ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ - ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಆನಂದ್

ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ - ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಆನಂದ್

ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನ ಮಾಡಿರುವುದು ಖಂಡನೀಯ - ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಆನಂದ್ 

ಒಕ್ಕಲಿಗರ ಸಮಾಜದ ಬಗ್ಗೆ ಅವಹೇಳನ ಮಾಡಿ, ಒಕ್ಕಲಿಗ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ಹೀನಾಯವಾಗಿ ಮಾತನಾಡಿರುವ ಎನ್ ಬೊರಲಿಂಗಯ್ಯನವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ಕಸಾಪ ಹಾಸನ ಜಿಲ್ಲಾಧ್ಯಕ್ಷರಾದ ಹೆಚ್.ಎನ್ ಮಲ್ಲೇಶಗೌಡರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಆನಂದ್ ಕಾಳೇನಹಳ್ಳಿ ಆಗ್ರಹಿಸಿದ್ದಾರೆ.

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ಚನ್ನರಾಯಪಟ್ಟಣ ತಾಲ್ಲೂಕಿನ ಕಸಬಾ ಹೋಬಳಿಯ ಕಲ್ಕೆರೆ ಗ್ರಾಮದಲ್ಲಿ ನಡೆದ ಕಸಬಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಕ್ಕಲಿಗ ಸಮುದಾಯದ ಬಗ್ಗೆ ಹೀನಾಯವಾಗಿ ಮಾತನಾಡಿರುವುದು, ಅದು ಅಲ್ಲದೇ ಒಂದು ಸಮುದಾಯದ ಸಂಸ್ಕೃತಿ, ಇತಿಹಾಸ ಬಗ್ಗೆ ಪ್ರಶ್ನೆ ಮಾಡಿರುವುದು ಖಂಡನೀಯವಾದ ವಿಚಾರ, ಅವಹೇಳನಕಾರಿಯಾದ ಹೇಳಿಕೆ ನೀಡುವಾಗ ಆಯೋಜಕರುಗಳು ಏನ್ ಮಾಡ್ತ ಇದ್ರು, 

ಆಯೋದ್ಯೆಯ ರಾಮ ದೇವರ ಬಗ್ಗೆ ಮಾತನಾಡಲು ಪ್ರಾರಂಭ ಮಾಡಿದ ತಕ್ಷಣ ಚೀಟಿ ಕೊಟ್ಟು ಮಾತನಾಡಬಾರದೆಂಬ ಮಾಹಿತಿ ನೀಡಿದವರಿಗೆ, ಒಕ್ಕಲಿಗರ ಸಮಾಜದ ಬಗ್ಗೆ ಮಾತನಾಡಬಾರದು ಅಂತ ಆಯೋಜಕರು ಹೇಳಲಿಲ್ಲ ಯಾಕೆ ಎಂದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ವಿಶ್ವೇಶ್ವರಯ್ಯ ಅಂತ ಹೇಳ್ತಾರಲ್ಲ ಬುದಿ ಇಲ್ವೇ ಇವರಿಗೆ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ ಕನಸಿನ ಕೂಸು ಕನ್ನಡ ಸಾಹಿತ್ಯ ಪರಿಷತ್ ಅದು ಬಿಟ್ಟು ಬೇರೆಯವರ ಹೆಸರು ಹೇಳುವುದು ಎಷ್ಟರ ಮಟ್ಟಿಗೆ ಸರಿ ಅನಿಸುತ್ತೆ, ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಆಯೊಜಕರಾದ ಹಾಸನ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಹೆಚ್ ಎಲ್ ಮಲ್ಲೇಶ್ ಗೌಡ, ಚನ್ನರಾಯಪಟ್ಟಣ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್ಎನ್ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಅಧ್ಯಕ್ಷರಾದ ಶೆಟ್ಟಿಹಳ್ಳಿ ದಯಾನಂದ್ ಇವರುಗಳು ನೈತಿಕ ಹೊಣೆಯನ್ನು ಹೊತ್ತು ಈ ಕೂಡಲೇ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಎನ್.ಬೋರಲಿಂಗಯ್ಯನವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಇಲ್ಲದಿದ್ದರೇ ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

What's Your Reaction?

like

dislike

love

funny

angry

sad

wow