ನವದುರ್ಗೆಯರ ಆರಾಧನೆಯಿಂದ ಮನಸ್ಸಿಗೆ* *ಶಾಂತಿ, ನೆಮ್ಮದಿಯ* *ಜೊತೆಗೆ ಸಮಾಜದಲ್ಲಿ ಸಮೃದ್ಧಿಯು ನೆಲೆಸಲಿದೆ* . *ಡಾ.ಮಾದೇಶ್ ಗುರೂಜಿ*.

ನವದುರ್ಗೆಯರ ಆರಾಧನೆಯಿಂದ ಮನಸ್ಸಿಗೆ* *ಶಾಂತಿ, ನೆಮ್ಮದಿಯ*   *ಜೊತೆಗೆ ಸಮಾಜದಲ್ಲಿ ಸಮೃದ್ಧಿಯು ನೆಲೆಸಲಿದೆ* . *ಡಾ.ಮಾದೇಶ್ ಗುರೂಜಿ*.

ನವದುರ್ಗೆಯರ ಆರಾಧನೆಯಿಂದ ನಮ್ಮ ಮನಸ್ಸಿಗೆ ಶಾಂತಿ,

ನೆಮ್ಮದಿಯು ದೊರೆಯುವ ಜೊತೆಗೆ ಸಮಾಜದಲ್ಲಿ ಸಮೃದ್ಧಿಯು ನೆಲೆಸಲಿದೆ ಎಂದು ಹುಣಸೂರು ತಾಲೂಕಿನ ದೇವರೂರಿನ ಮಾನವ ಧರ್ಮಪೀಠದ ಪೀಠಾಧಿಪತಿ, ಸನಾತನ ಧರ್ಮರತ್ನಾಕರ ಡಾ.ಮಾದೇಶ್

ಗುರೂಜಿ ಹೇಳಿದರು.

ಅವರು ಕೆ.ಆರ್.ಪೇಟೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿಯ ಶ್ರೀ ಪಂಚ ಭೂತೇಶ್ವರ ಸುಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ

ಆಯೋಜಿಸಿದ್ದ ನವದುರ್ಗೆಯರ ಆರಾಧನೆ ಹಾಗೂ ನವದುರ್ಗಾ

ಹೋಮದಲ್ಲಿ ಭಾಗವಹಿಸಿ ನೆರೆದಿದ್ದ ಅಪಾರ ಭಕ್ತಸ್ತೋಮವನ್ನು

ಉದ್ಧೇಶಿಸಿ ಮಾತನಾಡಿದರು.

ಶರನ್ನವರಾತ್ರಿಯ ಸಂದರ್ಭದಲ್ಲಿ ಒಂಭತ್ತು ದಿನಗಳ ಕಾಲ ಒಂದೊಂದು ದಿನವೂ ಒಂದೊಂದು ಅವತಾರ ಧರಿಸಿ ದುಷ್ಠರ ಸಂಹಾರ ಮಾಡಿ ಲೋಕಕ್ಕೆ ಶಾಂತಿ ನೆಮ್ಮದಿಯನ್ನು ಕರುಣಿಸುವ ತಾಯಿ ಆದಿಪರಾಶಕ್ತಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಪೂಜಿಸಿ ಆರಾಧಿಸುವುದರಿಂದ ನಮ್ಮ ಮನಸ್ಸಿನ ಕ್ಲೇಷವು ದೂರಾಗುವ ಜೊತೆಗೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೂಡ ಲಭಿಸುತ್ತದೆ. ಆದ್ದರಿಂದ ಲೋಕ ಕಲ್ಯಾಣಾರ್ಥವಾಗಿ ಪಂಚಭೂತೇಶ್ವರ ಮಠದಲ್ಲಿ

ನವ ದುರ್ಗೆಯರನ್ನು ಪ್ರತಿಷ್ಠಾಪಿಸಿ ಹೋಮ ಹವನವನ್ನು ನಡೆಸಿ ವಿಶೇಷ

ಪೂಜೆಯನ್ನು ಸಲ್ಲಿಸುವ ಮೂಲಕ ನವರಾತ್ರಿಯ ಶುಭ ಫಲವು ಭಕ್ತಾಧಿಗಳಿಗೆ ಹಾಗೂ ಸಮಾಜಕ್ಕೆ ದೊರೆಯಲೆಂದು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಮಾದೇಶ್ ಗುರೂಜಿ ಹೇಳಿದರು.

