ಯಕ್ಷ ಆರ್.ಎಂ.ದೇವಾನಂದ್, ಮಹಿಳಾ ಘಟಕದ ಅಧ್ಯಕ್ಷೆ ಮಧುಶ್ರೀ, ಪದವೀಧರ ವಿದ್ಯಾರ್ಥಿ ಘಟಕದ ಅಧ್ಯಕ್ಷ ಅನುವಿನಕಟ್ಟೆ ಸೋಮು, ಆಟೋ ಘಟಕದ ಜಾವಿದ್, ಕಾರ್ಮಿಕ ಘಟಕದ ದಯಾನಂದರಾವ್, ತಾಲ್ಲೂಕು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ ಪ್ರಶಾತ್, ಉಪಾಧ್ಯಕ್ಷ ಪೃಥ್ವಿ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಎಚ್.ಎನ್.ಅರವಿಂದ್, ಉಪಾಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ಪವನ್, ಸಂಘಟನಾ ಕಾರ್ಯದರ್ಶಿ ಕುಪ್ಪಹಳ್ಳಿ ಮ‌ನು, ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಹೆಚ್.ಆರ್

ಸೋಮಶೇಖರ್, ಕಾರ್ಯಾಧ್ಯಕ್ಷ ಎಸ್.ರವಿ, ಉಪಾಧ್ಯಕ್ಷರಾದ ಯುವರಾಜ್, ಅನುವಿನಕಟ್ಟೆ ಆನಂದ್, ಮನು, ಶಂಕರ್, ಯೋಗೇಶ್, ದಿನೇಶ್, ವಸಂತ್, ಕರ್ನಾಟಕ ಭೀಮ್ ಸೇನೆ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಶ್ಯಾರಹಳ್ಳಿ ಗೋವಿಂದರಾಜು,ಕಾರ್ಯದರ್ಶಿ ಸಾಯಿಕುಮಾರ್, ತಾಲ್ಲೂಕು ಆಸರೆ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ಕಾರ್ಯದರ್ಶಿ ಮುರುಗೇಶ್ , ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆರ್.ಶ್ರೀನಿವಾಸ್ ಸೇರಿದಂತೆ ವಿವಿಧ ಸಂಘಟನೆಯ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಬಾಗವಹಿಸಿದ್ದರು.

ಕರ್ನಾಟಕದಲ್ಲಿ ತೀವ್ರ ಬರಗಾಲ ಕಾಡುತ್ತಿದೆ. ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಉಂಟಾಗಿದೆ. ಈ ಸಂದರ್ಭದಲ್ಲಿ ಹನಿ ನೀರನ್ನು ತಮಿಳುನಾಡಿಗೆ ಬಿಡಬಾರದು. ಕಾವೇರಿ ಪ್ರಾಂತ್ಯದಲ್ಲಿ ವ್ಯಾಪಕ ಮಳೆಯಾದರೆ ಮಾತ್ರ ನೀರು ಬಿಡುತ್ತೇವೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬ ದಿಟ್ಟ ನಿರ್ಧಾರವನ್ನು ಕರ್ನಾಟಕ ಸರ್ಕಾರ ತೆಗೆದುಕೊಳ್ಳಬೇಕು. ನಮಗೆ ಕುಡಿಯುವ ನೀರಿಗೇ ತೀವ್ರ ಹಾಹಾಕಾರ ಉಂಟಾಗಿರುವ ಈ ಸಂದರ್ಭದಲ್ಲಿ ತಮಿಳುನಾಡಿಗೆ ಕುರುವೈ‌ ಮೂರನೇ ಬೆಳೆಗೆ ನೀರು ಕೇಳುತ್ತಿರುವುದು ಅಮಾನವೀಯ ವರ್ತನೆಯಾಗಿದೆ. ಹಾಗಾಗಿ ಈ ಸಂದರ್ಭದಲ್ಲಿ ಸುಪ್ರಿಂ ಕೋರ್ಟ್ ಹಾಗೂ ಕಾವೇರಿ ಪ್ರಾಧಿಕಾರದ ಆದೇಶವನ್ನು ಉಲ್ಲಂಘನೆ ಮಾಡಿದರೆ ಯಾವುದೇ ತಪ್ಪು ಆಗುವುದಿಲ್ಲ. ತಮಿಳುನಾಡಿಗೆ ಬಿಡುವ ನೀರನ್ನು ಹೇಮಾವತಿ, ಕಾವೇರಿ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಹರಿಸಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯ ಮಾಡಿದರು.

ಕನ್ನಡಿಗ ವಕೀಲರ ನೇಮಕಕ್ಕೆ ಆಗ್ರಹ: 

ಕಾವೇರಿ ನದಿ ನೀರು ವಿವಾದದ ಪರವಾಗಿ ಕರ್ನಾಟಕ ರಾಜ್ಯದ ಪರವಾಗಿ ಸುಪ್ರಿಂ ಕೋರ್ಟ್ ಹಾಗು ನೀರಾವರಿ ಪ್ರಾಧಿಕಾರದ ಮುಂದೆ ವಾದ ಮಂಡಿಸಲು ತಮಿಳುನಾಡು ಅಥವಾ ಪಾಂಡಿಚೇರಿ ಮೂಲದ ವಕೀಲರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿರುವುದು ಕುರಿ ಕಾಯಲು ತೋಳವನ್ನು ಬಿಟ್ಟಂತೆ ಆಗಿದೆ. ಹಾಗಾಗಿ ಕರ್ನಾಟಕ ಸರ್ಕಾರವು ಕರ್ನಾಟಕ ಮೂಲದ ವಕೀಲರನ್ನು ನೇಮಕ‌ ಮಾಡಿದರೆ ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನ್ಯಾಯ ಸಿಗಲಿದೆ. ಇಲ್ಲದಿದ್ದರೆ ಇನ್ನೂ 50ವರ್ಷಗಳು ಕಳೆದರೂ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇರುತ್ತದೆ ಹಾಗಾಗಿ ಕರ್ನಾಟಕದ ವಕೀಲರನ್ನು‌ ನೇಮಕ‌ ಮಾಡಿ ಸಮರ್ಥ ವಾದ ಮಂಡನೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.

 *ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow