ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎನ್ನುವ ಸಂಕಲ್ಪವನ್ನು ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳು ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಸಂಕಲ್ಪ ಮಾಡಿದರು

ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎನ್ನುವ ಸಂಕಲ್ಪವನ್ನು ಕೃಷ್ಣರಾಜಪೇಟೆ ತಾಲೂಕು ಬಿಜೆಪಿ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳು ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಸಂಕಲ್ಪ ಮಾಡಿದರು

ಇಂದು ಕೆ ಆರ್ ಪೇಟೆ ತಾಲೂಕಿನ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ ಮತ್ತೊಮ್ಮೆ ಮೋದಿ ಎಂಬ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರು, ಮಂಡಲ ಪದಾಧಿಕಾರಿಗಳು ಮತ್ತು ವಿವಿಧ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು. ಮಹಾಶಕ್ತಿ ಕೇಂದ್ರದ ಅಧ್ಯಕ್ಷರು, ಜಿಲ್ಲಾ ವಿಸ್ತಾರಕಾರಕರಾದ ಚಿರಾಗ್ ರವರು, ತಾಲೂಕು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪರಮೇಶ್ ಅರವಿಂದ್ ರವರು

ಮತ್ತು ತಾಲೂಕು ವಿಸ್ತಾರಕರಾದ ರಾಜಶೇಖರ್ ರವರು , ಅಧ್ಯಕ್ಷರಾದ ಸಾರಂಗಿ ನಾಗಣ್ಣನವರ ಅಧ್ಯಕ್ಷತೆಯಲ್ಲಿ ಸಭೆ ಯಶಸ್ವಿಯಾಯಿತು ಈ ಸಂದರ್ಭ ವಿಸ್ತರಕರಾದ ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್,ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿಗಳಾದ ವಾಸು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗೇ ಗೌಡರು,ತಾಲೂಕ್ ಪ್ರಧಾನ ಕಾರ್ಯದರ್ಶಿಗಳು ಚೋಕನನಲ್ಲಿ ಪ್ರಕಾಶ್ ರವರು ಮತ್ತು ರವಿರವರು ಹಾಗು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮತ್ತೊಮ್ಮೆ ಮೋದಿ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾದರು.

 ವಿಸ್ತಾರಕರಾದ ಚಿರಾಗ್ ಈ ಸಭೆಯನ್ನು ಉದ್ದೇಶ ಮಾತನಾಡಿ NDA ಮೈತ್ರಿಕೂಟದ ಧರ್ಮ ಪಾಲನೆಯನ್ನು ಪಾಲಿಸುವ ಮೂಲಕ ನರೇಂದ್ರ ಮೋದಿ ಈ ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಕಾರ್ಯಕರ್ತರು ಮತದಾರರನ್ನು ಬಿಜೆಪಿ ಪಕ್ಷ ಸೂಚಿಸಿರುವ ಅಭ್ಯರ್ಥಿಗೆ ಮತ ಮಾಡಿಸುವ ಮೂಲಕ ಮುಂಬರುವ

ಚುನಾವಣೆಗಳಲ್ಲೂ ಬಿಜೆಪಿ ಪಕ್ಷದ ಶಕ್ತಿಯನ್ನು ಹೆಚ್ಚಿಸಬೇಕಾಗಿ ಹಾಗೂ ಈ ಚುನಾವಣೆಯಲ್ಲಿ ಕಾರ್ಯಕರ್ತರು ಪ್ರಾಮಾಣಿಕವಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಕೆಲಸ ಮಾಡುತ್ತಿರುವುದು ನಮಗೆ ತುಂಬಾ ಸಂತೋಷ ಇದೇ ರೀತಿ ಸಂಘಟನೆ ಮುಂದುವರೆಯಲಿ ಎಂದು ತಿಳಿಸಿದರು.

 ತಾಲೂಕು ಮಂಡಲ ಅಧ್ಯಕ್ಷರಾದ ಸಾರಂಗಿ ನಾಗಣ್ಣ ಮಾತನಾಡಿ ನಮ್ಮ ಪಕ್ಷದ ನಾಯಕರ ಸೂಚನೆಯಂತೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನರೇಂದ್ರ ಮೋದಿ ರವರನ್ನು ಮೂರನೇ ಬಾರಿ ಪ್ರಧಾನಮಂತ್ರಿಯನ್ನಾಗಿ ಮಾಡಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿಯನ್ನು ಗೆಲ್ಲಿಸೋಣ ಎಂದು ತಿಳಿಸಿದರು.

 ಈ ಸಂದರ್ಭದಲ್ಲಿ ತಾಲೂಕು ಮಹಿಳಾ ತಾಲೂಕು ಅಧ್ಯಕ್ಷರಾದ ವಿಜಯಲಕ್ಷ್ಮಿ,ಮಹಿಳಾ ತಾಲೂಕು ಉಪಾಧ್ಯಕ್ಷರಾದ ಪುಷ್ಪ ರಮೇಶ್,ಮಾಧ್ಯಮ ಸಲೆಗಾರರಾದ ಮಧುಸೂದನ್,ತಾಲೂಕು ಯುವ ಘಟಕದ ಅಧ್ಯಕ್ಷ ರಾಜು, ರೈತ ಘಟಕದ ತಾಲೂಕ ಅಧ್ಯಕ್ಷರಾದ ಯೋಗಣ್ಣ, ತಾಲೂಕು ಎಸ್ ಟಿ ಮೋರ್ಚದ ಅಧ್ಯಕ್ಷರಾದ ರಾಜು ಜಿ ಪಿ, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಜೆಟಿಸಿಂಗ್,

ಮಹೇಶ್, ಸುನಿಲ್ ಕುಮಾರ್, ಮಂಜು,ಹಾಗೂ ಹೋಬಳಿ ಘಟಕದ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಶಕ್ತಿಕೇಂದ್ರದ ಅಧ್ಯಕ್ಷರುಗಳು ಕಾರ್ಯದರ್ಶಿಗಳು ಪದಾಧಿಕಾರಿಗಳು ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು,

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow