*ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಅಕ್ಷರ ಜ್ಞಾನದ ಬೆಳಕಿನ ಶಕ್ತಿಯ ಅವಶ್ಯಕತೆಯಿದೆ. ಪ್ರಮೋದ್ ಕುಮಾರ್* *ಅಭಿಮತ* ..

*ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಅಕ್ಷರ ಜ್ಞಾನದ ಬೆಳಕಿನ ಶಕ್ತಿಯ ಅವಶ್ಯಕತೆಯಿದೆ. ಪ್ರಮೋದ್ ಕುಮಾರ್* *ಅಭಿಮತ* ..

*ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಅಕ್ಷರ ಜ್ಞಾನದ ಬೆಳಕಿನ ಶಕ್ತಿಯ ಅವಶ್ಯಕತೆಯಿದೆ. ಪ್ರಮೋದ್ ಕುಮಾರ್* *ಅಭಿಮತ* ..

ಅಮಾವಾಸ್ಯೆಯ ಕಗ್ಗತ್ತಲನ್ನು ಅಕ್ಷರಜ್ಞಾನದ ಬೆಳಕಿನ ಶಕ್ತಿಯ

ಮೂಲಕ ಹೊಡೆದೋಡಿಸಿ ಜ್ಞಾನದ ಅಮೃತವನ್ನು ಉಣಬಡಿಸುವ ಅಕ್ಷರ

ಅಮಾವಾಸ್ಯೆ ಕಾರ್ಯಕ್ರಮವು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಮೋದ್ ಕುಮಾರ್ ಹೇಳಿದರು..

ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೌಢ್ಯಗಳ ವಿರುದ್ಧ ಅರಿವಿನ ಜಾಗೃತಿ ಮೂಡಿಸಿ ಸುಜ್ಞಾನದ ದೀಪಬೆಳಗುವ ಕಾರ್ಯಕ್ರಮವಾಗಿದೆ

ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಪ್ರಮೋದ್‌ಕುಮಾರ್

ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚ ಭೂತೇಶ್ವರ ಸುಕ್ಷೇತ್ರದಲ್ಲಿ ಪಿತೃಪಕ್ಷದ ಅಮಾವಾಸ್ಯೆಯ

ಅಂಗವಾಗಿ ಆಯೋಜಿಸಿದ್ದ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮವನ್ನು

ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶ್ರೀಮಠದ ವತಿಯಿಂದ ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.

ಬೆಡದಹಳ್ಳಿಯ ಪಂಚ ಭೂತೇಶ್ವರ ಕ್ಷೇತ್ರದಲ್ಲಿ ಅನ್ನ ದಾಸೋಹ, ಅಕ್ಷರ ದಾಸೋಹ ,ಗೋಶಾಲೆ ಹಾಗೂ ಪ್ರಕೃತಿಯ ಆರಾಧನೆಯ ದಾಸೋಹ ಕಾರ್ಯಕ್ರಮಗಳು ಕಳೆದ ೯ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ. ಪೂಜೆ ಪುರಸ್ಕಾರಗಳ ಧಾರ್ಮಿಕ

ಕಾರ್ಯಕ್ರಮಗಳು ಒಂದೆಡೆಯಾದರೆ ನವಗ್ರಹ ವನವನ್ನು ನಿರ್ಮಾಣ

ಮಾಡಿ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪರಿಸರ ಪ್ರೇಮ ಹಾಗೂ ಗಿಡಮರಗಳ ಬಗ್ಗೆ ವಿಶೇಷವಾದ ಕಾಳಗಿ ಮೂಡುವಂತೆ

ಪ್ರೇರೇಪಿಸುತ್ತಿರುವ ಸನಾತನ ಧರ್ಮರತ್ನಾಕರ ಡಾ.ಮಾದೇಶ್

ಗುರೂಜಿಯವರು ಕಳೆದ ಮೂರು ಅಮಾವಾಸ್ಯೆಗಳಿಂದ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಿ ಜ್ಞಾನದ ಬೆಳಕಿನ ದೀಪ ಹಚ್ಚಲು

ವಿಚಾರಗಳ ಮಂಥನವಾಗುವ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮದ

ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಇಡೀ ನಾಗರೀಕ ಸಮಾಜವನ್ನು ಬದಲಾವಣೆಯ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಶ್ರೀಗಳು ಪ್ರತೀ ಅಮಾವಾಸ್ಯೆಗೂ ಒಬ್ಬೊಬ್ಬ ಸಾಧಕರನ್ನು ಶ್ರೀಕ್ಷೇತ್ರ ಕ್ಕೆ ಕೆರೆಸಿ ಸುಜ್ಞಾನಗಳ ವಿಚಾರ ಧಾರೆಯನ್ನು ಉಣಬಡಿಸು ತ್ತಿದ್ದಾರೆ. ಅಕ್ಷರದ ಜ್ಞಾನದ ಬೆಳಕಿನ ಶಕ್ತಿಯು ಯಾರೂ ನಮ್ಮಿಂದ ಕದಿಯಲಾಗದ ಆಸ್ತಿಯಾಗಿದೆ. ಈ ದಿಕ್ಕಿನಲ್ಲಿ ಪೋಷಕರು ಹಾಗೂ ತಂದೆತಾಯಿಗಳು ತಮ್ಮ

