ಚನ್ನರಾಯಪಟ್ಟಣದಲ್ಲಿ 26 ಸಾಧಕರಿಗೆ ಸನ್ಮಾನದ ಗೌರವ

ಚನ್ನರಾಯಪಟ್ಟಣದಲ್ಲಿ 26 ಸಾಧಕರಿಗೆ ಸನ್ಮಾನದ ಗೌರವ

ಚನ್ನರಾಯಪಟ್ಟಣ: ತಾಲ್ಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ತಾಲ್ಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಭಾರತದ 75ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.

ತಹಸೀಲ್ದಾರ್ ಹಾಗೂ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಬಿ.ಎಂ.ಗೋವಿಂದರಾಜು, ಧ್ವಜಾರೋಹಣ ನೆರವೇರಿಸಿದರು. ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.ಪೊಲೀಸ್, ಎನ್‌ಸಿಸಿ, ಸೈಟ್ ಮತ್ತು ಗೈಡ್ಸ್, ಗ್ರಹರಕ್ಷಕ ದಳ ಶಾಲಾ ಮಕ್ಕಳು ನಡೆಸಿಕೊಟ್ಟ ಆಕರ್ಷಕ ಪಥಸಂಚಲನ ವೀಕ್ಷಿಸಿ, ಅವರಿಂದ ಗೌರವ ವಂದನೆ ಸ್ವೀಕರಿಸಿದರು. ತಾಲ್ಲೂಕು ಬರಗಾಲದಿಂದ ತತ್ತರಿಸಿದ್ದು, ಕ್ಷೇತ್ರದ ರೈತರನ್ನು ಉಳಿಸುವ ನಿಟ್ಟಿನಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಕೆಲಸ ಮಾಡಿದ ಪರಿಣಾಮ ತಾಲೂಕಿನ 100ಕ್ಕೂ ಹೆಚ್ಚು ಕೆರೆ, ಕಟ್ಟೆಗಳನ್ನು ತುಂಬಿಸುವ ಮೂಲಕ ಶೇ. 90 ರಷ್ಟು ನೀರಾವರಿಯನ್ನು ಕಲ್ಪಿಸುವ ಮೂಲಕ ಕೃಷಿಕರ ಬದುಕಿಗೆ ನೆರವಾಗುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 26 ಸಾಧಕರಿಗೆ ತಾಲ್ಲೂಕು, ಆಡಳಿತ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲೆಗಳ ಮಕ್ಕಳು, ಪೊಲೀಸ್,ಸೈಟ್ ಮತ್ತು ಗೈಡ್ಸ್, ಭಾರತ ಸೇವಾದಳ, ಗೃಹ ರಕ್ಷಕ ದಳ ಆಕರ್ಷಕ ಪಥ ಸಂಚಲನ ನಡೆಸಿದರು. ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳು ದೇಶಪ್ರೇಮ ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಸಕರಾದ ಸಿಎನ್ ಬಾಲಕೃಷ್ಣ, ತಾಲೂಕು ದಂಡಾಧಿಕಾರಿ ಬಿಎಂ ಗೋವಿಂದರಾಜು, ತಾಲೂಕು ಪಂಚಾಯಿತಿ ಇಓ ಹರೀಶ್, ಆರಕ್ಷಕ ಉಪ ಅಧೀಕ್ಷಕರಾದ ರವಿಪ್ರಸಾದ್, ಪುರಸಭಾ ಮುಖ್ಯ ಅಧಿಕಾರಿ ಹೇಮಂತ್,ಪುರಸಭಾ ಸದಸ್ಯರಾದ ಲಕ್ಷ್ಮಿ ವೆಂಕಟೇಶ್, ಬನಶಂಕರಿ ರಘು, ರಾಣಿಕೃಷ್ಣ, ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎನ್.ದೀಪ, ಸಮನ್ವಯ ಅಧಿಕಾರಿ ಕೆ.ಎನ್. ಅನಿಲ್ ಆರಕ್ಷಕ ವೃತ್ತ ನಿರೀಕ್ಷಕರಾದ ಕೆಎಮ್ ವಸಂತ್, ಆರಕ್ಷಕ ಉಪ ನಿರೀಕ್ಷಕರಾದ ಸಂತೋಷ್ ಕುಮಾರ್, ಭರತ್ ಕುಮಾರ್ ರೆಡ್ಡಿ, ಅಶ್ವಿನಿ ನಾಯಕ್, ಟಿಎಪಿಸಿಎಂಎಸ್ ನ ಅಧ್ಯಕ್ಷ ನಂಜಪ್ಪ, ನಿರ್ದೇಶಕ ಅನಿಲ್ ಮರಗೂರು, ಲೋಕೇಶ್, ಆನಂದ್ ಕಾಳೆನಹಳ್ಳಿ, ಟಿ ಮಂಜಪ್ಪ, ಜಲೇಂದ್ರ,ಸೇರಿದಂತೆ ಇತರರು ಹಾಜರಿದ್ದ

ರು.

What's Your Reaction?

like

dislike

love

funny

angry

sad

wow