*ಶ್ರೀ ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಬಹಳ ಮುಖ್ಯ. ಶ್ರೀ ಮಠಗಳೇ ಜನ ಸಾಮಾನ್ಯರಿಗೆ ಜೀವನದ ಮಾರ್ಗ ತೋರಿಸಿ ಮುನ್ನಡೆಸುವ ಶರಣ ಶ್ರದ್ಧಾ ಕೇಂದ್ರಗಳಾಗಿವೆ*ಮಾಜಿ ಸಚಿವ ಡಾ.ನಾರಾಯಣಗೌಡ*.

*ಶ್ರೀ ಮಠಗಳ ಅಭಿವೃದ್ಧಿಗೆ ಭಕ್ತರ ಸಹಕಾರ ಬಹಳ ಮುಖ್ಯ. ಶ್ರೀ ಮಠಗಳೇ ಜನ ಸಾಮಾನ್ಯರಿಗೆ ಜೀವನದ ಮಾರ್ಗ ತೋರಿಸಿ ಮುನ್ನಡೆಸುವ ಶರಣ ಶ್ರದ್ಧಾ ಕೇಂದ್ರಗಳಾಗಿವೆ*ಮಾಜಿ ಸಚಿವ ಡಾ.ನಾರಾಯಣಗೌಡ*.

ಕೃಷ್ಣರಾಜಪೇಟೆ ತಾಲೂಕಿನಲ್ಲಿ ಪ್ರಕೃತಿಯನ್ನೇ ದೇವರೆಂದು ಆರಾಧಿಸುವ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದ ದಶಮಾನೋತ್ಸವ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.

ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಠದ ವತಿಯಿಂದ ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿ ದೇವರು, ಧರ್ಮ ಮತ್ತು ಆಧ್ಯಾತ್ಮದ ಕಡೆಗೆ ಸಾಗಲು ಬೇಕಾದ ಮಾರ್ಗದರ್ಶನ ನೀಡುತ್ತಾ ಭಗವಂತನ ಒಲುಮೆಗೆ ಬೇಕಾಗಿರುವುದು ಆಡಂಬರದ ಪೂಜೆ ಪುರಸ್ಕಾರಗಳಲ್ಲ, ನಿಜವಾದ ಶ್ರದ್ಧಾ ಭಕ್ತಿಯಿಂದ ಪೂಜಿಸಿ ಆರಾಧಿಸಿದರೆ ಸಾಕು ದಯಾಮಯನಾಡ ಭಗವಂತನು ಒಲಿದು ಹರಸಿ ಆಶೀರ್ವದಿಸುತ್ತಾನೆ. ನಮ್ಮ ತಂದೆ ತಾಯಿಗಳೇ ನಮಗೆ ನಿಜವಾದ ದೇವರು, ಆದ್ದರಿಂದ ಹಿರಿಯ ನಾಗರಿಕರನ್ನು ಗೌರವಿಸುವ

ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಮುಖಿಯಾಗಿ ಹೆಜ್ಜೆ ಹಾಕಬೇಕು. ಬಡವರು ಹಾಗೂ ನೊಂದ ಜನರಿಗೆ ಕೈಲಾದ ಸಹಾಯ ಮಾಡುವುದೇ ನಿಜವಾದ ಮಾನವ ಧರ್ಮ ಎಂಬ ಸತ್ಯ ಅರಿತು ಜೀವನ ನಡೆಸಿದರೆ ನಮ್ಮ ಬದುಕಿಗೆ ಸಾರ್ಥಕತೆ ದೊರೆಯುತ್ತದೆ. ಈ ದಿಕ್ಕಿನಲ್ಲಿ ಶ್ರೀ ಮಠವು ಧಾರ್ಮಿಕ ಜಾಗೃತಿ ಮೂಡಿಸುತ್ತಾ ಹತ್ತು ವರ್ಷಗಳನ್ನು ಸಂಪೂರ್ಣಗೊಳಿಸಿ ಭಕ್ತರ ಸಹಕಾರದಿಂದ ಮುನ್ನಡೆಯುತ್ತಿದೆ ಎಂದು ನಾರಾಯಣಗೌಡ ಅಭಿಮಾನದಿಂದ ಹೇಳಿದರು.

ಕೆ.ಆರ್.ಪೇಟೆ ಶಾಸಕ ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ.ಡಾ.ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಕೊರಟಗೆರೆಯ ಕುಂಚಟಿಗರ ಮಹಾ ಸಂಸ್ಥಾನ ಮಠದ ಪೀಠಾಧಿಪತಿ ಡಾ. ಹನುಮಂತನಾಥ ಸ್ವಾಮೀಜಿ, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕೃಷ್ಣರಾಜನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ದೇವರೂರು ಮಾನವ ಧರ್ಮ ಪೀಠದ ಸನಾತನ ಧರ್ಮ ರತ್ನಾಕರ ಡಾ.ಮಾದೇಶ್ ಗುರೂಜಿ ಹಾಗೂ ಬೆಡದಹಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಧಿಸಿದರು. ಇದೇ ಸಂಧರ್ಭದಲ್ಲಿ. ಪಂಚೆ ಶ್ರೀ ಪ್ರಶಸ್ತಿ ಪುರಸ್ಕೃತರು. ಪದ್ಮಶ್ರೀ ಪುರಸ್ಕೃತರಾದ ಮಂಡ್ಯ ರಾಜಣ್ಣ. ಬೆಳಕು ಸಂಸ್ಥೆಯ ಅಧ್ಯಕ್ಷರಾದ ರಜಿನಿ ರಾಜ್. ಸಮಾಜ ಸೇವಕರಾದ ಕುಂದೂರು ಮೊಟ್ಟೆ ಮಂಜು. ಕೆ.ಆರ್.ಪೇಟೆ ಪುರಸಭೆಯ ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೂಡಾ ಮಾಜಿ ಅಧ್ಯಕ್ಷ ಕೆ. ಶ್ರೀನಿವಾಸ್, ಮುಖಂಡ ಅಗ್ರಹಾರಬಾಚಹಳ್ಳಿ ಜಗಧೀಶ್, ಬಿಜೆಪಿ ಕೃಷ್ಣರಾಜಪೇಟೆ ತಾಲೂಕು ಮಂಡಲ ಉಪಾಧ್ಯಕ್ಷರು ಭಾರತೀಪುರ ಡಾ. ಪುಟ್ಟಣ್ಣ, ಗ್ರಾಮ ಪಂಚಾಯತ್ ಅಧ್ಯಕ್ಷ ಕುಬೇರ, ಮಾಜಿ ಅಧ್ಯಕ್ಷ ಸುನಿಲ್, ಶ್ರೀ ಮಠ ಟ್ರಸ್ಟ್ ಕಾರ್ಯದರ್ಶಿ ಕಾಂತರಾಜು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

*ವರದಿ.ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow