*ಮೋನಿಕಾಗೆ ಜೀವ ವಿಜ್ಞಾನ ಡಾಕ್ಟರೇಟ್ ಪದವಿ;*
ಕೆ.ಆರ್.ಪೇಟೆ ಪಟ್ಟಣದ ಹಳೇ ಮೈಸೂರು ರಸ್ತೆಯ ಪ್ರಗತಿ ಶಾಲೆಯ ಹತ್ತಿರ ವಾಸವಾಗಿರುವ ಪೌಷ್ಟಿಕ ಹಾಗೂ ಆಹಾರ ತಜ್ಞೆ ಎಂ.ಕೆ. ಮೋನಿಕಾ ಅವರಿಗೆ ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಇಂದ ಜೀವ ವಿಜ್ಞಾನ ಪಿ ಎಚ್ ಡಿ ಪದವಿ ನೀಡಿರುತ್ತದೆ.
ಎಂ.ಕೆ. ಮೋನಿಕಾ ಅವರು ಜೀವ ವಿಜ್ಞಾನ ವಿಭಾಗದ ಜೈವಿಕ ರಸಾಯನಶಾಸ್ತ್ರದಲ್ಲಿ ಎಂ.ಎಸ್. ಸಿ ಪದವಿ ಹಾಗೂ ಕ್ಲಿನಿಕಲ್ ನ್ಯೂಟ್ರಿಷಿಯನ್ ಮತ್ತು ಡಯಟ್ ಯಿನ್ ನಲ್ಲಿ ಎಂ. ಎಸ್. ಸಿ ಪದವಿ ಪಡೆದಿದ್ದಾರೆ,
ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಜೀವರಸಾಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜೆ. ಎಂ. ಸಿದ್ದೇಶ್ ಅವರ ಮುಖ್ಯ ಮಾರ್ಗದರ್ಶನ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಡಾ. ರಘುರಾಮ್ ಆಚಾರ್ ಮತ್ತು ಡಾ. ಹರೀಶ್ ಪ್ರಶಾಂತ್ ಕೆ .ವಿ. ಪ್ರಧಾನ ವಿಜ್ಞಾನಿ ಸಿ ಎಫ್ ಟಿ ಆರ್ ಐ ಇವರ ಸಹ ಮಾರ್ಗದರ್ಶನದಲ್ಲಿ ಜೀವವಿಜ್ಞಾನದ ಜೀವ ರಾಸಾಯನಿಕ ಶಾಸ್ತ್ರಕ್ಕೆ ಸಂಬಂಧಿಸಿದ 'ವ್ಯಾಲಿಡೇಷನ್ ಆಫ್ ಬಯೋ ಆಕ್ಟಿವ್ ಮಾಲಿಕುಲಸ್ ಫ್ರಮ್ ಆರ್ಟೊಕಾರ್ಪಸ್ ಅಲ್ಟಿಲಿಸ್ ಎಸಿಇ ಇನ್ನಿಬೀಟರ್ಸ್ ಫ್ರಮ್ ದಿ ಟ್ರೀಟ್ಮೆಂಟ್ ಆಫ್ ಹೈಪರ್ ತೆನ್ಶನ್ ಯೂಸಿಂಗ್ ಇನ್ ಸಿಲಿಕೋ ಇನ್ ವಿಟ್ರೋ ಅಂಡ್ ಇನ್ ವಿ ವೋ ಮಾಡೆಲ್ ಸಿಸ್ಟಮ್ಸ್ (validation of bioactive molecules from artocarpus altilis as ACE inhibitors the treatment of hypertension using _in. silico in vitro and in Vivo_ model systems) ಎಂಬ ವಿಷಯದ ಮೇಲೆ ನಡೆಸಿದ ಮಹಾಪ್ರಬಂಧಕ್ಕೆ ಜೀವ ವಿಜ್ಞಾನ ವಿಷಯದ ಮೇಲೆ ಪಿ.ಎಚ್.ಡಿ ಪಡೆದಿರುತ್ತಾರೆ.
ಮೋನಿಕಾ ಅವರು ನಿವೃತ್ತ ಜಿಲ್ಲಾ ಲೋಕ ಶಿಕ್ಷಣ ಅಧಿಕಾರಿ ಹಾಗೂ ಪ್ರಾಂಶುಪಾಲ ಡಾ. ಕೆ. ಕಾಳೇಗೌಡ ಹಾಗೂ ಪ್ರಗತಿ ಎಜುಕೇಶನ್ ಸಂಸ್ಥೆಯ ಶೈಲಜಾ ಅವರ ಪುತ್ರಿಯಾಗಿದ್ದಾರೆ.
ಮೋನಿಕಾ ರವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ
ಬಯೋಕೆಮಿಸ್ಟ್ರಿ ಎಮರ್ಜಿಂಗ್ ಸೈನ್ಸ್ ಅಂಡ್ ಟೆಕ್ನಾಲಜಿ ಆನ್ ದ ಟೀಮ್ ಆಫ್ ಕರೆಂಟ್ ಡೆವಲಪ್ಮೆಂಟ್ ರಿಸರ್ಚ್ ಅಂಡ್ ಟ್ರಾನ್ಸ್ ಡಿಸ್ಪ್ಲೀನರಿ ಅಪ್ಲಿಕೇಶನ್ ಎಂಬ ನಡೆದ ಎರಡು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ ಪೋಸ್ಟರ್ ಪ್ರಸ್ತುತಿಗೆ ಮೂರನೇ ಬಹುಮಾನವನ್ನು ಪಡೆದಿರುತ್ತಾರೆ. ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ನ್ಯೂಟ್ರಿಷನ್ ಐದನೇ ಶ್ರೇಣಿ ಪಡೆದಿರುತ್ತಾರೆ ಇವರು ಹಲವಾರು ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಾದ ದಸರಾ ಚಂದನ ಟಿವಿ ಸೇರಿದಂತೆ ಹಲವಾರು ಕಡೆ ಭರತನಾಟ್ಯ ಕಾರ್ಯಕ್ರಮವನ್ನು ಸಹ ನೀಡಿರುತ್ತಾರೆ.
ಇವರು ಪಡೆದಿರುವ ಪಿ ಎಚ್ ಡಿ ಪದವಿಗೆ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಮೈಸೂರು ವಿಭಾಗದ ಸಂಚಾಲಕ ರಾಜು,ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣ ಚಂದ್ರ ತೇಜಸ್ವಿ ಹಾಗೂ ಮಾಧ್ಯಮ ಸ್ಟುಡಿಯೋ ಕಛೇರಿಯ ಸ್ನೇಹಿತರು ಹಲವಾರು ಸಂಘ-ಸಂಸ್ಥೆ ಗಳು ಶುಭ ಹಾರೈಸಿದ್ದಾರೆ.
*ವರದಿ; ರಾಜು ಜಿ,ಪಿ, ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?