ಕೆ.ಆರ್.ಪೇಟೆ:ವಿದ್ಯಾರ್ಥಿಗಳು ಉತ್ತಮ್ಮ ಶಿಕ್ಷಣದ ಜೊತೆಗೆ ಸಿಕ್ಕ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ತಮ್ಮೊಳಗಿರುವ ಪ್ರತಿಭೆಯನ್ನು ಹೊರಹಾಕಿದರೆ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ ಹರಿಚಂರಣ್ ತಿಲಕ್ ತಿಳಿಸಿದರು.

ಕೆ.ಆರ್.ಪೇಟೆ:ವಿದ್ಯಾರ್ಥಿಗಳು  ಉತ್ತಮ್ಮ ಶಿಕ್ಷಣದ ಜೊತೆಗೆ ಸಿಕ್ಕ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡು ತಮ್ಮೊಳಗಿರುವ ಪ್ರತಿಭೆಯನ್ನು ಹೊರಹಾಕಿದರೆ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದು ನಿವೃತ್ತ ಉಪನ್ಯಾಸಕ ಹರಿಚಂರಣ್ ತಿಲಕ್ ತಿಳಿಸಿದರು.

ತಾಲೂಕಿನ ಕಿಕ್ಕೇರಿ ಹೋಬಳಿಯ ಆನೆಗೊಳದಲ್ಲಿರುವ ಹೇಮಗಿರಿ ಬಿಜಿಎಸ್ ಶಾಖಾಮಠ ವ್ಯಾಪ್ತಿಯಗೆ ಬರುವ ಶ್ರೀ ಆದಿಚುಂಚನಗಿರಿ ಪ್ರೌಢ ಶಾಲಾ ಆವರಣದಲ್ಲಿ ಭೈರವೈಕ್ಯ ಜಗದ್ಗುರು ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ 80ನೇ ವರ್ಷದ ಜಯಂತೋತ್ಸವ ಹಾಗೂ 11ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಹೇಮಗಿರಿ ಬಿಜಿಎಸ್ ಶಾಖಾಮಠದ ಪ್ರಧಾನ ಕಾರ್ಯದರ್ಶಿ ಡಾ:ಜೆ.ಎನ್ ರಾಮಕೃಷ್ಣೇಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಚಿಣ್ಣರ ಜಾಣರ ಜಗುಲಿ ಹರಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದವರು.ಬಿಜಿಎಸ್ ಎಂದರೆ ನೆನಪಾಗುವೆದೆ ಗುಣ್ಣಮಟ್ಟದ ಶಿಕ್ಷಣ ದೊಂದಿಗೆ ಸಂಸ್ಕೃತಿಯ ತುಂಬಿರುವ ಎಂದು ಕಣಜ ಬಿಂಬಿತವಾಗಿರುವ ಒಂದು ಬ್ರಹತ್ ವಿದ್ಯಾ ಸಂಸ್ಥೆ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಮೊದಲು ವ್ಯಕ್ತಿಗಳಾಗಿ ರೂಪುಗೊಳ್ಳಿ ನಂತರ ಐಎಎಸ್ ಹಾಗೂ ಐಪಿಎಸ್‌ನಂತ ಉನ್ನತ ಹುದ್ದೆಗೆ ಹೋಗಬಹುದು.ಮನುಷ್ಯನಿಗೆ ಉತ್ತಮ ಸಂಸ್ಕಾರ ಮುಖ್ಯ ಒಳ್ಳೆಯ ಸಂಸ್ಕಾರವಿರುವ ವ್ಯಕ್ತಿಗೆ ಸಮಾಜದಲ್ಲಿ ಒಳ್ಳೆಯ

