*_ತಾವು ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಗುರುತಿಸಿ ಅವರಿಗೆ ಗುರುವಂದನೆಯ ಮೂಲಕ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪ್ರಾಂಶುಪಾಲರಾದ ಜಿ.ಬಾಲಕೃಷ್ಣರವರು ಅಭಿಪ್ರಾಯಪಟ್ಟರು,_*
_
ಅವರು ತಾಲೋಕಿನ ಅಕ್ಕಿಹೆಬ್ಬಾಳು ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ 2001-2004ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು._
_ಹಲವು ವರ್ಷಗಳ ನಂತರ ಅಂದು ವಿದ್ಯೆಕೊಟ್ಟ ಗುರುಗಳನ್ನು ನೆನಪಿನಲ್ಲಿಟ್ಟುಕೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು._
_ನಂತರ ಮಾತನಾಡಿದ ನಿವೃತ್ತ ಶಿಕ್ಷಕ ಜೆ.ಬಿ.ಬೋರೇಗೌಡ್ರು ವಿದ್ಯಾರ್ಥಿಗಳೇ ನಮ್ಮ ಆಸ್ತಿ, ಅಂದು ಅವರಿಗೆ ಕೊಟ್ಟ ವಿದ್ಯೆ ಇಂದು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುತ್ತಿರುವುದು ನಮ್ಮೆಲ್ಲ ಗುರುಬಳಗಕ್ಕೆ ಸಂತಸವಾಗಿದೆ. ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು._
_ನಂತರ ಮಾತನಾಡಿದ ಈ ಸಾಲಿನಲ್ಲಿ ಕಲಿತ ವಿದ್ಯಾರ್ಥಿನಿ ಎಂ.ಜೆ. ದೀಪಿಕಾ ನಾವು ಕಲಿತ ಶಿಕ್ಷಣ ಸಂಸ್ಥೆ ಹಾಗೂ ಕಲಿಸಿದ ಶಿಕ್ಷಕರು ಇಂದಿಗೂ ನಮಗೆ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಕಕರು ಸಮಾಜದ ಶಿಲ್ಪಿಗಳಿದ್ದಂತೆ. ವಿದ್ಯಾರ್ಥಿ ಜೀವನದಲ್ಲಿ ನಮಗೆ ಉತ್ತಮ ಶಿಕ್ಷಣ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ್ದರಿಂದಲೇ ಇಂದು ನಾವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸುತ್ತಿದ್ದೇವೆ ಎಂದರು._
_ನಂತರ ಮಾತನಾಡಿದ ವಿದ್ಯಾರ್ಥಿ ದೇವರಾಜ್. ಎಂ.ಎ ಮಾತನಾಡಿ, ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡುವದರೊಂದಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟ ಎಲ್ಲ ಗುರುವೃಂದಕ್ಕೆ ಸ್ನೇಹ ಬಳಗದ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು._
_ಗುರುವೃಂದವನ್ನು ಪುಷ್ಪಗಳ ಸುರಿಮಳೆಯಿಂದ ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆಯಿತು._
_ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಎಸ್. ಪ್ರಶಾಂತ್ ಕುಮಾರ್, ಡಿ.ಎ ನಿಂಗಪ್ಪ, ಸಾಹೀದ ನುಶ್ರತ್, ಉಪನ್ಯಾಸಕರಾದ ಜೆ ಆರ್ ರಾಜೇಗೌಡ್ರು, ಎಂ ಮಹದೇವ್, ಕೆ.ಎಲ್ ಗಿರೀಶ್, ಶಿಕ್ಷಕರಾದ ಪಿ.ಏನ್ ಶಿವಣ್ಣ, ಎಂ ವೇದಾವತಿ, ಆಯಿಷಾ ಫಾತಿಮಾ, ಬಿ,ಎಸ್ ಪರಿಮಳ, ಎಸ್.ಸಿ ಚೆಲುವರಾಜು, ಲೀಲಾವತಿ, ಹಮೀದ್ ಖಾನ್, ಎಮ್.ಜೆ ಪುಟ್ಟರಾಜು. ಎಸ್.ಡಿ.ಎಮ. ಸಿ ಅಧ್ಯಕ್ಷರಾದ ಜಮೀರ್ ಅಹಮದ್, ಶಿವಣ್ಣನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿ
ದ್ದರು,_
What's Your Reaction?