ಕೆ.ಆರ್.ಪೇಟೆ : ಶಿವಪುರ ಗ್ರಾಮದ ಮಜ್ಜನಕಟ್ಟೆ ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ
ಕೆ.ಆರ್.ಪೇಟೆ ತಾಲ್ಲೂಕಿನ ಹರಳಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಿವಪುರ ಗ್ರಾಮದ ಮಜ್ಜನ ಕಟ್ಟೆ ಅಭಿವೃದ್ಧಿ ಹೆಸರಿನಲ್ಲಿ ಅಲ್ಲಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭ್ರಷ್ಟಾಚಾರದಲ್ಲಿ ಮುಳುಗಿ ಹಗಲು ದರೋಡೆಗೆ ಇಳಿದಿರುವುದು ಅವಮಾನೀಯ ಕೃತ್ಯ.
ಬಡವ ಮತ್ತು ಮಧ್ಯಮ ವರ್ಗದ ಸ್ಥಳೀಯ ಗ್ರಾಮಪಂಚಾಯಿತಿ ಮಟ್ಟದ ನಿಜವಾದ ಕೂಲಿಗಾರರು ಮಾಡಬೇಕಾದ ಕಾಮಗಾರಿ ಕೆಲಸ ಮತ್ತು ಕೂಲಿ ಹಣ ಮಜ್ಜನ ಕಟ್ಟೆ ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳಿಯ ಜನಪ್ರತಿನಿಧಿಗಳ ಜೊತೆ ಸೇರಿ ಯಂತ್ರೋಪಕರಣಗಳ ಬಳಕೆ ಮಾಡಿಸಿ ನರೇಗಾ ಜಾಬ್ ಕಾರ್ಡ್ ಹೊಂದಿರುವರ 40 ಜನರನ್ನು ಕೆಲಸ ಮಾಡುತ್ತಿದ್ದಾರೆ ಎಂದು ಬಿಂಬಿಸಿ 10 ಜನರನ್ನ ಸ್ಥಳೀಯ ತನ್ನ ಅತ್ಮಿಯವಾಗಿರುವ ನಕಲಿ ಕೂಲಿಗಾರನ್ನು ಕರೆತಂದು NMMS ನಲ್ಲಿ 40 ನಕಲಿ ಜನರಿಗೆ ಹಾಜರಾತಿ ಕೊಟ್ಟು ದಿನನಿತ್ಯ ತಿಂಗಳಿಗೆ ಅಂದಾಜು 6 ಲಕ್ಷ ರೂಗಳನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಜೊತೆಗೆ 25 ಮಹಿಳಾ ಕೂಲಿಗಾಯು ಕೆಲಸ ಮಾಡುತ್ತಿದ್ದಾರೆ ಎಂದು ಹಾಜರಾತಿಕೊಡುತ್ತ ಬಂದಿರುತ್ತಾರೆ ಅದರೆ ವಾಸ್ತವವಾಗಿ ನೋಡಿದರೆ ಯಾವ ಒಬ್ಬ ಮಹಿಳಾ ಕೂಲಿಗಾರರು ಸ್ಥಳಿಯ ಕಾಮಗಾರಿಯಲ್ಲಿ ಭಾಗವಹಿಸುವುದಿಲ್ಲ ಈ ಕಾಮಗಾರಿ ಹೇಳಬೇಕಾದರೆ ಹಗಲು ದರೋಡೆಗೆ ಪಿಡಿಒ ಮತ್ತು ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು ನಿಂತಿದ್ದಾರೆ ಎಂದರು ತಪ್ಪಾಗಲಾರದು.
ಭ್ರಷ್ಟಾಚಾರದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಪಾಲು ಬಹುಪಾಲು ಇರಬಹುದೆಂದು ಮೇಲ್ನೋಟಕ್ಕೆ ಎಂದು ಕಾಣುತ್ತಿದೆ , ಮುಂದಾದರು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಪಂ ರಾಜ್ ಸಚಿವರು ಹಾಗೂ ಮಂಡ್ಯ ಜಿಲ್ಲಾಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ಕೈಗೊಂಡು ತನಿಖೆ ನಡೆಸಿ ಜಿಲ್ಲಾ ಆದ್ಯಂತ ನರೇಗಾ ಕಾಮಗಾರಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರೆ ಎಂಬುದನ್ನು ಕಾದುನೊಡಬೇಕಾಗಿದೆ ಎಂದು ಕೆಆರ್ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷರಾದ ಶಿವಪುರ ನಾಗರಾಜು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
*ವರದಿ,ರಾಜು ಜಿಪಿ ಕೆ ಆರ್ ಪೇಟೆ*
What's Your Reaction?