ಮಕ್ಕಳಿಗಾಗಿ ಆಸ್ತಿಯನ್ನು ಸಂಪಾದನೆ ಮಾಡಿ ಕೂ&ಡಿಡುವ ಬದಲಿಗೆ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯನ್ನಾಗಿ ಕೊಡುಗೆ ನೀಡಬೇಕು ಎಂದು

ಪ್ರಮೋದ್‌ಕುಮಾರ್ ಮನವಿ ಮಾಡಿದರು.

ಹುಣಸೂರು ತಾಲೂಕು ದೇವನೂರು ಮಹಾಸಂಸ್ಥಾನದ

ಪೀಠಾಧಿಪತಿಗಳಾದ ಡಾ.ಮಾದೇಶ್ ಗುರೂಜಿ ಅವರು ಅಕ್ಷರ ಅಮಾವಾಸ್ಯೆ

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಬೆಡದಹಳ್ಳಿಯ

ಶ್ರೀಪಂಚಭೂತೇಶ್ವರ ಕ್ಷೇತ್ರದಲ್ಲಿ ಅಮಾವಾಸ್ಯೆಯ ಕಗ್ಗತ್ತಲಿನಲ್ಲಿ

ಅಕ್ಷರ ಕ್ರಾಂತಿಯ ಮೂಲಕ ಬೆಳಕು ಮೂಡಿಸುವ ಕೆಲಸವನ್ನು ಕಾರ್ಯ ನಿರ್ವಹಿಸುತ್ತಿದೆ. ಇದು ಕತ್ತಲು ಮತ್ತು ಬೆಳಕಿನ ನಡುವೆ

ನಡೆಯುತ್ತಿರುವ ಹೋರಾಟವಾಗಿದ್ದು. ಅಮಾವಾಸ್ಯೆಯ ಕಗ್ಗತ್ತಲನ್ನು

ಹೊಡೆದೋಡಿಸಲು ಬೆಳಕಿನ ಅವಶ್ಯಕತೆ ಇದೆ, ಅಂತೆಯೇ

ಮಾನವನಲ್ಲಿರುವ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು

ಅಕ್ಷರ ಕ್ರಾಂತಿಯ ಅವಶ್ಯಕತೆ ಇದೆ. ಈ ದಿಕ್ಕಿನಲ್ಲಿ ಬೆಡದಹಳ್ಳಿ

ಪಂಚಭೂತೇಶ್ವರ ಮಠವನ್ನು ಕೇವಲ ಧಾರ್ಮಿಕ ಕ್ಷೇತ್ರಕ್ಕೆ

ಸೀಮಿತಗೊಳಿಸದೆ ಮಾನವನ ಸಾಧನೆಯ ವ್ಯಕ್ತಿತ್ವ ವಿಕಸನದ

ಮಾರ್ಗಕ್ಕೆ ಬೇಕಾದ ಅರಿವು ಮತ್ತು ತಿಳುವಳಿಕೆ ನೀಡುವ

ಕೇಂದ್ರವನ್ನಾಗಿ ಬದಲಾಯಿಸಿ ಮುನ್ನಡೆಸಲು ಸಂಕಲ್ಪ ಮಾಡಿದ್ದು, ಗ್ರಾಮೀಣ

ಪ್ರದೇಶದ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಅಮಾವಾಸ್ಯೆಯಂದು ಒಬ್ಬೊಬ್ಬ ಸಾಧಕರನ್ನು ಕರೆಸಿ ಅವರು ಜೀವನದಲ್ಲಿ

ಎದುರಿಸಿದ ಕಷ್ಟಗಳು, ಸವಾಲುಗಳು ಹಾಗೂ ಶಿಕ್ಷಣ ಪಡೆಯಲು ಅನುಭವಿಸಿದ ನೋವುಗಳ ಬಗ್ಗೆ ಅವರೊಂದಿಗೆ ಸಂವಾದ ನಡೆಸಿ

ವಿಚಾರಗಳ ಮಂಥನ ಮಾಡಿಸಿ ಜಾಗೃತಿ ಮೂಡಿಸುವ ಪ್ರಯತ್ನ

ಮಾಡಲಾಗುತ್ತಿದೆ. ಈ ದಿಕ್ಕಿನಲ್ಲಿ ಸಮಾಜ ಸೇವಕರು ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ, ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಅಧ್ಯಕ್ಷ ವಿಚಾರವಾದಿಗಳಾದ ಡಾ.ಹುಲಿಕಲ್ ನಟರಾಜು,

