ಮಂಡ್ಯ ವಿ.ಸಿ.ಫಾರಂ ನಲ್ಲಿ ವಿಶ್ವ ಮಣ್ಣು ಆರೋಗ್ಯ ದಿನ ಕಾರ್ಯಕ್ರಮ.

ಮಂಡ್ಯ ವಿ.ಸಿ.ಫಾರಂ ನಲ್ಲಿ ವಿಶ್ವ ಮಣ್ಣು ಆರೋಗ್ಯ ದಿನ ಕಾರ್ಯಕ್ರಮ.

ಕೃಷಿ ವಿಜ್ಞಾನ ಕೇಂದ್ರ ವಿ ಸಿ ಫಾರಂ ಮಂಡ್ಯ ವತಿಯಿಂದ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಕೃಷಿ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾಕ್ಟರ್ ವಿ ಎಲ್ ಮಧುಪ್ರಸಾದ್ ವಿಸ್ತೀರ್ಣ ನಿರ್ದೇಶಕರು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಣ್ಣು ಮತ್ತು ನೀರು ಎರಡು ಪ್ರಮುಖ ನೈಸರ್ಗಿಕ ಸಂಪನ್ಮೂಲ ಇವುಗಳ ದಕ್ಷ ಬಳಕೆ ಮತ್ತು ಸಂರಕ್ಷಣೆ ಮಾಡುವುದಕ್ಕಾಗಿ ನಾವೆಲ್ಲರೂ ಕೈಜೋಡಿಸಿ ಕೆಲಸ ಮಾಡಬೇಕೆಂದು ತಿಳಿಸಿದರು.

 ಕಾರ್ಯಕ್ರಮದ ಉದ್ಘಾಟನೆಯನ್ನು ಆಕಾಶವಾಣಿ ನಿರ್ದೇಶಕರಾದ ಶ್ರೀ ಕೇಶವಮೂರ್ತಿಯವರು ಮಾಡಿ ಕೇವಲ ನಮ್ಮ ದೇಶದಲ್ಲಿ ಮಾತ್ರ ಭೂಮಿಯನ್ನು ತಾಯಿಯನ್ನು ಪೂಜಿಸುವ ಪದ್ಧತಿ ಇದೆ ಎಂದು ತಿಳಿಸುತ್ತಾ ಅದರ ಉತ್ತಮ ನಿರ್ವಹಣೆ ಮುಖ್ಯವೆಂದು ತಿಳಿಸಿದರು.

 ನಂತರ ಕಾರ್ಯಕ್ರಮದಲ್ಲಿ ಡಾಕ್ಟರ್ ಆತಿಫಾ ಮುನವ್ವರಿ(ಮಣ್ಣು ವಿಜ್ಞಾನ) ಇವರು ಮಾತನಾಡಿ ವಿಶ್ವ ಮಣ್ಣು ಆರೋಗ್ಯ ದಿನದ 2023ರ ಘೋಷವಾಕ್ಯ ಮಣ್ಣು ಮತ್ತು ನೀರು ನಮ್ಮ ಜೀವನದ ಮೂಲ ಪ್ರತಿ ಜೀವಸಂಕುಲಕ್ಕೂ ಅತ್ಯವಶ್ಯಕ ಮಣ್ಣಿನಲ್ಲಿ ಸಾವಯುವ ಅಂಶದ ತಿಳಿಸಿ ರೈತರು ಮಣ್ಣಿನ ಆರೋಗ್ಯ ಸುಧಾರಣೆಯಲ್ಲಿ ಅಳವಡಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಸಾಕಷ್ಟು ಪದಾರ್ಥಗಳನ್ನು ಸೇರಿಸಿ ಮಣ್ಣಿನಲ್ಲಿನ ಜೀವವೈವಿಧ್ಯತೆಯನ್ನು ಸಂರಕ್ಷಿಸಬೇಕು ಉತ್ತಮ ಆರೋಗ್ಯವಂತ ಮಣ್ಣು ಇದ್ದಲ್ಲಿ ರೈತರು ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಯಶಸ್ಸು ಕಾಣಬಹುದು. ಹಾಗೂ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಜೀವನವನ್ನು ನೀಡಬಹುದು ಎಂದು ರೈತರಿಗೆ ಮಾಹಿತಿಯನ್ನು ನೀಡಿದರು.

 ಡಾಕ್ಟರ್ ನರೇಶ್ ಎನ್. ಟಿ. ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಮಣ್ಣಿಗೆ ಸಾಕಷ್ಟು ಸಾವಯವ ಸೇರಿಸಿ ಮತ್ತು ಆರೋಗ್ಯವಂತ ಮಣ್ಣು ಮತ್ತು ಸಮಗ್ರ ಬೆಳೆ ನಿರ್ವಹಣೆ ಇದ್ದಲ್ಲಿ ಕೃಷಿಯಲ್ಲಿ ಸುಸ್ಥಿರತೆಯನ್ನು ಕಾಣಬಹುದು ಎಂದು ತಿಳಿಸಿದರು.

 ಡಾಕ್ಟರ್ ಕಮಲಾಭಾಯಿ ಕೂಡಗಿ ವಿಜ್ಞಾನಿ (ಗೃಹ ವಿಜ್ಞಾನ )ರವರು ಮಣ್ಣಿನ ಆರೋಗ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದಲ್ಲಿ ಮನುಷ್ಯನ ಆರೋಗ್ಯ ಕೂಡ ಉತ್ತಮವಾಗಿರುವುದು ಎಂದು ಮಾಹಿತಿ ನೀಡಿದರು.

 ರೈತರದ ಬಸವರಾಜು. ಜೆ. ಕೆ. ಜಯಪುರ ಮಣ್ಣಿನ ಮಹತ್ವದ ಬಗ್ಗೆ ಬರೆದಂತಹ ಕವನವನ್ನು ಓದಿ ರೈತರು ಮಣ್ಣಿನ ಆರೋಗ್ಯದ ದೃಷ್ಟಿಯಿಂದ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಸುರೇಶ್,( ಕೃಷಿ ವಿಸ್ತರಣೆ ವಿಜ್ಞಾನಿ), ಡಾ. ರೇಖಾ.ಬಿ.(ಬೇಸಾಯ ಶಾಸ್ತ್ರ ), ಮತ್ತು ಡಾ. ಮಹೇಶ್. ಹೆಚ್. ಎಂ. ಹಿರಿಯ ತಾಂತ್ರಿಕ ಅಧಿಕಾರಿ, ಮಂಡ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕರು ನವೀನ್ ಕುಮಾರ್, ಪ್ರಗತಿ ಪರ ರೈತರು ರಾಜೇಗೌಡ, ಹಾಗೂ ರೈತರು /ರೈತ ಮಹಿಳೆಯರು ಹಾಜರಿದ್ದರು.

What's Your Reaction?

like

dislike

love

funny

angry

sad

wow