ಯಂತ್ರ ಶ್ರೀ ಯೋಜನೆಯಡಿ ರೈತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಭಿವೃದ್ಧಿ ಯೋಜನೆ ಕಾರ್ಯಕ್ರಮವು ಡಾ. ವೀರೇಂದ್ರ ಹೆಗಡೆ ರವರ ಮಾರ್ಗದರ್ಶನದಲ್ಲಿ.
ರೈತರಿಗೆ ಅನುಕೂಲಕ್ಕಾಗಿ ಮತ್ತು ಕೂಲಿ ಕಾರ್ಮಿಕರ ಸಮಸ್ಯೆ ನೀಗಿಸಲು ಹಾಗೂ ಬತ್ತದ ಇಳುವರಿ ಹೆಚ್ಚಿಸಲು ಯಂತ್ರಗಳಿಂದ ನಾಟಿ ಮಾಡುವುದು ಕಳೆ ತೆಗೆಯೋ ಮಿಷಿನು ಕೊಯ್ಲು ಮಿಷೀನು ಸಬ್ಸಿಡಿ ಆಧಾರದ ಮೇಲೆ ರೈತರಿಗೆ ಅನುಕೂಲ ಆಗುವಂತೆ.ಇದು ಒಂದು ವರದಾರವಾದ ಯೋಜನೆಯಾಗಿದೆ.ಎಂದು ಶಶಿಧರ್.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಡ್ಯ ಮತ್ತು ರಾಮನಗರ ಕೃಷಿ ಯಂತ್ರಧಾರೆ ಯೋಜನಾಧಿಕಾರಿಗಳುತಿಳಿಸಿದರು.
ಡಾ, ನರೇಶ್ ಎಸ ಟಿ ಎಂ ಎಸ್ ಸಿ ಕೃಷಿ ಪಿಎಚ್ಡಿ ಹಿರಿಯ ವಿಜ್ಞಾನಿ ಮುತ್ತು ಮುಖ್ಯಸ್ಥರು ಮಾತನಾಡಿ ರೈತರಿಗೆ ಅಲಹು ತರಬೇತಿ ಮಾಹಿತಿಗಳನ್ನ ನಮ್ಮ ವಿಜ್ಞಾನ ಕೇಂದ್ರದ ವತಿಯಿಂದ ನೀಡುತ್ತಿದ್ದೇವೆ ರೈತರು ನಾಟಿ ಮಾಡಲು ಕಾರ್ಮಿಕರು ಸಿಗದೇ ಇರುವ ಕಾರಣದಿಂದಾಗಿ ಪೈರ್ ನಾಟಿ ಮಾಡಲು ವಿಳಂಬವಾಗುತ್ತದೆ ಇದರಿಂದ ರೈತರಿಗೆ ಇಳುವರಿ ಕಮ್ಮಿಯಾಗುತ್ತದೆ ಬತ್ತದ ನಾಟಿ ಸಮಯಕ್ಕೆ ಸರಿಯಾಗಿ ನಾಟಿ ಮಾಡುವುದರಿಂದ ಇಳುವರಿ ಮತ್ತು ರೋಗ ಕಡಿಮೆಯಾಗಲು ಸಾಧ್ಯವಾಗುತ್ತದೆ ಆದ್ದರಿಂದ ನಾವು ಈಗ ಯಂತ್ರ ಶ್ರೀ ಯೋಜನೆ ಅಡಿಯಲ್ಲಿ ರೈತರಿಗೆ ಅನುಕೂಲ ವಾಗುವಂತೆ ನಾಟಿ ಮಾಡುವುದು ಮತ್ತೆ ಪಾತಿ ಮಾಡಿಕೊಳ್ಳುವ ಬಗ್ಗೆ ತರಬೇತಿ ನೀಡಿ ಯಂತ್ರದ ಕಲಿಕೆ ರೈತರು ಬರುವಂತೆ ಮತ್ತು ರೈತರ ಖರ್ಚು ಕಮ್ಮಿ ಆಗುವಂತೆ ಸರ್ಕಾರದ ಪ್ರೋತ್ಸಾಹ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಕಾರ ಯೋಜನೆಯೊಂದಿಗೆ ಯಂತ್ರದ ಮುಖಾಂತರ ನಾಟಿ ಮಾಡುವುದು ಕಳೆ ತೆಗೆಯುವುದು ಔಷಧಿ ಸಿಂಪಡಿಸುವುದು ಕಮ್ಮಿ ಹಣದಲ್ಲಿ ವ್ಯವಸಾಯ ಮಾಡುವಂತೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಡಾ. ಅತೀಫ ಮುನವ್ವರಿ.ಮಣ್ಣು ವಿಜ್ಞಾನಿ.ವಿಸಿ ಫಾರಂ ಮಂಡ್ಯ ರವರು ಮಾತನಾಡಿ ರೈತರು ಮಣ್ಣಿನ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಭೂಮಿಯನ್ನು ಉತ್ತಮವಾಗಿ ಹದ ಮಾಡಿಕೊಂಡು ಮಣ್ಣಿಗೆ ಕಾಂಪೋಸ್ಟ್ ಗೊಬ್ಬರವನ್ನು ಮಿಶ್ರಣ ಮಾಡಿ ನಾಟಿ ಮಾಡುವ ಮುನ್ನ 15,20 ದಿನಗಳ ಇದ್ದಂತೆ ಹಸಿರು ಸೊಪ್ಪು ಹಾಕಿ ಅದನ್ನು ತುಳಿದು ಅದು ಕರಗಿ ಕಾಂಪೋಸ್ಟ್ ಗೊಬ್ಬರವಾದಾಗ ಅದನ್ನು ಮಣ್ಣಿಗೆ ಮಿಶ್ರಣವನ್ನು