ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಮೈಕ್ರೋ ಫೈನಾನ್ಸ್ ಗೆ ಸೇರುವುದಿಲ್ಲ ಎಂದು ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಆರ್.ಟಿ.ಓ. ಮಲ್ಲಿಕಾರ್ಜುನ್ ರವರು ತಿಳಿಸಿದರು,

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಮೈಕ್ರೋ ಫೈನಾನ್ಸ್ ಗೆ ಸೇರುವುದಿಲ್ಲ ಎಂದು ಜಿಲ್ಲಾ ಜನಜಾಗೃತಿ ಅಧ್ಯಕ್ಷರಾದ ಆರ್.ಟಿ.ಓ. ಮಲ್ಲಿಕಾರ್ಜುನ್ ರವರು ತಿಳಿಸಿದರು,

_

ಕೆ ಆರ್ ಪೇಟೆ ತಾಲ್ಲೋಕಿನ ಅಕ್ಕಿಹೆಬ್ಬಾಳು ಗ್ರಾಮದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಪೂಜ್ಯ ರಾಜಶ್ರೀ ವಿರೇಂದ್ರ‌ ಹೆಗ್ಗಡೆ ರವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಸೀತಾರಾಮ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮೈಕ್ರೋ ಪೈನಾಲ್ಸ್ ಗಳ ಕಿರುಕುಳ ಇತ್ತೀಚಿಗೆ ನೆಡಿಯುತ್ತಿರುವುದನ್ನು ನೀವುಗಳು ಎಲ್ಲರು ಗಮನಿಸಿದಿರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯು ಮೈಕ್ರೋ ಪೈನಾಲ್ಸ್ ಗೆ ಸೇರುವುದಿಲ್ಲ, ಬಿ.ಸಿ, ಟ್ರಸ್ಟ್ ಎಂದರೆ ಒಂದು ನಂಬಿಕೆಯ ಆಧಾರದ ಮೇಲೆ ವ್ಯವಹಾರ ನೆಡಸಲು ಸಾಲ ನೀಡುತ್ತಿರುವ ಏಕೈಕ ಟ್ರಸ್ಟ್ ಅಂದರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿರುದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೆಲವು ಜನ ಸಾಮಾನ್ಯರಿಗೆ ನೇರವಾಗಿ ಸಾಲ ಸೌಲಭ್ಯಗಳು ದೊರೆಯದ ಕಾರಣ, ಈ ಬಿ,ಸಿ, ಟ್ರಸ್ಟ್ ಮೂಲಕ ಜನರಿಗೆ ಸಾಲ ನೀಡುತ್ತಿರುವ ಮೂಲವೇ ಈ ಬಿ.ಸಿ ಟ್ರಸ್ಟ್ ಜನ ಸಾಮಾನ್ಯರಿಗೆ ಕೊಟ್ಟಿರುವ ಹಣಕ್ಕೆ ಪರಮಪೂಜ್ಯ ಡಾ, ಡಿ, ವೀರೇಂದ್ರ ಹೆಗ್ಗಡೆ ಯವರೇ ಜಾಮೀನು. ಜೊತೆಗೆ ಕೆಲವು ಜನರು ಬಿ.ಸಿ. ಟ್ರಸ್ಟ್ ನ ಬಗ್ಗೆ ಇಲ್ಲದ ಸಲ್ಲದ ಆರೋಪಗಳನ್ನು ಮಾಡುತಿದ್ದರೆ ಮೊದಲು ವಿಚಾರವನ್ನು ತಿಳಿದು ಮಾತನಾಡಬೇಕು ಎಂದು ಮನವರಿಕೆ ಮಾಡಿದರು,_

_ನಂತರ ಮಾತನಾಡಿದ ಪೂರ್ಣಚಂದ್ರ ತೇಜಸ್ವಿ ರವರು ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆಯು ಪ್ರತಿಯೊಂದು ಗ್ರಾಮದಲ್ಲಿ ಇರುವ ಕೆರೆ-ಕಟ್ಟೆಗಳ ಊಳುಎತ್ತುವಿಕೆ, ಆಶ್ರಯ ಮನೆ ನಿರ್ಮಾಣಕ್ಕೆ ಸಹಾಯ. ಪುರಾತನ ಕಾಲದ ದೇವಲಯಗಳ ಜೀರ್ಣೋದ್ಧಾರಕ್ಕೆ ಸಾಹಸ. ಇನ್ನು ಹಲವು ಕಾರ್ಯಗಳಿಗೆ ಸಹಾಯ ಹಸ್ತ ನೀಡುತ್ತಾ ಬಂದಿದೆ. ಹಾಗೂ ಕೆಲವು ಮದ್ಯಪಾನ ಶಿಬಿರ ಯೋಜನೆಯಿಂದ ಎಷ್ಟೋ ಕುಟುಂಬಗಳು ನೆಮ್ಮದಿ ಜೇವನ ಸಾಗಿಸುತಿವೆ ಎಂದು ತಿಳಿಸಿದರು,_

 

_ಈ ಸಂದರ್ಭದಲ್ಲಿ ಅಕ್ಕಿಹೆಬ್ಬಾಳು ಗ್ರಾ. ಪಂ. ಅಧ್ಯಕ್ಷ ಹರೀಶ್, ಅಕ್ಕಿಹೆಬ್ಬಾಳು ಗುತ್ತಿಗೆದಾರರು ಜೆಡಿಎಸ್ ಪಕ್ಷದ ಮುಖಂಡರು ಎ.ಆರ್. ರಘು, ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪೂರ್ಣಚಂದ್ರ ತೇಜಸ್ವಿ, ತಾಲ್ಲೋಕು ಯೋಜನಾಧಿಕಾರಿ ತಿಲಕ್ ರಾಜ್, ನರಸ ನಾಯಕ, ಹಿರಿಯ ಪತ್ರಕರ್ತರಾದ ಕೆ.ಆರ್. ನೀಲಕಂಠ. ವಲಯದ ಮೇಲ್ವಿಚಾರಕರಾದ ಶಿಲ್ಪ. ಅರ್ಚಕರಾದ ಶ್ರೀನಿವಾಸ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾ! ಅಧ್ಯಕ್ಷ ಲೋಕೇಶ್. ವಿ. ಆರ್,ಟಿ,ಓ, ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜಿಗೆರೆ ಮಹೇಶ್. ಸೇವಾ ಪ್ರತಿನಿಧಿಗಳು. ಸ್ವಸಹಾಯ ಸಂಘದ ಮಹಿಳೆಯರು. ಹಾಗೂ ಅಕ್ಕಿಹೆಬ್ಬಾಳು ಗ್ರಾಮಸ್ಥರು ಭಾಗವಹಿಸಿದ್ದರು._

 *ವರದಿ, ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ*

What's Your Reaction?

like

dislike

love

funny

angry

sad

wow