*_ಕರುನಾಡು ಯುವಜನ ವೇದಿಕೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಅಪ್ಪು ಪುತ್ಥಳಿಗೆ ಮಾಲಾರ್ಪಣೆ
*_ಕರುನಾಡು ಯುವಜನ ವೇದಿಕೆ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಅಪ್ಪು ಪುತ್ಥಳಿಗೆ ಮಾಲಾರ್ಪಣೆ...!!!_*
_ಕೃಷ್ಣರಾಜಪೇಟೆ ಪಟ್ಟಣದ ಟಿ.ಬಿ ಸರ್ಕಲ್ ನ ವೃತ್ತದಲ್ಲಿರುವ ಡಾ. ಪುನೀತ್ ರಾಜ್ ಕುಮಾರ್ ರವರ ಪುತ್ಥಳಿಗೆ ಮಂಡ್ಯ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ. ಮಂಜುನಾಥ್, ಹಾಗೂ ಜಿಲ್ಲಾಧ್ಯಕ್ಷರಾದ ರವಿ.ಎಸ್. ಹೊನ್ನೇನಹಳ್ಳಿ ಹಾಗೂ ತಾಲ್ಲೂಕು ಅಧ್ಯಕ್ಷರಾದ ಯುವರಾಜ್ (ಮನು) ರವರ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು,_
_ನಂತರ ಮಾತನಾಡಿದ ಮಂಡ್ಯ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರು ಇದೇ ತಿಂಗಳು 2.10.2023 ರಂದು ಪುನೀತ್ ರಾಜ್ ಕುಮಾರ್ ರವರ ಧರ್ಮಪತ್ನಿಯವರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಪುತ್ಥಳಿ ಅನಾವರಣಗೊಂಡಿತ್ತು ತುಂಬಾ ಸಂತೋಷದ ವಿಷಯ ಅದರಲ್ಲೂ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿರುವ ಅಪ್ಪು ಯುವ ಸಾಮ್ರಾಜ್ಯ ಸಮಿತಿಯ ಅಧ್ಯಕ್ಷ ಕೆ.ಎಲ್. ಮಹೇಶ್ ರವರಿಗೆ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರ ನೀಡಿ ಗೌರವಿಸಿ ಸಮಿತಿಯ ಪದಾಧಿಕಾರಿಗಳಿಗೆ ಶುಭ ಹಾರೈಸಿದರು,_
_ಇದೇ ಸಂದರ್ಭದಲ್ಲಿ ಕೃಷ್ಣರಾಜಪೇಟೆ ತಾಲೂಕು ಅಧ್ಯಕ್ಷರಾದ ಹೊನ್ನೇನಹಳ್ಳಿ ಯುವರಾಜ್. (ಮನು) ಲೋಕೇಶ್. ವಿ, ಮಂಡ್ಯ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಸಾಯಿಕುಮಾರ್. ಎನ್. ಕೆ, ಹೇಮಂತ್. ಜಿ.ಸಿ, ರವಿ. ಬಿ, ಮೋಹನ್. ಎಸ್, ಶಾಮ್ ಸುಂದರ್, ಸುದೀಪ್, ದಿನೇಶ್, ಭಾವಾಜಿ ಚಂದ್ರು, ಟೈಲರ್ ಮಂಜಣ್ಣ ಸ್ವಾಮಚಾರ್, ಸುಂದರೇಶ್, ಅಪ್ಪು ಯುವ ಸಾಮ್ರಾಜ್ಯ ಸಮಿತಿಯ ಪದಾಧಿಕಾರಿಗಳು ಹಾಗೂ ಪುನೀತ್ ರಾಜಕುಮಾರ್ ರವರ ಅಭಿಮಾನಿಗಳು ಉಪಸ್ಥಿತರಿದ್ದರು,_
What's Your Reaction?