ಕೆ.ಆರ್.ಪೇಟೆ : ಭಯೋತ್ಪಾದನೆಗಿಂತ ಭ್ರಷ್ಟಾಚಾರವೇ ಮಾರಕ - ಶಿವಪುರ ನಾಗರಾಜ್

ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಭ್ರಷ್ಟಾಚಾರವು ಭಯೋತ್ಪಾದನೆಗಿಂತಲೂ ಕೆಟ್ಟದು, ಭ್ರಷ್ಟಾಚಾರವೆಂಬ ಪೆಡಂಭೂತವನ್ನು ಹೊಡೆದೋಡಿಸಲು ಕರ್ನಾಟಕ ರಾಷ್ಟ್ರ ಸಮಿತಿಯು ಹೋರಾಟ ನಡೆಸುತ್ತಿದೆ. ಲಜ್ಜೆಗೆಟ್ಟ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ ಎಂದು ಕೆಆರ್‌ಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಶಿವಪುರ ನಾಗರಾಜು ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಕರ್ನಾ ಟಕ ರಾಷ್ಟ್ರ ಸಮಿತಿಯ ತಾಲೂಕು ಘಟಕದ ಪದಾಧಿಕಾರಿಗಳ ಸಮಾಲೋಚನಾ ಸಭೆ ಯಲ್ಲಿ ಭಾಗವಹಿಸಿ ಮಾತನಾಡಿದರು.
ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಿಸಿರುವ ಭ್ರಷ್ಟಾಚಾರವೆಂಬ ಪೆಡಂಭೂತವು ದೇಶದ ಅಭಿವೃದ್ಧಿಗೆ ಮಾರಕವಾಗಿದೆ. ಕಂದಾಯ ಇಲಾಖೆ, ಹಾಲಿನ ಡೇರಿಗಳು, ಲೋಕೋಪಯೋಗಿ ಇಲಾಖೆ, ಉಪನೋಂದಣಾಧಿಕಾರಿ ಕಚೇರಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರವು ಮಿತಿ ಮೀರಿದೆ. ಲಂಚದ ಹಣವನ್ನು ನೀಡದಿದ್ದರೆ ಶ್ರೀಸಾಮಾನ್ಯರ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ ,
ಕೆ.ಆರ್.ಪೇಟೆ ಪಟ್ಟಣದ ಕಂದಾಯ ಇಲಾಖೆ, ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ಪುರಸಭಾ ಕಾರ್ಯಾಲಯದಲ್ಲಿ ಲಂಚಾವತಾರವು ಎಲ್ಲೆ ಮೀರಿದೆ. ಇಲ್ಲಿ ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿದ್ದರೂ ಹೇಳುವವರು ಕೇಳುವ ವರು ಯಾರೂ ಇಲ್ಲದಂ ತಾಗಿದೆ. ತಾಲೂಕಿ ನಲ್ಲಿ ಭ್ರಷ್ಟಾಚಾರ ಮುಕ್ತ ವಾದ ಪಾರದರ್ಶಕ . ಆಡಳಿತವು ರೈತರಿಗೆ ದೊರೆಯಬೇಕು. ನಿಗದೊತ ಅವಧಿಯೊಳಗೆ ಶ್ರೀಸಾಮಾನ್ಯರ ಕೆಲಸವನ್ನು ಅಧಿಕಾರಿಗಳು ಮಾಡಿಕೊಡಬೇಕು. ಕೆ.ಆರ್. ಪೇಟೆ ತಾಲೂಕಿನಲ್ಲಿ ಭ್ರಷ್ಟಾಚಾರವು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಇಲ್ಲದಿದ್ದರೆ ಅಧಿಕಾರಿಗಳ ಎದುರು ಪಿಕೆಟಿಂಗ್ ನಡೆಸಲಾಗುವುದು ಎಂದು ಎಚ್ಚರಿಸಿದರು. ಪಕ್ಷದ ಜಿಲ್ಲಾ ಸಂಚಾಲಕ ಮುರುಗೇಶ್ ಇತರರಿದ್ದರು.
What's Your Reaction?