ಮಾಡಿ ನಾಟಿ ಮಾಡುವುದರಿಂದ ರಾಸಾಯನಿಕ ಗೊಬ್ಬರ ಬಳಸುವ ಅವಶ್ಯಕತೆ ಕಮ್ಮಿ ಇರುತ್ತದೆ ಇದರಿಂದ ಉತ್ತಮ ಬೆಳೆ ಮಾಡಲು ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಡಾ. ರೇಖಾ ಬಡಲಿಂಗಪ್ಪನವರ್ಬೇಸಾಯ ಶಾಸ್ತ್ರ ವಿಜ್ಞಾನಿವಿಸಿ ಫಾರಂ ಮಂಡ್ಯ ರವರು ಮಾತನಾಡಿ ರೈತರು ಯಂತ್ರಗಳಿಂದ ನಾಟಿ ಮಾಡಿಸುವುದರಿಂದ ಅಂತರ ಮತ್ತು ಗಾಳಿ ಬೆಳಕು ಕೊಟ್ಯಂತರ ರೈತರಿಗೆ ಹೆಚ್ಚು ಇಳುವರಿ ಮತ್ತು ಖರ್ಚು ಕಮ್ಮಿಯಾಗುತ್ತದೆ ಭತ್ತದ ತೆಂಡೆ ಹೆಚ್ಚು ಕಟ್ಟುತ್ತದೆ ಭತ್ತದ ಕೊನೆ ನೀಟಾಗಿ ಬರುತ್ತದೆ ಇದರಿಂದ ಇಳುವರಿ ಹೆಚ್ಚಾಗುತ್ತದೆ ರೈತರಿಗೆ ಖರ್ಚು ಕಮ್ಮಿಯಾಗುತ್ತದೆ ಫಸಲು ಆರೋಗ್ಯಕರವಾಗಿ ಬೆಳೆಯುತ್ತದೆ ಮುಂದಿನ ಪೀಳಿಗೆಗೆ ಇದು ಒಂದು ಅನುಕೂಲವಾದ ಯೋಜನೆಯಾಗಿದೆ ನಾಟಿ ಮಾಡುವವರ ಸಂಖ್ಯೆ ದಿನ ದಿನಕ್ಕೆ ಕಡಿಮೆ ಆಗುತ್ತಿರುವುದರಿಂದ ಮುಂದಿನ ಜನರೇಶನ್ ಗೆ ಆಹಾರದ ಕೊರತೆ ಆಗಬಾರದು ಎಂದರೆ ರೈತರು ಯಂತ್ರದ ಮುಖಾಂತರ ಬೆಳೆ ಮಾಡುವುದರಿಂದ ಲಾಭಕರವಾಗಿ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಡಾ. ಸುರೇಶ್.ಕೃಷಿ ವಿಸ್ತರಣೆ ಅಧಿಕಾರಿ.ವಿಸಿ ಫಾರಂ ಮಂಡ್ಯ. ರವರು ಮಾತನಾಡಿ ರೈತರು ಯಂತ್ರ ಮುಖಾಂತರ ಬೇಸಾಯ ಮಾಡುವುದರಿಂದ ಗಾಳಿ ಬೆಳಕು ಹೇರಳವಾಗಿ ಬೀಳುತ್ತದೆ ಇದರಿಂದ ಬೇರು ಮತ್ತು ಸುಳಿ ಕೋಳಿವಾ ರೋಗ ಕಮ್ಮಿಯಾಗುತ್ತದೆ ಭತ್ತ ಜಲ್ ಬೀಳದೆ ಗಟ್ಟಿಯಾಗಿರುತ್ತದೆ ಬರುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ನವೀನ್ ಕುಮಾರ್ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕರು ಮಂಡ್ಯ. ರವರು ಮಾತನಾಡಿ ರೈತರು ಮೊದಮೊದಲು ಯಂತ್ರ ಶ್ರೀ ಯೋಜನೆಯ ಉಪಯೋಗ ಪಡೆಯಲು ಆಸಕ್ತಿ ತೋರುತ್ತಿರಲಿಲ್ಲ ಮೊದಲ ಬಾರಿಗೆ 20 ರಿಂದ 30 ಎಕರೆ ಭೂಮಿಯಲ್ಲಿ ರೈತರಿಗೆ ಬೆಳೆ ಮಾಡಿಸಿ ಬೆಳೆಯಲ್ಲಿ ಉತ್ತಮ ಇಳುವರಿ ಮತ್ತು ನಾಟಿ ಖರ್ಚು ಕಮ್ಮಿ ಆಗಿರುವುದನ್ನು ತಿಳಿದುಕೊಂಡ ರೈತರು ಅವರವರ ಬಳಗದ ಜೊತೆ ಮಾತನಾಡಿ 100 ರಿಂದ 200 ಎಕ್ಟರ್ ಹೆಚ್ಚುವರಿ ಆಯ್ತು ಈ ವರ್ಷ 300 ನಿಂದ 500 ಎಕರೆ ಭೂಮಿ ಎಲ್ಲಿ ರೈತರು ಯಂತ್ರದ ಮುಖಾಂತರ ನಾಟಿ ಮಾಡಿ ಒಳ್ಳೆಯ ಇಳುವರಿ ಮೊದಲಿಗಿಂತ ಈಗ ಒಮ್ಮೆ ಖರ್ಚಿನಲ್ಲಿ ಉತ್ತಮ ಲಾಭ ಪಡೆಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ವರದಿ, ರಾಜು ಜಿ ಪಿ ಕೆ ಆರ್ ಪೇಟೆ
What's Your Reaction?