ಮಂಡ್ಯ ಜಿಲ್ಲೆ ನಾಯಕ ಸಮಾಜ ಹಾಗು ಕೃಷ್ಣರಾಜಪೇಟೆ ತಾಲೂಕು ನಾಯಕ ಸಂಘದ ವತಿಯಿಂದ ಎಸ್‌ಸಿ ಬಸವರಾಜ್ ರವರನ್ನು ಎಂ ಎಲ್ ಸಿ ಮಾಡುವಂತೆ ಒತ್ತಾಯ

ಮಂಡ್ಯ ಜಿಲ್ಲೆ ನಾಯಕ ಸಮಾಜ ಹಾಗು ಕೃಷ್ಣರಾಜಪೇಟೆ ತಾಲೂಕು ನಾಯಕ ಸಂಘದ ವತಿಯಿಂದ ಎಸ್‌ಸಿ ಬಸವರಾಜ್ ರವರನ್ನು ಎಂ ಎಲ್ ಸಿ ಮಾಡುವಂತೆ ಒತ್ತಾಯ

ಎಸ್ ಟಿ ಕೋಟಾದಡಿ ಎಸ್ ಸಿ ಬಸವರಾಜು ರವರಿಗೆ ಅವಕಾಶ ಕಲ್ಪಿಸಲು ಒತ್ತಾಯ

ಜೂನ್ ತಿಂಗಳಲ್ಲಿ ನಡೆಯುವ ವಿಧಾನಪರಿಷತ್‌

ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಿಂದ ಎಸ್‌ಟಿ

ಕೋಟಾದಡಿಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷರು ಹಾಗೂ

ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು 

ಎಸ್.ಸಿ.ಬಸವರಾಜು ಅವರನ್ನು ಕಾಂಗ್ರೆಸ್

ಅಭ್ಯರ್ಥಿಯಾಗಿ ಆಯ್ಕೆ ಮಾಡುವಂತೆ ಮಂಡ್ಯ ಜಿಲ್ಲಾ 

ಕಾಂಗ್ರೆಸ್ ಎಸ್ ಟಿ ಮೋರ್ಚದ ಮಾಜಿ ಅಧ್ಯಕ್ಷರು ಹಾಗೂ ತಾಲೂಕು ನಾಯಕ ಸಂಘದ ಅಧ್ಯಕ್ಷರಾದ ಎ ಆರ್ ರಾಜ ನಾಯಕ ರವರು, ತಾಲೂಕು ನಾಯಕ ಸಮಾಜದ ಗೌರವಾಧ್ಯಕ್ಷರಾದ ಕಾರಿಗನಹಳ್ಳಿ ಕುಮಾರ್ ತಾಲೂಕಿನ ನಾಯಕ ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಜಿ.ಪಿ. ಮಹೇಶ್ ನಾಯಕ,

ಒತ್ತಾಯಿಸಿದರು.

 ಮಧ್ಯಮ ಸ್ಟುಡಿಯೋ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎ ಆರ್ ರಾಜ ನಾಯಕ ರವರು ಸನ್ಮಾನ್ಯ ಶ್ರೀಮುಖ್ಯಮಂತ್ರಿ

ಸಿದ್ದರಾಮಯ್ಯ,

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ರವರು

ಹಾಗೂ ಎಲ್ಲಾ ಸಚಿವರು, ಶಾಸಕರು ಈ ಬಾರಿ

ಎಸ್.ಸಿ.ಬಸವರಾಜು ರವರಿಗೆ ಅವಕಾಶ

ಕಲ್ಪಿಸಬೇಕು. ಮತ್ತು

ಬಸವರಾಜು ಪಕ್ಷದ ಬಲವರ್ಧನೆಗೆ ಕೆಲಸ ಮಾಡಿದ್ದಾರೆ ನಮ್ಮ ಸಮಾಜದ ಬಗ್ಗೆ ಅಪಾರ ಕಾಳಜಿ ಉಳ್ಳ ವ್ಯಕ್ತಿಗಳಾಗಿರುತ್ತಾರೆ ಇಂಥವರನ್ನು ಎಂ ಎಲ್ ಸಿ ಮಾಡುವುದರಿಂದ ಪಕ್ಷಕ್ಕೂ ಒಂದು ವಸ್ತು ಶಕ್ತಿ ಸಿಗುವುದರ ಜೊತೆಗೆ ನಮ್ಮ ಸಮಾಜಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ಮತ್ತಷ್ಟು ವಿಶ್ವಾಸ ನಂಬಿಕೆ ಹೆಚ್ಚಾಗುತ್ತದೆ ಎಂದು 

ಸಭೆಯಲ್ಲಿ ಕಾಂಗ್ರೆಸ್ ಮಂಡ್ಯ ಜಿಲ್ಲಾ ಎಸ್ ಟಿ ಮೋರ್ಚಾದ ಮಾಜಿ ಅಧ್ಯಕ್ಷರು ಹಾಗೂ ತಾಲೂಕು ನಾಯಕ ಸಮಾಜದ ಅಧ್ಯಕ್ಷರಾದ ಎಆರ್ ರಾಜನಾಯಕ ರವರು ಮಾತನಾಡಿ ಸರ್ಕಾರಕ್ಕೆ ಮನವಿ ಮಾಡಿದರು.

