ಚನ್ನರಾಯಪಟ್ಟಣ: ಡಿ ಕಾಳೇನಹಳ್ಳಿ ಗ್ರಾಮದಿಂದ ಅಡಗೂರಿಗೆ ಹೋಗುವ ರಸ್ತೆಗೆ 90 ಲಕ್ಷದ ಮೌಲ್ಯದ ಸಿಮೆಂಟ್ ರಸ್ತೆಗೆ ಚಾಲನೆ ನೀಡಿದ ಶಾಸಕ ಸಿಎನ್ ಬಾಲಕೃಷ್ಣ

ಚನ್ನರಾಯಪಟ್ಟಣ: ಡಿ ಕಾಳೇನಹಳ್ಳಿ ಗ್ರಾಮದಿಂದ ಅಡಗೂರಿಗೆ ಹೋಗುವ ರಸ್ತೆಗೆ 90 ಲಕ್ಷದ ಮೌಲ್ಯದ ಸಿಮೆಂಟ್ ರಸ್ತೆಗೆ ಚಾಲನೆ ನೀಡಿದ ಶಾಸಕ ಸಿಎನ್ ಬಾಲಕೃಷ್ಣ

ಚನ್ನರಾಯಪಟ್ಟಣ: ಡಿ ಕಾಳೇನಹಳ್ಳಿ ಗ್ರಾಮದಿಂದ ಅಡಗೂರಿಗೆ ಹೋಗುವ ರಸ್ತೆಗೆ 90 ಲಕ್ಷದ ಮೌಲ್ಯದ ಸಿಮೆಂಟ್ ರಸ್ತೆಗೆ ಚಾಲನೆ ನೀಡಿದ ಶಾಸಕ ಸಿಎನ್ ಬಾಲಕೃಷ್ಣ 

ನಗರಕ್ಕೆ ಹೊಂದಿಕೊಂಡಂತಿರುವ ಡಿ ಕಾಳೇನಹಳ್ಳಿ ಗ್ರಾಮದ ಮಂಚಿನಕಟ್ಟೆಯಿಂದ ಅಡಗೂರು ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿಗೆ ಈ ದಿನ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸಿಎನ್ ಬಾಲಕೃಷ್ಣ ಅವರು ಚಾಲನೆ ನೀಡಿ ಮಾತನಾಡಿ ಅಡಗೂರು ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿಯು ಬಹಳ ದಿನಗಳಿಂದ ಹದಗೆಟ್ಟಿದ್ದು, ಈ ರಸ್ತೆಯ ಕಾಮಗಾರಿಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 90 ಲಕ್ಷ ರೂಪಾಯಿಗಳು

ಮಂಜೂರಾಗಿದ್ದು,ರಸ್ತೆಯ ನೂತನ ಸಿಮೆಂಟ್ ಕಾಮಗಾರಿಗೆ ಈ ದಿನ ಚಾಲನೆ ನೀಡಲಾಗಿದೆ, ಉತ್ತಮ ಗುಣಮಟ್ಟದ ಸಿಮೆಂಟ್ ರಸ್ತೆಯು ಅತಿ ಶೀಘ್ರದಲ್ಲೇ ಪೂರ್ಣಗೊಳ್ಳಲಿ ಎಂದು ಹಾರೈಸಿದರು, ಚನ್ನರಾಯಪಟ್ಟಣ ನಗರದ ವ್ಯಾಪ್ತಿಗೆ ಒಳಪಡುವ ಡಿ ಕಾಳೇನಹಳ್ಳಿ

ಗ್ರಾಮಸ್ಥರು 30 ಅಡಿ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ಹೊಸ ಲೇಔಟ್ ಗಳನ್ನು ನಿರ್ಮಾಣ ಮಾಡಬೇಕು, ಈ ರೀತಿ ಅಗಲವಾದ ರಸ್ತೆಗಳನ್ನು ನಿರ್ಮಾಣ ಮಾಡಿದರೆ ನಿಮ್ಮ ಬಡಾವಣೆಗಳಿಗೆ ಹೆಚ್ಚಿನ ಮೌಲ್ಯಗಳು ಬರುತ್ತವೆ ಹಾಗೂ ಸಾರ್ವಜನಿಕರು ಹೆಚ್ಚಿನ ಬೆಲೆಗೆ ನಿವೇಶನಗಳನ್ನು ಖರೀದಿ

ಮಾಡುತ್ತಾರೆ ಆದ್ದರಿಂದ ಯಾರೇ ನಿವೇಶನಗಳನ್ನು ಮಾರಾಟ ಮಾಡಲು ತೀರ್ಮಾನಿಸಿದರೆ ಅತ್ಯುತ್ತಮವಾದ ರಸ್ತೆ ಸಂಪರ್ಕ, ಯು ಜಿ ಡಿ ಸಂಪರ್ಕ, ಚರಂಡಿ ಸಂಪರ್ಕ, ವಿದ್ಯುತ್ ಸಂಪರ್ಕ ಗಳನ್ನು ಒದಗಿಸುವ ಮೂಲಕ ನಗರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಸಿ ಎನ್ ಬಾಲಕೃಷ್ಣ,ಡಿ ಕಾಳೇನಹಳ್ಳಿ ಗ್ರಾಮದ ಮುಖ್ಯಸ್ಥರಾದ ಕಾಳೇನಹಳ್ಳಿ ಆನಂದ್, ಮೊಗಣ್ಣ, ವೆಂಕಟೇಶ್, ಗೋಪಾಲ್, ದಿಲೀಪ್, ಗುತ್ತಿಗೆದಾರರಾದ ಶಂಕರ್,ನಲ್ಲೂರು ಸಂತೋಷ್, ನವೀನ್, ರಾಜು, ಕೊಡಿ ಗಿರಿ, ಕುಮಾರ್, ವಿಎಸ್ಎಸ್ ಅಧ್ಯಕ್ಷ ರಂಗಸ್ವಾಮಿ, ಕಾಂತರಾಜು, ಸ್ಟುಡಿಯೋ ಮಂಜುನಾಥ್, ಪಟೇಲ್ ಲಕ್ಷ್ಮೀಶ್, ಚಕ್ಕೆ ರಾಜು, ಸೇರಿದಂತೆ ಇತರರು ಹಾಜರಿದ್ದರು.

What's Your Reaction?

like

dislike

love

funny

angry

sad

wow