ಬೆಡದಹಳ್ಳಿ ಪಂಚಭೂತೇಶ್ವರ ಮಠದಲ್ಲಿ ಪಂಚಭೂತಗಳು ನೆಲೆಸಿರುವ ಪರಿಸರವನ್ನೇ ದೇವರೆಂದು ಪೂಜಿಸಿ ಆರಾಧಿಸಲಾಗುತ್ತಿದೆ ಯಲ್ಲದೇ ಗಿಡಮರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಕೃತಿ ಮಾತೆಗೆ ಭಕ್ತಿ ನಮನವನ್ನು ಅರ್ಪಿಸ ಲಾಗುತ್ತಿದೆ.ಮೌಢ್ಯಗಳ ವಿರುದ್ಧ ಅರಿವಿನ ಜಾಗೃತಿಯನ್ನು ಮೂಡಿಸಿ ಸಾಮಾಜಿಕ ಕಟ್ಟುಪಾಡುಗಳು ಹಾಗೂ ಕಂದಾಚಾರಗಳ ನಿರ್ಮೂಲನೆಗೆ ಗ್ರಾಮೀಣ ಜನರಿಗೆ ಮಾರ್ಗದರ್ಶನ ನೀಡಿ, ಮಕ್ಕಳನ್ನು ದುಡಿಮೆಗೆ ಹಚ್ಚದೆ ಕಡ್ಡಾಯವಾಗಿ ಶಾಲೆಗೆ

ಕಳಿಸಿ ವಿದ್ಯಾವಂತರನ್ನಾಗಿ ಮಾಡಿಸಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಸಾಧನೆ ಮಾಡುವಂತೆ ಅರಿವಿನ ಹಣತೆಯನ್ನು ಬೆಳಗಿ

ಅಮಾವಾಸ್ಯೆಯ ಕಗ್ಗತ್ತಲನ್ನು ಜ್ಞಾನದ ಮೂಲಕ ಹೊಡೆ ದೋಡಿಸಲಾಗುತ್ತಿದೆ. ತಂದೆ ತಾಯಿಗಳು ಹಾಗೂ ಗುರು

ಹಿರಿಯರನ್ನು ಗೌರವಿಸುವ ಮೂಲಕ ಭಗವಂತನ ಒಲುಮೆಗೆ ಪಾತ್ರರಾಗುವ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಪರೋಪಕಾರ ಗುಣಗಳ ಪಾಲನೆ ಮಾಡುವ ಸಂಸ್ಕಾರದ ಬಗ್ಗೆ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯು ಯಾರೂ ನಮ್ಮಿಂದ

ಕದಿಯಲಾಗದ ಆಸ್ತಿ ಯಾಗಿರುವುದರಿಂದ ಮಕ್ಕಳನ್ನು ಹೆಣ್ಣು-ಗಂಡು ಎಂದು ಬೇದ-ಭಾವ ಮಾಡದೇ ಸಮಾನವಾಗಿ ಕಂಡು ಶಿಕ್ಷಣವನ್ನು ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು ಎಂದು ಮಾದೇಶ್ ಗುರೂಜಿ ಕರೆ ನೀಡಿದರು.

ಬೆಡದಹಳ್ಳಿ ಪಂಚಭೂತೇಶ್ವರ ಕ್ಷೇತ್ರದ ಪೀಠಾಧಿಪತಿ

ಶ್ರೀರುದ್ರಮುನಿ ಸ್ವಾಮೀಜಿ, ಮಳವಳ್ಳಯ ಬೋಸೇಗೌಡನ ದೊಡ್ಡಿಯ ಶ್ರೀಸಿದ್ಧರಾಮೇಶ್ವರ ಗುರುಪೀಠದ ಪೀಠಾಧಿಪತಿ ಶ್ರೀ. ಸಿದ್ಧರಾಮ ಸ್ವಾಮೀಜಿ

ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. 

ಸಮಾಜ ಸೇವಕರಾದ ಮೊಟ್ಟೆ ಮಂಜು, ಪಂಚಭೂತೇಶ್ವರ ಮಠ ಟ್ರಸ್ಟಿನ ಕಾರ್ಯದರ್ಶಿ ಕಾಂತರಾಜು, ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಬೇರ, ಉಪಾಧ್ಯಕ್ಷೆ ರುಕ್ಮಿಣಿ ನಾಗೇಶ್, ಗ್ರಾಮ ಪಂಚಾಯಿತಿ ಸದಸ್ಯ ಸುನೀಲ್, ಶಿಕ್ಷನ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಸಿಂದಘಟ್ಟ ನಾಗೇಶ್, ಸಮಾಜಸೇವಕ ಭಾರತೀಪುರ ಡಾ.ಪುಟ್ಟಣ್ಣ, ಕೆಂಪರಾಜು, ದೊಡ್ಡಹಾರನಹಳ್ಳಿ ಮಲ್ಲೇಶ್, ಕುಮಾರ್, ಕುಂದೂರು ಕುಮಾರ್, ಮಧು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶಾಂತವ್ವ, ಅಂಗನವಾಡಿ ಕಾರ್ಯಕರ್ತೆ ಪವಿತ್ರಗೌಡ, ಪತ್ರಕರ್ತ ಕಾಡುಮೆಣಸ ಚಂದ್ರು ಸೇರಿದಂತೆ ನೂರಾರು ಭಕ್ತರು ಕಾರ್ಯ

ಕ್ರಮದಲ್ಲಿ

ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow