ಕೆ ಆರ್ ಪೇಟೆ: ಎಲ್ಲಾ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯಗಿಂತ ಮಿಗಿಲಾದುದು ಯಾವುದು ಇಲ್ಲ. ಎಷ್ಟೇ ಕೋಟಿ ಹಣ,ಆಸ್ತಿ ಇದ್ದರೇನು? ಆರೋಗ್ಯವೇ ಇಲ್ಲದಿದ್ದರೆ ಎಲ್ಲವೂ ಶೂನ್ಯ ಎಂದು ಮಾಜಿ ಸಚಿವ ನಾರಾಯಣಗೌಡ ಹೇಳಿದರು.

ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ಜಯಕೀರ್ತಿ ಚಾರಿಟೇಬಲ್ ಟ್ರಸ್ಟ್ ರಿ ವತಿಯಿಂದ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಹಾಗೂ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಂಬಯಿ ನಗರದಲ್ಲಿ ನಾನು ಬಹಳ ಕಷ್ಟ ಪಟ್ಟು ದುಡಿಯುತ್ತಿದ್ದ ಸಂದರ್ಭದಲ್ಲಿ ನನ್ನ ತಾಯಿ ಒಂದು ಮಾತು ಕೊಟ್ಟಿದ್ದರು.ಹುಟ್ಟಿದ ಊರನ್ನು ಮರೆಯಬೇಡ ಎಂಬ ಒಂದೇ ಏಕೈಕ ದೃಷ್ಟಿಯಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದ ಮುಂಬಯಿ ನಗರದಿಂದ ಜನಸೇವೆ,ಸಮಾಜ ಸೇವೆಯನ್ನು ಮಾಡಲು ಬಂದ ಸಂದರ್ಭದಲ್ಲಿ ನನಗೆ ಹಲವಾರು ಒತ್ತಡಗಳು, ಸವಾಲುಗಳು ಎದುರಾದವು ಆದರೆ ಅವೆಲ್ಲವನ್ನೂ ಎದುರಿಸಿ ತಾಲ್ಲೂಕಿನ ಜನತೆಯ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿ,ಸಚಿವನಾಗಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ತಾಲ್ಲೂಕಿನ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನವನ್ನು ತಂದಿದ್ದೇನೆ ಎಂದರು. ಅದೇ ರೀತಿ ರಾಜೇನಹಳ್ಳಿ ರೇವಣ್ಣ ಕುಟುಂಬದವರು ಸಹ ಹುಟ್ಟೂರಿನ ಋಣ ತೀರಿಸಲು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯವನ್ನು ಕಾಪಾಡುವ ಸಲುವಾಗಿ ಉಚಿತ ಅರೋಗ್ಯ ತಪಾಸಣೆ ಮಾಡಲು ಹೊರಟಿರುವುದು ಸಂತೋಷದ ಸಂಗತಿ. ಆದ್ದರಿಂದ ರೇವಣ್ಣ ಅವರ ಕುಟುಂಬದ ಸದಸ್ಯರಿಗೆ ಭಗವಂತನ ಇನ್ನಷ್ಟು ಹೆಚ್ಚು ಸಮಾಜ ಸೇವೆ ಶಕ್ತಿ ನೀಡುವಂತೆ ಭಗವಂತನಲ್ಲಿ ನಾರಾಯಣಗೌಡ ಅವರು ಪ್ರಾರ್ಥಿಸಿದರು ಹಾಗೂ ಸುವರ್ಣ ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದವರಿಗೆ ಇದೇ ಸಮಯದಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.
ಜಯಕೀರ್ತಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ರೇವಣ್ಣ ಮಾತನಾಡಿ ನನ್ನ ಮಡದಿಗೆ ಹಾಗೂ ನನ್ನ ಮಕ್ಕಳಿಗೆ ಒಂದು ಆಸೆ ಇತ್ತು. ಹುಟ್ಟಿದ ಗ್ರಾಮಕ್ಕೆ ಏನಾದರೂ ಒಂದು ಸೇವೆಯನ್ನು ಗುರುತಿಸಿ ಮಾಡಬೇಕು ಎಂಬ ಹಂಬಲವಿತ್ತು. ತಕ್ಷಣ ನೆನಪಿಗೆ ಬಂದಿದ್ದು ಗ್ರಾಮೀಣದ ಜನತೆ ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿಯುತ್ತಾರೆ.ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೇ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ ದುಡಿಯುತ್ತಿರುತ್ತಾರೆ.ರೈತರು, ಮಹಿಳೆಯರ, ಮಕ್ಕಳ ಉತ್ತಮ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಎಲ್ಲರ ಸಹಕಾರದಿಂದ ಏರ್ಪಡಿಸಿದ್ದೇವೆ.ಇದು ನಮ್ಮ ಟ್ರಸ್ಟ್ ವತಿಯಿಂದ ಎರಡನೇ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವಾಗಿದೆ. ಅಲ್ಲದೇ ನಮ್ಮ ಟ್ರಸ್ಟ್ ವತಿಯಿಂದ ಮೊದಲ ಬಾರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತರು, ಸಮಾಜ ಸೇವಕರು, ವೈದ್ಯಕೀಯ ಕ್ಷೇತ್ರ,ಕಾನೂನು ಕ್ಷೇತ್ರ,ಶಿಕ್ಷಣ ಕ್ಷೇತ್ರ, ಕ್ರೀಡಾ ಕ್ಷೇತ್ರ, ಶಿಕ್ಷಣ ಕ್ಷೇತ್ರ , ಪತ್ರಿಕೋದ್ಯಮ ಹಾಗೂ ಪೋಲಿಸ್ ಇಲಾಖೆಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದು ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಡಾ.ರೇವಣ್ಣ ತಿಳಿಸಿದರು.
ಶಿಬಿರದಲ್ಲಿ ಉಚಿತ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವ ಹೃದ್ರೋಗ, ನರರೋಗ, ಮೂತ್ರಪಿಂಡ, ಮಧುಮೇಹ, ಪಿತ್ತಜನಕಾಂಗ,ಕ್ಯಾನ್ಸರ್, ಶಸ್ತ್ರ ಚಿಕಿತ್ಸೆ,ಗರ್ಭಿಣಿ, ಸ್ತ್ರೀರೋಗ,ಕೀಲು,ಮೂಳೆ, ದಂತವೈದ್ಯ,ಕಿವಿ,ಮೂಗು,ಗಂಟಲು, ಮಕ್ಕಳ, ಚರ್ಮರೋಗ, ಕಣ್ಣು, ಮಾನಸಿಕ ರೋಗ ತಜ್ಞರಿಂದ ಪರೀಕ್ಷೆ,ಸ್ತ್ರೀಯರಿಗೆ ಬಿಳಿಸೆರಗು,ಬಂಜೆತನ,ಗರ್ಭಕೋಶ ತೊಂದರೆ ಇನ್ನಿತರ ಸ್ತ್ರೀ ರೋಗಗಳಿಗೆ ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಯಿತು. ಶಿಬಿರದಲ್ಲಿ ಉಚಿತವಾಗಿ ಇ ಸಿ ಜಿ ರಕ್ತ ಪರೀಕ್ಷೆ ಮಾಡಿ ಉಚಿತವಾಗಿ ಔಷಧಿ ನೀಡಲಾಯಿತು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ನಟರಾಜು,ಗ್ರಾಮ ಪಂಚಾಯತಿ ಅಧ್ಯಕ್ಷ ಮುದುಗೆರೆ ಪರಮೇಶ್,ಸಾಹಿತಿ ಸತೀಶ್ ಜವರೇಗೌಡ,ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ ಡಿ ಹರೀಶ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಪ್ರಶಾಂತ್ ಎಂ,ಚಾಮುಂಡೇಶ್ವರಿ ಟೂರ್ಸ್ ಅಂಡ್ ಟ್ರಾವಲ್ಸ್ ಮಾಲಿಕರು ಕೃಷ್ಣರಾಜೇ ಅರಸ್,ಅಪ್ಪಾಜಿಗೌಡ,ಚಂದ್ರೇಗೌಡ,ಶಿಕ್ಷಕ ಪದ್ಮೇಶ್,ಶೀಳನೆರೆ ದಿನೇಶ್, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಸೇರಿದಂತೆ ಇತರರು ಇದ್ದರು.
*ವರದಿ, ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






