ಹೇಮಗಿರಿ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಸಂಭ್ರಮ
ಕೆ.ಆರ್.ಪೇಟೆ:ತಾಲ್ಲೂಕಿನ ಕಸಬಾ ಹೋಬಳಿಯ ಹೇಮಗಿರಿ ಶ್ರೀ ಕಲ್ಯಾಣ ವೆಂಕಟರಮಣ ಗಿರಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ಅರ್ಥಪೂರ್ಣ ಹನುಮ ಜಯಂತಿ ಆಚರಿಸಲಾಯಿತು.
ವಿಶೇಷ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿಗಳಾದ ಡಾ: ಜೆ.ಎನ್ ರಾಮಕೃಷ್ಣೇಗೌಡ ಹೇಮಗಿರಿ ಬೆಟ್ಟದ ಮೇಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಅತ್ಯಂತ ಪುರಾತನವಾದ ಇತಿಹಾಸವಿರುವ ದೇವಾಲಯದಲ್ಲಿ ವಿಶೇಷವಾಗಿ ನಿರಂತರ ಹನುಮ ಜಯಂತಿ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಈ ದೇವಸ್ಥಾನವನ್ನು ನಾಲ್ಕು ವರ್ಷಗಳ ಹಿಂದೆ ನವೀಕರಿಸಲಾಗಿದೆ.ಅತ್ಯಂತ ಶಕ್ತಿವಂತನಾಗಿರುವ ಮತ್ತು ಗಿರಿ ಆಂಜನೇಯ ಎಂಬ ವಿಶಿಷ್ಟ ಹೆಸರು ಹೊಂದಿರುವ ಇಲ್ಲಿನ ಹನುಮ ಬೇಡಿದವರಿಗೆ ವರ ಕೊಡುವವನಾಗಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಪ್ರತಿವರ್ಷ ಹನುಮ ಜಯಂತಿಯನ್ನು ಶ್ರದ್ಧೆ, ಭಕ್ತಿಯಿಂದ ಧಾರ್ಮಿಕ ಕಾರ್ಯಗಳ ಮೂಲಕ ವಿಶಿಷ್ಟವಾಗಿ ಆಚರಿಸುತ್ತೇವೆ ಎಂದು ತಿಳಿಸಿದರು.
*ಅಭಿಷೇಕ ಧಾರ್ಮಿಕ ಪೂಜಾ ಕಾರ್ಯಗಳು:*
ಬೆಳಗ್ಗೆಯಿಂದಲೇ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಮುಂತಾದ ಧಾರ್ಮಿಕ ಮಹಾಪೂಜೆ ನಂತರ ದೇವರ ದರ್ಶನ ಪಡೆದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅರ್ಚಕ ರಾಮ ಭಟ್ಟರು, ರಾಘವೇಂದ್ರ,ಹೇಮಗಿರಿ ಬಿಜಿಎಸ್ ಶಾಲಾ ಪ್ರಾಂಶುಪಾಲರಾದ ಆನಂದ್,ಪುನೀತ್,ಮುಖ್ಯ ಶಿಕ್ಷಕಿ ಜಯಶೀಲ,ಗಂಜಿಗೆರೆ ಮಹೇಶ್,ರಾಜು.ಜಿ.ಪಿ, ಮಾಕವಳ್ಳಿ ರಂಗನಾಥ್, ಲೋಕೇಶ್.ವಿ ಉಪಸ್ಥಿತರಿದ್ದ
ರು.
What's Your Reaction?