ಜೀವನದಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ.

ಜೀವನದಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ.

ಇಂದು ಬನ್ನೂರು ತಾಲೂಕಿನ ಹನುಮನಾಲು ವಲಯದ ಬಿ ಸಿ ಹಳ್ಳಿ ಕಾರ್ಯಕ್ಷೇತ್ರದ ಜೀವನದಿ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರದ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.. 

ಕಾರ್ಯಕ್ರಮವನ್ನು ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಉಮಾವತಿ ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಇತ್ತೀಚಿಗೆ ಹೆಚ್ಚಿನ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದು ದಿನನಿತ್ಯದ ಆಹಾರದಲ್ಲಿ ಹಸಿರು ಸೊಪ್ಪು ತರಕಾರಿ ಕಾಳುಗಳನ್ನು ಬಳಸಿ ತಮ್ಮಆರೋಗ್ಯವನ್ನು ಹಾಗೂ ಕುಟುಂಬವನ್ನು ಕಾಪಾಡಿಕೊಳ್ಳಬೇಕು, ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಈ ಬಗ್ಗೆ ಪೌಷ್ಟಿಕ ಆಹಾರ ಮೇಳ ವನ್ನು ಹಮ್ಮಿಕೊಳ್ಳುವುದರ ಮೂಲಕ *ಜಾಗೃತಿಯನ್ನು ಮೂಡಿಸುವಂತಹ ಮಾತೃಶ್ರೀ ಅಮ್ಮನವರ ಆಶಯ ದಂತೆ ಎಲ್ಲರೂ ಆರೋಗ್ಯವಂತರಾಗಿರಬೇಕು ಎಂದು ಶುಭ ಹಾರೈಸಿದರು. 

ಈ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾದ ಮಹೇಂದ್ರ ರವರು ಪೌಷ್ಟಿಕ ಆಹಾರ ಸೇವನೆಯ ಮಹತ್ವ ದ ಬಗ್ಗೆ ಮಾಹಿತಿ ನೀಡಿದರು. ಸದಸ್ಯರು ವಿವಿಧ ಪೌಷ್ಟಿಕವಾದ ತಿನಿಸುಗಳನ್ನು ತಯಾರಿಸಿ ಪ್ರಾತ್ಯಕ್ಷಿತ ಮಾಡಿದರು. 

ವೇದಿಕೆಯಲ್ಲಿ ವಲಯದ ಮೇಲ್ವಿಚಾರಕರಾದ ಚಂದ್ರಹಾಸ್, ಊರಿನ ಮುಖ್ಯಸ್ಥರಾದ ಶ್ರೀಮತಿ ರಾಧಾ, ವಿ ಎಲ್ ಇ ಕಿರಣ್, ಜ್ಞಾನವಿಕಾಸ ಸಮನ್ವಯಧಿಕಾರಿ ಪ್ರಮೀಳಾ, ಸೇವಾ ಪ್ರತಿನಿಧಿ ಜ್ಯೋತಿ, ಕೇಂದ್ರದ ಅಧ್ಯಕ್ಷರಾದ ಕಮಲಮ್ಮ ಹಾಗೂ ಜ್ಞಾನವಿಕಾಸದ ಸದಸ್ಯರು ಉಪಸ್ಥಿತ

ರಿದ್ದರು.

What's Your Reaction?

like

dislike

love

funny

angry

sad

wow