ಜಾನಪದ ಸಂಶೋಧಕ ಡಾ. ಆಲೂರು ನಾಗಪ್ಪ ಅವರನ್ನು ಕರೆಸಿ ಉಪನ್ಯಾಸವನ್ನು ಕೊಡಿಸಲಾಗಿದೆ. ಮುಂದಿನ ಅಮಾವಾಸ್ಯೆ ಕಾರ್ಯಕ್ರಮಕ್ಕೆ

ವಿಶ್ರಾಂತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗಡೆಯವರನ್ನು ಕರೆಸಿ

ವಿಚಾರ ಮಂಥನ ನಡೆಸುವ ಬಗ್ಗೆ ನಿರ್ಧಾರ ಮಾಡಿದ್ದೇನೆ ಎಂದು ತಿಳಿಸಿದರು.

ಬೆಡದಹಳ್ಳಿ ಪಂಚಭೂತೇಶ್ವರ ಕ್ಷೇತ್ರದ ರುದ್ರಮುನಿ

ಸ್ವಾಮೀಜಿಯವರು ಮಾತನಾಡಿ ಕಳೆದ ೯ ವರ್ಷಗಳ ಹಿಂದೆ ಒಂದು ಸಣ್ಣ

ಗುಡಿಸಿಲಿನಲ್ಲಿ ಆರಂಭವಾದ ಪಂಚಭೂತೇಶ್ವರ ಕ್ಷೇತ್ರವು ಇಂದು ದಾನಿಗಳು ಹಾಗೂ ಭಕ್ತರ ಸಹಕಾರದಿಂದ ಭವ್ಯ ದೇವಾಲಯ, ಸಭಾಭವನ, ಗೋಶಾಲೆ ಸೇರಿದಂತೆ ಪ್ರತಿನಿತ್ಯವೂ ಅನ್ನದಾಸೋಹ

ವ್ಯವಸ್ಥಿತವಾಗಿ ನಡೆಯುತ್ತಿದೆ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರು

ಹಾಗೂ ಸಾರ್ವಜನಿಕರ ನೋವುಗಳನ್ನು ಆಲಿಸಿ ಪರಿಹಾರವನ್ನು ದೊರಕಿಸಿ

ಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಾಗುತ್ತಿದೆ. ಇಂದಿನ ದಿ

ನಮಾನದಲ್ಲಿ ಸಾಮಾಜಿಕ ಅಸಮಾನತೆ, ಬಡತನ ಹಾಗೂ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಅಕ್ಷರ ಜ್ಞಾನದ ಬೆಳಕಿನ ಶಕ್ತಿಯ ಅವಶ್ಯಕತೆ ಇರುವುದರಿಂದ ಅಕ್ಷರ ಅಮವಾಸ್ಯೆ ಕಾರ್ಯಕ್ರಮವನ್ನು ಆಯೋಜಿಸಿ ಜ್ಞಾನಧಾರೆಯನ್ನು ಎರೆಯುವ ಕಾಯಕವನ್ನು ಸನಾತನ ಧರ್ಮ ರತ್ನಾಕರ ಡಾ. ಮಾದೇಶ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಗುತ್ತಿದೆ. ಭಾರತಿಪುರ ಕ್ರಾಸ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಸೇರಿದಂತೆ ತಾಲೂಕಿನ ನಾಗರಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ ಹಂಚಿಕೆಯ ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ವಿಚಾರವಾದಿ ಬಿ.ಬಾಚಹಳ್ಳಿ ಪ್ರಸನ್ನ, ರಾಜ್ಯ ಹಿಂದುಳಿದ ವರ್ಗಗಳ ಮಾನ್ಯತೆ

ಪಡೆದ ಸಂಪಾದಕರ ವರದಿಗಾರರ ಸಂಘದ ಅಧ್ಯಕ್ಷ ಡಾ.ಕೆ.ಆರ್.ನೀಲಕಂಠ, ಬೆಡದಹಳ್ಳಿ ಪಂಚಭೂತೇಶ್ವರ ದೇವಾಲಯ ಟ್ರಸ್ಟ್ ಕಾರ್ಯದರ್ಶಿಗಳಾದ ಕಾಂತರಾಜು, ಉಪಾಧ್ಯಕ್ಷ ಶಿವಲಿಂಗೇಗೌಡ, ಖಜಾಂಚಿ

ಮಹೇಶ್, ಕಾರ್ಯಕ್ರಮ ವ್ಯವಸ್ಥಾಪಕ ಕಾಡುಮೆಣಸ ಚಂದ್ರು ಸೇರಿದಂತೆ ನೂರಾರು ಭಕ್ತರು ಹಾಗೂ ಗ್ರಾಮಸ್ಥರು

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

What's Your Reaction?

like

dislike

love

funny

angry

sad

wow