 ಗೌರವಸಿಗುತ್ತದೆ, ವಿದ್ಯಾರ್ಥಿಗಳು ವಿದ್ಯೆಯ ಜತೆಗೆ ಒಳ್ಳೆಯ ಮಾರ್ಗದರ್ಶನವನ್ನು ಕೂಡ ಪಡೆಯಬೇಕು,ನಮ್ಮ ದೇಶದಲ್ಲಿ ಜನಸಂಖ್ಯೆ ಮಾತ್ರ ಬೆಳೆಯುತ್ತಾ ಹೋಗುತ್ತಿದೆ.ಆದರೆ ದೇಶದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಈ ಬಗ್ಗೆ ಅರಿತು ಸಾಧನೆ ಮಾಡುವ ಕಡೆಗೆ ಯೋಜನೆ ಮಾಡುವುದು ಒಳ್ಳೆಯದು,ನಮ್ಮದೇಶದ ವಿದ್ಯಾರ್ಥಿಗಳು ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಆ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಪರಿಚಯವಾಗುವಷ್ಟು ಎತ್ತರಕ್ಕೆ ಬೆಳೆಯುವ ಮೂಲಕ ಭಾತರ ದೇಶದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸುವಂತೆ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ:ಜೆ.ಎನ್ ರಾಮಕೃಷ್ಣೇಗೌಡ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಸಾಧಕರ ಹಾದಿಗಳ ಕನಸು ಹೊಂದಿದರೆ ಸಾಲದು ಕನಸಿನ ಈಡೇರಿಕೆಗೆ ತಕ್ಕ ಶೈಕ್ಷಣಿಕ ಶ್ರಮವಹಿಸಿ ತಮ್ಮ ಪೋಷಕರನ್ನು ಗೌರವಿಸಿ,ಉನ್ನತ ಕನಸು ಹೊಂದುವ ವಿದ್ಯಾರ್ಥಿಗಳು ಕನಸಿನ ಜೊತೆಗೆ ಶ್ರಮದ ಅಭ್ಯಾಸ ನಡೆಸಬೇಕು. ಆ ಮೂಲಕ ಕಲಿಕೆಗೆ ಹೆಚ್ಚು ಒತ್ತು ನೀಡುತ್ತ ಗ್ರಾಮೀಣ ಪ್ರದೇಶದ ಮಕ್ಕಳು ಇಂತಹ ಉತ್ತಮ ವೇದಿಕೆ ಸದುಪಯೋಗ ಪಡೆದು ಪ್ರತಿಭಾವಂತರಾಗಬೇಕು ಎಂದರು.

ಸದೃಢ ಸಮಾಜಕ್ಕೆ ಹಣ ಮುಖ್ಯನೋ ಗುಣ ಮುಖ್ಯನೋ ಎಂಬ ವಿಷಯ ಕುರಿತ ಚಿಣ್ಣರ ಜಾಣರ ಜಗುಲಿ ಎಂಬ ಹರಟೆ ಕಾರ್ಯಕ್ರಮದಲ್ಲಿ ಚಿಣ್ಣರು ತಮ್ಮ ಪ್ರತಿಭೆ ಹೊರಹಾಕಿ ಪ್ರೇಕ್ಷಕರ ಮನಗೆದ್ದರು.

ಈ ಸಂದರ್ಭದಲ್ಲಿ ಹೇಮಾವತಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಬೋಳಮಾರನಹಳ್ಳಿ ಮಂಜುನಾಥ್,ಗ್ರಾಮದ ಮುಖಂಡ ಶ್ರೀನಿವಾಸ್ ಗ್ರಾ.ಪಂ ಸದಸ್ಯ ನಂಜೇಶ್, ಹೇಮಾವತಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಆನೆಗೊಳ ಮಂಜುನಾಥ್,ಆನೆಗೋಳ ಶ್ರೀ ಆದಿಚುಂಚನಗಿರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸಿ.ಪಿ ಪುರುಷೋತ್ತಮ್, ಸಹ ಶಿಕ್ಷಕರಾದ ಪ್ರಕಾಶ್, ಎಸ್.ಪಿ ಮಂಜುನಾಥ್,ಹೇಮಗಿರಿ ಬಿಜಿಎಸ್ ಶಾಲಾ ಪ್ರಾಂಶುಪಾಲ ರವಿ ಕುಮಾರ್ ಶಂಕರೇಗೌಡ, ನಿವೃತ್ತ ಶಿಕ್ಷಕ ದೇವರಾಜೇಗೌಡ,ಪಾಂಡುಪುರ ರೋಹಿತ್, ಚನ್ನರಾಯಪಟ್ಟಣ ಶಿವರಾಜು, ಸತ್ಯರಾಜು,ನರಸಿಂಹಮೂರ್ತಿ ಸೇರಿದಂತೆ ಉಪಸ್ಥಿತರು ಭಾಗವಹಿಸಿದರು.

*ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow