ಕೆ.ಆರ್.ಪೇಟೆ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಸುಭದ್ರ ರಾಷ್ಟ್ರಕ್ಕಾಗಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷ ಮೈತ್ರಿಯಾಗಿದೆ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾಮರಸ್ಯದಿಂದ ಜೊತೆಗೂಡಿ ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸೋಣ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು

ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ನಡೆದ ಸ್ನೇಹ ಸಮ್ಮಿಲನ ಸಭೆಯನ್ನ ಜ್ಯೋತಿ ಬೆಳಗಿಸುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶ ಸತತ 10 ವರ್ಷಗಳಿಂದ ಮೋದಿ ನಾಯಕತ್ವದಲ್ಲಿ ದೇಶ ಸುಭದ್ರ ಮತ್ತು ಅಭಿವೃದ್ಧಿಯತ್ತ ಸಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಕೈ ಬಲಪಡಿಸಬೇಕೆಂಬ ದೂರ ದೃಷ್ಟಿಯಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದೇವೆ. ರೈತಪರ ಸದಾ ಚಿಂತಿಸುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿಯಾಗುತ್ತಿದ್ದಂತೆ ಜಿಲ್ಲೆಯ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಸುಭದ್ರ ದೇಶಕ್ಕಾಗಿ ಮೋದಿಯಾದರೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮತ್ತು ಕಾವೇರಿಗೆ ಉಳಿವಿಗಾಗಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಕುಮಾರಣ್ಣ ಚುನಾವಣೆಗೆ ಸ್ಪರ್ಧಿಸಿದ್ದಾರೆ.ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕುಟುಂಬ ಎಂದರೆ ತಮ್ಮ ಸ್ವಾರ್ಥಕ್ಕಾಗಿ ಎಂದಿಗೂ ರಾಜಕಾರಣ ಮಾಡಿಲ್ಲ ತಮ್ಮ 92ರ ವಯಸ್ಸಿನಲ್ಲೂ ಕೂಡ ರಾಜ್ಯದ ರೈತರು.ದೀನ ದಲಿತರ ಅಭಿವೃದ್ಧಿಗೆ ಚಿಂತಿಸಿ ಸಂಸತ್ತಿನಲ್ಲಿ ರಾಜ್ಯದ ನಾನಾ ಸಮಸ್ಯೆಗಳ ಬಗ್ಗೆ ಚರ್ಚಿಸುವ ಮೂಲಕ ಪರಿಹಾರ ಕಾಣುವಲ್ಲಿ ಪ್ರಮುಖವಾಗಿ ಶ್ರಮವಹಿಸಿದ್ದಾರೆ. ರಾಜ್ಯದ ಸಮಗ್ರ ಅಭಿವೃದ್ಧಿಯಾಗಬೇಕೆಂದರೆ ಕುಮಾರಣ್ಣ ಅವರ ಗೆಲುವಿಗೆ ನಾವೆಲ್ಲರೂ ಪ್ರಾಮಾಣಿಕವಾಗಿ ಸಮವಹಿಸಬೇಕು. ಹಾಗೂ ಏಪ್ರಿಲ್ 4ನೇ ತಾರೀಕು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕುಮಾರಣ್ಣ ನಾಮಪತ್ರ ಸಲ್ಲಿಸುವ ಹಿನ್ನೆಲೆ ಕೆ.ಆರ್.ಪೇಟೆ ತಾಲೂಕಿನಿಂದ ಸಾವಿರಾರು ಜನಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ ಕಾಂಗ್ರೆಸ್ ನಾಯಕರುಗಳು ಜೆಡಿಎಸ್ ಕೊಡುಗೆ ಏನು ಎಂದು ಹೇಳುವ ನಾಯಕರು ಆತ್ಮಸಾಕ್ಷಿಯಿಂದ ಕಣ್ಣು ತೆರೆದು ನಮ್ಮ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಕೊಡುಗೆ ಏನು ಎಂದು ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಮತದಾರರನ್ನು ಬ್ಲಾಕ್ ಮೇಲ್ ಮಾಡಲು ಹೊರಟಿದೆ ಅದಕ್ಕೆ ತಕ್ಕ ಪ್ರತಿಫಲವನ್ನು ಚುನಾವಣೆಯ ಫಲಿತಾಂಶ ದಿನ ಕಾದು ನೋಡಿ. ತುಮಕೂರಿಗೆ ನೀರು ಹರಿಸಿ ನಮಗೆ ನೀರು ಬಿಡಲು ಕೇಳಿದಾಗ ಉಸ್ತುವಾರಿ ಸಚಿವರು ಯಾವುದೇ ಕ್ರಮ ಕೈಗೊಳ್ಳದೆ ಯಾವ ಮುಖ ಹೊತ್ತುಕೊಂಡು ಮತ ಕೇಳಲು ಬರುತ್ತೀರಿ. ನಮ್ಮ ರಾಜ್ಯದ ರೈತರು ಹಾಗೂ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಕುಮಾರಣ್ಣನ ಅಗತ್ಯವಿದೆ ಹಾಗಾಗಿ ರೈತರ ಕಷ್ಟ ಸುಖ ಹರಿವು ಇರುವ ನಮ್ಮ ರಾಜ್ಯ ಕಂಡ ರೈತನ ನಾಯಕ ಕುಮಾರಣ್ಣರವರಿಗೆ ಹೆಚ್ಚು ಮತ ನೀಡಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ನಡೆಸುವಾಗ ರೈತರ ಅನುಕೂಲಕ್ಕಾಗಿ ಸಮೃದ್ಧಿಯಾಗಿ ವರುಣ ಕೃಪೆ ತೋರಿಸುತ್ತಾನೆ ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬರಗಾಲ ತಾಂಡವ ಆಡುತ್ತದೆ ಎಂದರೆ ರೈತರು ಇಲ್ಲೇ ಮನವರಿಕೆ ಆಗಬೇಕು ದೇಶ ಮತ್ತು ರಾಜ್ಯ ರೈತರಿಗೋಸ್ಕರ ಚಿಂತಿಸುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಎಂದು. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುಮಾರಸ್ವಾಮಿ ಅವರಿಗೆ ಮಂಡ್ಯದಲ್ಲಿ ನಿಲ್ಲುವ ಹಕ್ಕು ಇಲ್ಲ ಎಂದು ಹೇಳುವ ಕಾಂಗ್ರೆಸ್ ನಾಯಕರು ನಿಮ್ಮ ರಾಷ್ಟ್ರ ನಾಯಕ ರಾಹುಲ್ ಗಾಂಧಿ, ಇಂದಿರಾಗಾಂಧಿ ಸೇರಿದಂತೆ ಅನೇಕ ನಾಯಕರು ನಮ್ಮ ರಾಜ್ಯದಲ್ಲಿ ಬಂದು ಸ್ಪರ್ಧಿಸುವವರ ಕೊಡುಗೆ ಏನು...? ಒಂದು ವಿಷಯವನ್ನ ರಾಜ್ಯ ಕಾಂಗ್ರೆಸ್ ನಾಯಕರು ಹರಿತುಕೊಳ್ಳಬೇಕು ಕಾವೇರಿ ಉಳಿವಿಗಾಗಿ ಇಂದಿನಿಂದಲೂ ಹೋರಾಡಿದವರು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಿದೆ ಇಂತಹ ಕುಟುಂಬದಲ್ಲಿ ಜನಿಸಿ ಸದಾ ಬಡವರ ಬಗ್ಗೆ ಚಿಂತಿಸುವ ನಮ್ಮ ಮೈತ್ರಿ ಅಭ್ಯರ್ಥಿ ಕುಮಾರಣ್ಣ ಸ್ಪರ್ಧಿಸುವಲ್ಲಿ ತಪ್ಪೇನು ಇಲ್ಲ. ಮಹಿಳೆಯರು ತಾತ್ಕಾಲಿಕ ಗ್ಯಾರಂಟಿಯ ವ್ಯಾಮೋಹಕ್ಕೆ ಬಲಿಯಾಗದೆ. ಜಿಲ್ಲೆಯ ಜನ ಯೋಚಿಸಿ ಮತ ಹಾಕಬೇಕು ಒಬ್ಬ ಹೆಸರಾಂತ ಉದ್ಯಮಿ ಗೆದ್ದರೆ ಅಭಿವೃದ್ಧಿಯಾಗುವುದಿಲ್ಲ ಸದಾ ಬಡವರ ಕಷ್ಟ ಸುಖಕ್ಕೆ ಸ್ಪಂದಿಸುವ ಕುಮಾರಸ್ವಾಮಿ ಗೆದ್ದರೆ ಶಾಶ್ವತ ಅಭಿವೃದ್ಧಿ ಕಾರ್ಯಗಳು ನೆಲೆಸುತ್ತೇವೆ.ಫೆಬ್ರವರಿ ನಾಲ್ಕರಂದು ಹೊರಬೀಳುವ ಬರುತ್ತಾಂಶದಲ್ಲಿ ದೇಶ ಮೆಚ್ಚಿದ ಪ್ರಧಾನಿ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಆ ಮಾದರಿಯಲ್ಲೇ ಮಂಡ್ಯದ ಸಂಸದರಾಗಿ ಕುಮಾರಣ್ಣ ಕೇಂದ್ರದ ಮಂತ್ರಿ ಆಗುವುದು ನಿಶ್ಚಿತಾ ಎಂದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ ನಾನು ತಾಲೂಕಿನ ಅಭಿವೃದ್ಧಿಗಾಗಿ ಜೆಡಿಎಸ್ ಮನೆಯಿಂದ ಹೋದವನು ನಾನು ನಿಮ್ಮನ್ನೆಲ್ಲಾ ನೊಡುತ್ತಿರುವುದು ನನಗೆ ಹೆಚ್ಚು ಸಂತೋಷವಾಗುತ್ತಿದೆ. ನಮ್ಮ ಜಿಲ್ಲೆಗೆ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ನಮಗೆಲ್ಲ ಆನೆ ಬಲಬಂದಂತಾಗಿದೆ ಹಾಗಾಗಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮತಗಳನ್ನು ನೀಡುವ ಮೂಲಕ ಅವರನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಕೇಂದ್ರದ ಮಂತ್ರಿಯನ್ನಾಗಿ ಮಾಡಬೇಕು.ಅದಕ್ಕಾಗಿ ಎರಡು ಪಕ್ಷಗಳ ಮುಖಂಡರು ಶ್ರಮಿಸಬೇಕು. ನಮ್ಮ ಶಾಸಕ ಹೆಚ್ ಟಿ ಮಂಜಣ್ಣ ಶಾಸಕ ಆಗಿರುವುದು ನನಗೆ ಅತಿ ಹೆಚ್ಚು ಸಂತೋಷ ತಂದಿದೆ ರಾಜಕಾರಣದಲ್ಲಿ ಸೋಲು ಗೆಲುವು ಸಾಮಾನ್ಯ ಮಂಜಣ್ಣ ನನಗೆ ಬಲಗೈನಂತೆ ಇದ್ದರು. ಆದರೆ ಅವರು ಗೆದ್ದಾಗ ನನಗೆ ಒಂದು ಧನ್ಯವಾದ ಹೇಳಲಿಲ್ಲ ಈಗಲೂ 400 ಕೋಟಿ ಅನುದಾನ ಬಿಟ್ಟುಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲೂ ಕೂಡ ಕ್ಷೇತ್ರ ಅಭಿವೃದ್ದಿಗೆ ಮಂಜಣ್ಣ ಜೊತೆ ಕೈಜೋಡಿಸುತ್ತೇನೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ ಕೆ.ಆರ್.ಪೇಟೆ ತಾಲೂಕು ಇಂದಿನಿಂದಲೂ ಜೆಡಿಎಸ್ ಪಕ್ಷದ ಭದ್ರಕೋಟೆ ಇಲ್ಲಿ ಬಿಜೆಪಿ ನಮ್ಮ ಜೊತೆ ಕೈಜೋಡಿಸಿರುವುದು ನಮಗೆ ಆನೆಬಲ ತಂದಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ತಾಲೂಕಿನ ಮತದಾರರು ಅತಿ ಹೆಚ್ಚು ಬಹುಮತವನ್ನು ತಮ್ಮ ಅಭ್ಯರ್ಥಿ ಕುಮಾರಣ್ಣನಿಗೆ ನೀಡಬೇಕು.ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಒತ್ತಾಸೆಯ ಮೇರೆಗೆ ಕುಮಾರಣ್ಣ ಸ್ಪರ್ಧಿಸಿದ್ದಾರೆ.ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಶಾಸಕರಾಗಿದ್ದಾಗ ನಮ್ಮ ಸಲಹೆ ಪಡೆಯುತ್ತಿದ್ದರು. ನಾರಾಯಣಗೌಡ ಆದರೆ ರಾಜಕಾರಣ ಸಣ್ಣಪುಟ್ಟ ಸಮಸ್ಯೆಯಿಂದ ಬಿಜೆಪಿ ಪಕ್ಷ ಸೇರಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಅವರ ಮಾರ್ಗದರ್ಶನ ಹಾಗೂ ಶಾಸಕ ಹೆಚ್.ಡಿ ಮಂಜುರವರ ನೇತೃತ್ವದಲ್ಲಿ ಕುಮಾರಣ್ಣನ ಗೆಲುವಿಗೆ ಹಗಲು ಇರುಳು ಶ್ರಮಿಸೋಣ. ಕುಮಾರಣ್ಣನ ಆರೋಗ್ಯದ ಬಗ್ಗೆ ನಗುವಾಗಿ ಮಾತನಾಡಿರುವ ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು ಕುಮಾರಣ್ಣನಿಗೆ ಅವರ ತಂದೆ ದೇವೇಗೌಡ್ರು ಮತ್ತು ಅವರ ತಾಯಿ ಚನ್ನಮ್ಮ ಹಾಗೂ 6 ಕೋಟಿ ಜನರ ಆಶೀರ್ವಾದ ಇದೆ ನಾವೆಲ್ಲ ಕುಮಾರಣ್ಣನ ಆರೋಗ್ಯದ ಬಗ್ಗೆ ಅನುಮಾನವಿದ್ದರೆ ರಮೇಶ್ ಬಂಡಿಸಿದ್ದೇಗೌಡ್ರು ಆಸ್ಪತ್ರೆಯ ದಾಖಲೆಗಳನ್ನು ಪರಿಶೀಲನೆ ಮಾಡಲಿ. ರಮೇಶ್ ಬಂಡಿಸಿದ್ದೇಗೌಡ ತಮ್ಮ ಹೇಳಿಕೆಯ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದದರು.
ಕಾರ್ಯಕ್ರಮದಲ್ಲಿ ಎಂ.ಎಲ್.ಸಿ ಸುನೀಲ್ ಸುಬ್ರಮಣ್ಯ,ಮಾಜಿ ಶಾಸಕರಾದ ನಾಗಮಂಗಲ ಸುರೇಶ್ ಗೌಡ, ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ,ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠಗೌಡ , ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್,ಜಿಲ್ಲಾ ಬಿಜೆಪಿ ಅಧ್ಯಕ್ಷ ಇಂದ್ರೇಶ್,ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್ ಜಾನಕಿರಾಮ್,ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕ ಡಾಲು ರವಿ, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್,ಬಿಜೆಪಿ ತಾಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ,ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ ಹರೀಶ್,ಮಾಜಿ ನಿರ್ದೇಶಕ ನಲ್ಲೀಗೆರೆ ಬಾಲು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವಿ.ಎಸ್ ಧನಂಜಯ್ ಕುಮಾರ್,ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಅಗ್ರಹಾರಬಾಚಳ್ಳಿ ನಾಗೇಶ್,ರಾಜ್ಯ ಯುವ ಜನತಾದಳ ಕಾರ್ಯದರ್ಶಿ ದಿನೇಶ್, ಟಿಎಪಿಸಿಎಂಎಸ್ ನಿರ್ದೇಶಕರಾದ ಬಲದೇವ್, ದಿನೇಶ್,ತಾ. ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಹಾಗೂ ಸಿಂಗನಹಳ್ಳಿ ರವಿ, ಎಸ್ ಟಿ ರಾಜ್ಯ ಸಮಿತಿಯ ಸದಸ್ಯರಾದ ಮಹೇಶ್ ನಾಯಕ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು, ತಾಲೂಕು ಎಸ್ ಟಿ ಮೊರ್ಚ್ ಅಧ್ಯಕ್ಷರಾದ ರಾಜು ಜಿಪಿ, ತಾಲೂಕು ರೈತ ಮೋರ್ಚ ತಾಲೂಕು ಅಧ್ಯಕ್ಷ ಯೋಗೇಶ್ ಗೌಡ, ತಾಲೂಕು ಯುವ ಘಟಕದ ಅಧ್ಯಕ್ಷರಾದ ರಾಜು, ತಾಲೂಕು ಉಪಾಧ್ಯಕ್ಷರಾದ ಗೋವಿಂದನಹಳ್ಳಿ ಲೋಕೇಶ್, ಮತ್ತು ನವೀನ್ ಕೆಬಿ,ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ, ಉಪಾಧ್ಯಕ್ಷರು ಪುಷ್ಪ ರಮೇಶ್,ಮುಖಂಡರಾದ ಶೀಳ ನೆರೆ ಸಿದ್ದೇಶ್, ಮಾಕವಳ್ಳಿ ವಸಂತ ಕುಮಾರ್, ಬ್ಯಾಲದಕೆರೆ ನಂಜೇಗೌಡ,ಪಾಪೇಗೌಡ, ಸಂತೆಬಾಚಹಳ್ಳಿ ರವಿ ಕುಮಾರ್, ಹೆಗ್ಗಡಹಳ್ಳಿ ಅಲೋಕ್ ಕುಮಾರ್, ಐಕನಹಳ್ಳಿ ದೇವೇಗೌಡ, ಯುವ ಮುಖಂಡರಾದ ಸಚಿನ್ ಕೃಷ್ಣ,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ಸಾಧುಗೋನಹಳ್ಳಿ ಲೋಕೇಶ್ ಪ್ರಶಾಂತ್,ಅಜಯ್ ಗೌಡ, ಲೆನಿನ್ ಲೋಕೇಶ್, ಜೀವನ್, ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು.
*ವರದಿ ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






