ಕೂಡ್ಲಿಗಿ:2025 ಮೇ_ ಗ್ರಾಮದೇವತೆ ಶ್ರೀಊರಮ್ಮದೇವಿ ಜಾತ್ರೆ
ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ ಶ್ರೀಊರಮ್ಮ ದೆೇವಿ ಜಾತ್ರೆಯನ್ನು, 2025ರ ಮೇ ತಿಂಗಳಲ್ಲಿ ಜರುಗಿಸಲು ಭಕ್ತಮಂಡಳಿ ನಿರ್ಧರಿಸಿದೆ. ಪ್ರತಿ ಏಳು ಅಥವಾ ಒಂಬತ್ತು ವರ್ಷಗಳಿಗೊಮ್ಮೆ ಜರುಗುತ್ತಿದ್ದ ಶ್ರೀಊರಮ್ಮ ದೇವಿ ಜಾತ್ರೆ, 2022ರಲ್ಲಿ ಜರುಗಿಸಲು
ಸರ್ವ ತಯಾರಿ ನಡೆಸಲಾಗಿತ್ತು ಆದರೆ ಕೋವಿಡ್ ಕಾರಣದಿಂದ ಜರುಗಲಿಲ್ಲ. ಶ್ರೀ ಊರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ್ದ ಸಭೆಯಲ್ಲಿ, ನಾಗರೀಕರು ಹಾಗೂ ಭಕ್ತ ಸಮೂಹದ ಸಮಕ್ಷಮದಲ್ಲಿ. ಶ್ರೀದೇವಿಯ ಅರ್ಚಕರು ಆಯಗಾರರು ಹಾಗೂ ಹಿರಿಯ ನಾಗರೀಕರ ಉಪಸ್ಥಿತಿಯಲ್ಲಿ, ಚರ್ಚಿಸಿ ಹಿರಿಯರ ಸಲಹೆ ಸೂಚನೆ ಪಡೆದು. ನೆರೆದಿದ್ದ ಸಕಲ ಭಕ್ತ ಸಮೂಹದ ಸಲಹೆಯಂತೆ, 2025ರ ಮೇ ತಿಂಗಳಲ್ಲಿ ಜಾತ್ರೆ ನಡೆಸಲು ಭಕ್ತಮಂಡಳಿ
ತೀರ್ಮಾನಿಸಿದೆ. ಕಾರಣ ಪಟ್ಟಣ ಹಾಗೂ ತಾಲೂಕಿನೆಲ್ಲೆಡೆಯ ಮತ್ತು ನಾಡಿನ ಮೂಲೆ ಮೂಲೆಯಲ್ಲಿರುವ, ಶ್ರೀಊರಮ್ಮ ದೇವಿ ಭಕ್ತರು ಅಮ್ಮಳ ಜಾತ್ರೆಗೆ ತನು ಮನ ಧನ ಸೇವೆಗೈದು ಕೃತಾರ್ಥರಾಗಬೇಕಿದೆ. ನಾಡಿನ ವಿವಿದ ಭಾಗಗಳಲ್ಲಿ ನೆಲೆಸಿರುವ ಶ್ರೀಊರಮ್ಮದೇವಿ ಭಕ್ತರು, ಸಕುಟುಂಬ ಸಮೇತವಾಗಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಭಕ್ತ ಮಂಡಳಿ ಕೋರಿದೆ. ಜಾತ್ರೆಗೆ ಮುನ್ನ ಸಂಪ್ರದಾಯದಂತೆ ಜರುಗ ಬೇಕಿರುವ, ಪಟ್ಟಣದ ಇತರೆ ಶಕ್ತಿ ದೇವತೆಗಳ ಜಾತ್ರೆಗಳನ್ನು ನಿಯಮಾನುಸಾರ ಜರುಗಿಸಲಾಗುವುದು. ಈ ನಿಟ್ಟಿನಲ್ಲಿ ಪಟ್ಟಣದ ಸಮಸ್ತ ಭಕ್ತರು ನಾಗರೀಕರು, ಹಾಗೂ ನೆರೆ ಹೊರೆ ಗ್ರಾಮಗಳ ಭಕ್ತರು ಧಾರ್ಮಿಕ ಶ್ರದ್ಧಾವಂತರು. ಅಗತ್ಯ ಪೂರ್ವ ತಯಾರಿಗಳನ್ನ ಮಾಡಿಕೊಂಡು ಜಾತ್ರೆಯ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಜಾತ್ರೆಗಳಲ್ಲಿ, ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಭಕ್ತ ಮಂಡಳಿ ಮನವಿ ಮಾಡಿದೆ.✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
What's Your Reaction?