ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ.

ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ.

ಕಾರ್ಯಕ್ರಮವನ್ನು ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಬಿ. ಜಯರಾಮ ನೆಲ್ಲಿತ್ತಾಯರವರು ಉದ್ಘಾಟಿಸಿದರು.

ಮಂಡ್ಯ: ನಗರದ ಎಂ.ಸಿ ರಸ್ತೆಯಲ್ಲಿರುವ ಮಂಜುನಾಥ ಕನ್ವೆನ್ಷನ್ ಹಾಲ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ಮಂಡ್ಯ ತಾಲೂಕು, ಇವರ ವತಿಯಿಂದ ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಡಾ. ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ,ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಬಿ.ಎನ್. ಗೀತಾಮಣಿರವರ ಅಧ್ಯಕ್ಷತೆಯಲ್ಲಿ ಜರುಗಿತು.

ನಂತರ ಕಾರ್ಯಕ್ರಮವನ್ನು ಕುರಿತು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೀಲಿ ನಕ್ಷೆಯೇ ಮೂರು ಪೀಳಿಗೆಯವರೆಗೂ ಅಭಿವೃದ್ಧಿ ಹೊಂದುವ ಸಂಕೇತವಾಗಿದೆ.ಹೆಣ್ಣು ಮಕ್ಕಳನ್ನು ಸಾಸಿವೆ ಡಬ್ಬಿಯಿಂದ ಬ್ಯಾಂಕ್ ವರೆಗೆ ತಂದಿದೆ,ಸಂಘಟನೆಯನ್ನು ಮಾಡಿ ಸಂಘರ್ಷವನ್ನು ಮಾಡಬೇಡಿ ಎಂದು ಸಂಸ್ಥೆಯ ಕಾರ್ಯಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಮೈಸೂರು ಜಿಲ್ಲಾ ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನೆಲ್ಲಿತ್ತಾಯ ರವರು ಮಾತನಾಡಿ ತಾಯಂದಿರಿಗೆ ಜ್ಞಾನವನ್ನು ಕೊಟ್ಟಾಗ ಆ ಮನೆಯ ಇಡೀ ಕುಟುಂಬ ಪ್ರಜ್ಞವಂತರಾಗುತ್ತಾರೆ.ಮನೆಯಲ್ಲಿ ದುಶ್ಚಟಗಳು ಇದ್ದಲ್ಲಿ ಆ ಮನೆ ಎಂದಿಗೂ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ,ಎಂದು ಮಾರ್ಗದರ್ಶನ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಭವಿಷ್ಯ ಹಾಗೂ ಪೋಷಕರ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರವನ್ನು ಮಾತನಾಡುತ್ತ ತಾಯಿಗಿಂತ ದೇವರಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತಿನಂತೆ, ಮಕ್ಕಳಿಗೆ ಸರಿಯಾದ ವಿವೇಕದ ಶಿಕ್ಷಣ ಮನೆಯಲ್ಲಿ ತಾಯಂದಿರು ತುಂಬಬೇಕು,ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ತಿಳಿಸುತ್ತಾ ಗೋಷ್ಠಿಯಲ್ಲಿ ಮಾತನಾಡಿದರು...

 ವಕೀಲರಾದ ಸುಮಿತ್ರಾ ತಿಮ್ಮೇಶ್ ರವರು ಬಾಲ್ಯ ವಿವಾಹದ ಬಗ್ಗೆ ವಿಷಯವನ್ನು ಎರಡನೇ ವಿಚಾರ ಗೋಷ್ಠಿ ಯಲ್ಲಿ ಪರಸ್ಪರ ಚರ್ಚೆಗಳ ಮುಖಾಂತರ ಗೋಷ್ಠಿ ನಡೆಯಿತು. .ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು,ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ನಿರ್ದೇಶಕರಾದ ಚೇತನ ಎಂ ರವರು , ಎಚ್. ಆರ್, ಶುಭ,ಸ್ವಾದರ ಸಂಸ್ಥೆ ಮಂಡ್ಯ. ತಾಲೂಕಿನ ಯೋಜನಾಧಿಕಾರಿ ಸುರೇಶ್ ಶೆಟ್ಟಿ.ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಗಳಾದ ಮೂಕಾಂಬಿಕಾ ,ತಾಲೂಕಿನ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ವೇತಾ ಹೆಚ್.ವಿ, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಗಳು ಸಹ ಹಾಜರಿದ್ದ

ರು.

What's Your Reaction?

like

dislike

love

funny

angry

sad

wow