ಹರಸಾಹಸ ಪಟ್ಟು 50 ಅಡಿ ಕಂದಕದಿಂದ ಸಿಪಿ ಯೋಗೇಶ್ವರ್ ಬಾವ ಶವ ಮಹಾದೇವಯ್ಯ ಶವ ಹೊರಕ್ಕೆ
ಚಾಮರಾಜನಗರ: ಎಂಎಲ್ಸಿ ಸಿಪಿ ಯೋಗೇಶ್ವರ್ ರವರ ಭಾವ ಮಹಾದೇವಯ್ಯ ಶವವನ್ನು ಸತತ ಕಾರ್ಯಾಚರಣೆ ನಡೆಸಿ ಮೇಲಕ್ಕೆ ಎತ್ತಿದ್ದಾರೆ. ಹನೂರು ತಾಲೂಕಿನ ರಾಮಾಪುರದಿಂದ 6 ಕಿಮೀ ದೂರದ 50 ಅಡಿಗೂ ಅಧಿಕ ಕಂದಕದಲ್ಲಿ ಹಂತಕರು ಶವವನ್ನು ಟಾರ್ಪಾಲ್,
ಬೆಡ್ ಶೀಟ್ ಹಾಕಿ ಮುಚ್ಚಿಟ್ಟಿದ್ದರು. ಬೆರಳಚ್ಚು ತಜ್ಞರು ಹಾಗೂ ಇನ್ನಿತರ ತಜ್ಞರು ಬಂದು ಸ್ಥಳ ಮಹಜರು ನಡೆಸಿ ಸಾಕ್ಷ್ಯಾಧಾರ ಕಲೆ ಹಾಕಿದ ಬಳಿಕ ಪೊಲೀಸರು ಹರಸಾಹಸ ಪಟ್ಟು ಶವವನ್ನು ಮೇಲಕ್ಕೆ ಎತ್ತಿದ್ದಾರೆ. ಬಿಡದಿ ಸಮೀಪದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ
ಶವ ರವಾನೆ ಮಾಡಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು ಹಾಗೂ ಪ್ರಕರಣ ದಾಖಲಾಗಿರುವುದರಿಂದ ಮುಂದಿನ ತನಿಖೆಯನ್ನು ರಾಮನಗರ ಪೊಲೀಸರೇ ಕೈಗೊಳ್ಳಲಿದ್ದಾರೆ.
What's Your Reaction?