 ಕೃಷ್ಣರಾಜಪೇಟೆ ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಹಾಗೂ ತಾಲೂಕು ನಾಯಕ ಸಮಾಜದ ಗೌರವಾಧ್ಯಕ್ಷರಾದ ಕಾರಿಗನಹಳ್ಳಿ ಕುಮಾರ್ ಮಾತನಾಡಿ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಆದ ಡಿಕೆ ಶಿವಕುಮಾರ್ ರವರು ಮತ್ತು ನಮ್ಮ ಸಮಾಜದ ಪ್ರಭಾವಿ ಲೋಕೋಪಯೋಗಿ ಸತೀಶ್ ಜಾರಕಿಹೊಳಿ ರವರು ಸಚಿವರು ಶಾಸಕರುಗಳು ಮೈಸೂರು ಮಂಡ್ಯ ಕೊಡಗು ಚಾಮರಾಜನಗರ ಹಾಸನ ವಿಭಾಗದಿಂದ ನಮ್ಮ ಸಮಾಜದ ಮುಖಂಡರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಮ್ಮ ಸಮಾಜದ ಮೇಲೆ ಅಪಾರ ಕಳಕಳಿಯುಳ್ಳ ಎಸ್ ಸಿ ಬಸವರಾಜಣ್ಣ ರವರಿಗೆ ಎಂ ಎಲ್ ಸಿ ಮಾಡುವ ಮೂಲಕ ಸಮಾಜಕ್ಕೆ ಗೌರವ ನೀಡಿ ಶಕ್ತಿ ತುಂಬಿದಂತಾಗುತ್ತದೆ ಎಂದು ತಿಳಿಸಿದರು.

 ಕೃಷ್ಣರಾಜಪೇಟೆ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ರಾಜು ಜಿಪಿ ಮಾತನಾಡಿ ಬಿಜೆಪಿ ಜೆಡಿಎಸ್ ಈ ಹಿಂದೆ ಎರಡು ಪಕ್ಷದವರು ನಮ್ಮ ಸಮಾಜದ ನಾಯಕರಾದ ಜೆಡಿಎಸ್ ಪಕ್ಷದಿಂದ ಚಿಕ್ಕಮದು ಸಾಹೇಬರವರಿಗೆ ಅವಕಾಶ ಮಾಡಿ ಕೊಟ್ಟಿರುತ್ತಾರೆ. ಅದೇ ರೀತಿ ಬಿಜೆಪಿಯಿಂದ ಸಿದ್ದರಾಜು ಅಣ್ಣ ರವರನ್ನು ಆಯ್ಕೆ ಮಾಡಿ ಸಮಾಜಕ್ಕೆ ಶಕ್ತಿ ಮತ್ತು ಗೌರವವನ್ನು ನೀಡಿರುತ್ತಾರೆ ಇದೇ ರೀತಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮತ್ತು ಪ್ರಾಮಾಣಿಕ ಸಮಾಜದ ಬಗ್ಗೆ ಪ್ರೀತಿಯನಿಟ್ಟಿರುವ ಎಸ್‌ಸಿ ಬಸವರಾಜಣ್ಣರವರಿಗೆ ಎಂ ಎಲ್ ಸಿ ಮಾಡುವ ಮೂಲಕ ನಮ್ಮ ಸಮಾಜಕ್ಕೆ ಗೌರವಿಸಬೇಕು ಎಂದು ಮಾಧ್ಯಮದ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಉಪ ಮುಖ್ಯಮಂತ್ರಿಗಳಾದ ಡಿಕೆ

ಶಿವಕುಮಾರ್ ಅವರಿಗೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅಣ್ಣ ರವರಿಗೆ ಸಚಿವರಲ್ಲಿ ಶಾಸಕರಲ್ಲಿ ಸರ್ಕಾರದೊಂದಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

 ಸಮಾಜದ ಮುಖಂಡರಾದ ಮಹೇಶ್ ನಾಯಕ ಮಾತನಾಡಿ ನಮ್ಮ ಸಮಾಜದಲ್ಲಿ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ 15 ಜನ ಶಾಸಕರಿದ್ದು ಪ್ರಭಾವಿ ಸಚಿವರಿದ್ದು ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಆಗಬೇಕಿತ್ತು ಇಲ್ಲ ಉಪಮುಖ್ಯಮಂತ್ರಿ ನೀಡಬೇಕಿತ್ತು ಇದುವರೆಗೂ ಇಂತಹ ಅವಕಾಶವನ್ನು ಸಮಾಜಕ್ಕೆ ದೊರಕಿಲ್ಲ ಇಂಥ ಅವಕಾಶವನ್ನ ಸತೀಶ್ ಜಾರಕಿಹೊಳ್ಳೋರಿಗೆ ಕಾಂಗ್ರೆಸ್ ಸರ್ಕಾರ ಮುಂದಿನ ದಿನ ನೀಡಲಿ ಎಂದು ಕೇಳುವ ಮೂಲಕ ಈ ಬಾರಿ ಎಸ್ ಸಿ ಬಸವರಾಜ್ ಅಣ್ಣ ರವರನ್ನು ಎಂ ಎಲ್ ಸಿ ಮಾಡಿಸುವ ಮೂಲಕ ನಮ್ಮ ಸಮಾಜ ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ಗೌರವ ನಂಬಿಕೆಯನ್ನು ಉಳಿಸಿಕೊಂಡಂತಾಗುತ್ತದೆ ಎಂದು ತಿಳಿಸಿದರು.  

 ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಬೊಮ್ಮರಾಯ ನಾಯಕ, ರಾಮ ನಾಯಕ, ಮಂಜು ನಾಯಕ ಹಾಗೂ ಸಮಾಜದ ಮುಖಂಡರು ಮತ್ತು ಇದ್ದರು ವಸಿತರಿದ್ದರು.

 *ವರದಿ,ರಾಜು ಜಿಪಿ ಕಿಕ್ಕೇರಿ*

What's Your Reaction?

like

dislike

love

funny

angry

sad

wow