ಚನ್ನರಾಯಪಟ್ಟಣ: ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗಾಗಿ ಕೇಂದ್ರ ಸರ್ಕಾರದಿಂದ 16 ವರೆ ಸಾವಿರ ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಲು ಶ್ರಮಿಸಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಶನಿವಾರ ತಿಳಿಸಿದರು.
ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ಎಂ ಶಿವರ ಗ್ರಾಮದಲ್ಲಿ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಮನೆಗಳಿಗೂ ಹೇಮಾವತಿ ನದಿಯಿಂದ ನೀರು ಶುದ್ಧೀಕರಿಸಿ ಮನೆ ಮನೆಗೆ ನಳನೀರು ಕಲ್ಪಿಸುವ ಯೋಜನೆಗೆ 4907 ಕೋಟಿ ಹಣ ಬಿಡುಗಡೆಯಾಗಿದೆ.
ತಾಲೂಕಿನ ಹಿರೀಸಾವೆಯಿಂದ ಮೇಲ್ ಸೇತುವೆ ಕೆಳ ಸೇತುವೆ ಕಾಮಗಾರಿಗಳ ನಿರ್ಮಾಣಕ್ಕೆ 1384 ಕೋಟಿ ಹಣ ಬಿಡುಗಡೆ ಮಾಡಿಸಿ ರಸ್ತೆ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿರುವುದರಿಂದ ಅಪಘಾತಗಳು ತಪ್ಪಿವೆ ಎಂದರು. ರಾಜ್ಯದ ತೆಂಗು ಬೆಳೆಯುವ ರೈತರ ಕೊಬ್ಬರಿಗೆ ಬೆಂಬಲ ಬೆಲೆ ಕೊಡಿಸಲು ಈ ಸರ್ಕಾರ ವಿಫಲವಾಗಿದೆ. . ಕಾರವಾರ ಸೊಲ್ಲಾಪುರ ಎಕ್ಸ್ಪ್ರೆಸ್ ರೈಲುಗಳನ್ನು ಹಿರೀಸಾವೆ ಚನ್ನರಾಯಪಟ್ಟಣದಲ್ಲಿ ನಿಲುಗಡೆ ಮಾಡಲು ಪ್ರಯತ್ನ ಮಾಡಲಾಗಿದೆ ಎಂದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ಸಾಲ ಮನ್ನಾ ಮಾಡಿದ್ದರಿಂದ ಎಲ್ಲಾ ಸಮುದಾಯ ಹಾಗೂ ಎಲ್ಲಾ ಪಕ್ಷದವರಿಗೂ ಸಾಲ ಮನ್ನಾ ಭಾಗ್ಯ ದೊರೆಯಿತು ರೈತರನ್ನು ಉಳಿಸಲು ಜಾತಿ ಭೇದ ಮಾಡಬಾರದು. ಅನ್ನಭಾಗ್ಯಕ್ಕೆ ಹಣ ಹಾಕಿಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಬರ ಬರುತ್ತೆ ಕೆರೆಕಟ್ಟೆಗಳು ಬತ್ತಿ ಹೋಗುತ್ತವೆ ಎಂದು ಜನ ಮಾತಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ರೈತರು
ಕೊಳವೆಬಾವಿ ಕೊರೆಸಿಕೊಂಡು ಅವರೇ ಹಣ ಕಟ್ಟಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಗಳನ್ನು ಹಾಕಿಸಿಕೊಳ್ಳಲು 4 ಲಕ್ಷರು ಹಣ ಖರ್ಚಾಗುತ್ತದೆ ಆದರೂ ಅಂತರ್ಜಲ ಬತ್ತಿ ಕೊಳವೆ ಬಾವಿಗಳಿಂದ ನೀರು ಬರುವುದಿಲ್ಲ ರೈತರಿಗೆ ಅತ್ಯಂತ ಕಷ್ಟದ ದಿನಗಳು ಬಂದಿವೆ ಶಾಸಕರಾದ ಬಾಲಕೃಷ್ಣ ಅವರ ಹೋರಾಟದ ಫಲವಾಗಿ ಎಲ್ಲಾ ಏತನೀರಾವರಿ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿವೆ ಶಾಸಕರ ಜೊತೆ ಅಭಿವೃದ್ಧಿ ಯೋಜನೆಗಳಿಗೆ ಸ್ಪಂದಿಸಲು ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಶಾಸಕ ಎಚ್ ಡಿ ರೇವಣ್ಣ ಮಾತನಾಡಿ ರಾಜ್ಯ ಸರ್ಕಾರ ಬೆಂಬಲ ಬೆಲೆಯ ಕೊಬ್ಬರಿ ಕೊಂಡುಕೊಳ್ಳಲು ಕೂಡಲೇ ಮುಂದಾಗಬೇಕು ಎಂದು ಆಗ್ರಹಿಸಿ
