ಕೃಷಿ ವಿಜ್ಞಾನ ಕೇಂದ್ರದಿಂದ ಭತ್ತದಲ್ಲಿ ಯಾಂತ್ರಿಕೃತ ನಾಟಿಯ ಕ್ಷೇತ್ರೋತ್ಸವ ಕಾರ್ಯಕ್ರಮ

ಮಂಡ್ಯ ತಾಲೂಕಿನ ಕೋಣನಹಳ್ಳಿ ಗ್ರಾಮದ ಮನೋಹರ್ ರವರ ಜಮೀನಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ ವಿ ಸಿ ಫಾರಂ ಮಂಡ್ಯ ವತಿಯಿಂದ ಭತ್ತದಲ್ಲಿ ಯಾಂತ್ರೀಕೃತ ನಾಟಿಯ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಸಲಾಯಿತು.
ನಂತರ ಬೇಸಾಯ ಶಾಸ್ತ್ರದ ವಿಜ್ಞಾನಿಗಳಾದ ಶ್ರೀಮತಿ ಡಾ. ರೇಖಾ ಬಡಲಿಂಗಪ್ಪನವರ್ ಮಾತನಾಡಿ ಸುಮಾರು 50 ವರ್ಷಗಳಿಂದಲೂ ನಮ್ಮ ರೈತರು ಒಟ್ಲು ಪಾತಿಯಲ್ಲಿ ಭತ್ತದ ಸಸಿಯನ್ನು ಬೆಳೆಸಿಕೊಂಡು ಕಿತ್ತು ನಾಟಿ ಮಾಡುವ ಪದ್ಧತಿಯನ್ನು ಹೊಂದಿಕೊಂಡಿದ್ದರು ಬದಲಾದ ಸನ್ನಿವೇಶದಲ್ಲಿ ಕೃಷಿ ಕಾರ್ಮಿಕರ ಲಭ್ಯತೆ ಮತ್ತು ನಾಟಿ ಮಾಡುವ ಕೌಶಲ್ಯ ಪ್ರತಿವರ್ಷ ಕ್ಷಣಿಸುತ್ತಿದೆ ಮತ್ತು ಖರ್ಚು ಕೂಡ ಹೆಚ್ಚಾಗಿ ಆದಾಯ ಕಡಿಮೆಯಾಗುತ್ತಿದೆ ಆದರೆ ಭತ್ತದಲ್ಲಿ ಯಾಂತ್ರಿಕರಣ ಮಾಡುವುದರಿಂದ ಸಸ್ಯಗಳ ಸಂಖ್ಯೆ ಹೆಚ್ಚಾಗುತ್ತದೆ ಸಾಲಿನಿಂದ ಸಾಲಿಗೆ ಗಿಡದಿಂದ ಗಿಡಕ್ಕೆ ಹಂತರ ಇರುವುದರಿಂದ ಕೀಟ ರೋಗಭಾದೆ ಕಡಿಮೆಯಾಗುತ್ತೆದೆ ಇದರಿಂದ ವೆಚ್ಚ ಕಡಿಮೆಯಾಗುವುದರ ಜೊತೆಗೆ ಹೆಚ್ಚಾಗಿ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ನಂತರ ತೋಟಗಾರಿಕೆ ವಿಜ್ಞಾನಿಗಳಾದ ಶ್ರೀಮತಿ ದಿವ್ಯ ಬಿ ರವರು ಮಾತನಾಡಿ ಇಂದಿನ ಆಧುನಿಕ ಕೃಷಿಯಲ್ಲಿ ಬಹಳ ಪೈಪೋಟಿ ಇದೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಕೃಷಿಯಲ್ಲಿ ಯಂತ್ರಗಳ ಬಳಕೆಯಿಂದ ಸಾಕಷ್ಟು ಅನುಕೂಲ ಇದೆ ಭತ್ತದಲ್ಲಿ ಬೀಜದಿಂದ ಬೀಜದವರೆಗೆ ಯಾಂತ್ರಿಕರಣ ಮಾಡುವುದರಿಂದ ರೈತರ ಶ್ರಮ ಕಡಿಮೆಯಾಗುವುದರ ಜೊತೆಗೆ ಇಳುವರಿಯನ್ನ ಪಡೆಯಬಹುದಾಗಿದೆ ಎಂದು ತಿಳಿಸಿದರು.
ರೈತ ಉಮೇಶ್ ರವರು ಮಾತನಾಡಿ ಭತ್ತದ ಬೇಸಾಯದಲ್ಲಿ ಸಂಪೂರ್ಣ ಯಂತ್ರೀಕರಣ ಮಾಡಿಕೊಳ್ಳುವುದರಿಂದ ಸರಿಯಾದ ಸಮಯಕ್ಕೆ ಕೆಲಸವಾಗುತ್ತದೆ ಕುಲಿಯಲುಗಳ ಸಮಸ್ಯೆ ನಿವಾರಣೆ ಆಗುತ್ತದೆ ಖರ್ಚು ಕಡಿಮೆ ಅಧಿಕ ಇಳುವರಿಯನ್ನ ಕಾಣಬಹುದು ಎಂದು ಅಭಿಪ್ರಾಯ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಶಿವನಂಜೇಗೌಡ ನಾಗರಾಜು ಸತ್ಯ ನಂಜೇಗೌಡ ಯಂತ್ರ ಶ್ರೀ ಯೋಧರಾದ ಉಮೇಶ್ ಕೃಷಿ ಮೇಲ್ವಿಚಾರಕರು ನವೀನ್ ಕುಮಾರ್ ಮುಂತಾದ ರೈತರು ಹಾಜರಿದ್ದರು.
What's Your Reaction?