ಚುನಾವಣೆ ಮುಗಿದ ಮೇಲೆ ಸರ್ಕಾರಕ್ಕೆ ಮನವಿ ಮಾಡಿ ಉಳಿದ ಒಬ್ಬರಿಗೂ ಬೆಂಬಲ ಬೆಲೆ ಕೊಡಿಸುತ್ತೇನೆ ಈ ಸರ್ಕಾರ ಬಂದ ಕೂಡಲೇ ಒಬ್ಬರಿಗೆ 15000 ಬೆಲೆ ನಿಗದಿಪಡಿಸುತ್ತೇವೆ ಎಂದು ರೈತರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದು ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ 1400 ರೂಗೆ ಕೊಡುತ್ತಿದ್ದ ಸ್ಪಿಂಕ್ಲರ್ ಪೈಪುಗಳ ಬೆಲೆ ರೂ.4,500 ಮಾಡಿ ಕಳಪೆ ಪೈಪ್ ನೀಡಿ ರೈತರ ಹೆಸರಿನಲ್ಲಿ ಹಣ ಲೂಟಿ ಹೊಡೆಯುತ್ತಿದೆ ಎಂದು ಆರೋಪಿಸಿದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ ಎಂ ಶಿವರ ಗ್ರಾಮದ ನಡಲು ಬಾರೆ ರಸ್ತೆಯನ್ನು ಜೂನ್ ತಿಂಗಳ ಒಳಗಾಗಿ ಕಾಮಗಾರಿಯನ್ನು ಪ್ರಾರಂಭ ಮಾಡಲಾಗುವುದು ಎಂದು ಭರವಸೆ ನೀಡಿದರು, ಯುವಕರು ಜನ ಸೇವೆಗೆ ಮುಂದೆ ಬರಬೇಕು ಕೇಂದ್ರ ಸರ್ಕಾರದ ಜಲಜೀವನ್ ಯೋಜನೆ 750 ಕೋಟಿ ಯೋಜನೆಯಾಗಿದ್ದು 384 ಹಳ್ಳಿಗಳಲ್ಲಿ ಓವರ್ ರೆಡ್ ಟ್ಯಾಂಕುಗಳು ನಿರ್ಮಾಣವಾಗಿದ್ದು ಎರಡು ವರ್ಷದಲ್ಲಿ ಯೋಜನೆಯ ಕಾಮಗಾರಿಗಳು ಪೂರ್ಣಗೊಳ್ಳಲಿವೆ ತೋಟಿ ಏತ ನೀರಾವರಿ ಯೋಜನೆ ಕಲ್ಲೇ ಸೋಮನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ಹಂಗಾಮಿಗೆ ನೀರು ಹರಿಸಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮಾಜಿ ಮಂತ್ರಿಗಳು ಹಾಗೂ ಶಾಸಕರಾದ ಎಚ್ ಡಿ ರೇವಣ್ಣ, ಶಾಸಕರಾದ ಸಿ ಎನ್ ಬಾಲಕೃಷ್ಣ, ಹಾಸನ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ, ಎಂ ಶಿವರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಭೂದೇಶ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು,ಬಿಜೆಪಿ ಮುಖಂಡರಾದ ಅಣತಿ ಆನಂದ್,ಬಿ.ಎಚ್. ಶಿವಣ್ಣ, ಮರಗೂರು ಅನಿಲ್, ಕುಂಬಾರಹಳ್ಳಿ ರಮೇಶ್, ಓಬಳಾಪುರ ಬಸವರಾಜು, ಜೆಡಿಎಸ್ ಪಕ್ಷದ ಯುವ ಮುಖಂಡ ಹಾಗೂ ಎಂ ಶಿವರ ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು, ಎಂ ಶಿವರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶಂಭುಲಿಂಗೇಗೌಡ, ಮಾಜಿ ಉಪಾಧ್ಯಕ್ಷರಾದ ಕಾಮನಹಳ್ಳಿ ಮಂಜೇಗೌಡ, ಗೋವಿನಕೆರೆ ರಾಮಚಂದ್ರು, ವೈನ್ಸ್ ರಮೇಶ್,ಹೊಂಗೆಹಳ್ಳಿ ಮಂಜು, ದರಸೀಹಳ್ಳಿ ಪ್ರಕಾಶ್, ವಕೀಲರಾದ ನವೀನ್ ಹೊಂಗೇಹಳ್ಳಿ ಸೇರಿದಂತೆ ಇತರರು ಹಾಜರಿದ್ದರು.
What's Your Reaction?