ಶ್ರೀ ಕುಂದೂರು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ಜ.17ರಿಂದ 20ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಹಾಸನ ಶಾಖಾ ಮಠದ ಶಂಭುನಾಥಸ್ವಾಮಿ ತಿಳಿಸಿದರು.

ಶ್ರೀ ಕುಂದೂರು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ಜ.17ರಿಂದ 20ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಹಾಸನ ಶಾಖಾ ಮಠದ ಶಂಭುನಾಥಸ್ವಾಮಿ ತಿಳಿಸಿದರು.

ಚನ್ನರಾಯಪಟ್ಟಣ: ಶ್ರೀ ಕುಂದೂರು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ವತಿಯಿಂದ ಜ.17ರಿಂದ 20ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಹಾಸನ ಶಾಖಾ ಮಠದ ಶಂಭುನಾಥಸ್ವಾಮಿ ತಿಳಿಸಿದರು. 

ಅವರು ಪಟ್ಟಣದ ಗಣಪತಿ ದೇವಸ್ಥಾನದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿರುವ ಕುಂದೂರು ಕ್ಷೇತ್ರವು ಸಾವಿರಾರು ವರ್ಷಗಳ ಪ್ರಾಚೀನತೆಯನ್ನು ಹೊಂದಿರುವ, ಭಕ್ತರು, ಯಾತ್ರಿಕರು ಮತ್ತು ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ತಾಣವಾಗಿದೆ. ಪ್ರಶಾಂತವಾದ ಪುಣ್ಯಕ್ಷೇತ್ರದ ಪ್ರಧಾನ ದೇವತೆ ಶ್ರೀ ಮೆಳೆಯಮ್ಮ ದೇವಿ, ಶ್ರೀ ರಂಗನಾಥಸ್ವಾಮಿ, ಶ್ರೀ ಈಶ್ವರ ಸ್ವಾಮಿ, ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ಹಾಗೂ ಸಹ ಪರಿವಾರ ದೇವರುಗಳ ಹಾಗೂ ಶ್ರೀ ಕ್ಷೇತ್ರ ಕುಂದೂರು ಮಠದ ಪರದೇಶಿ ಸ್ವಾಮೀಜಿಗಳ ಸ್ಮರಣೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದು ಉದ್ಘಾಟನೆಯನ್ನು ಶಾಸಕ ಹೆಚ್. ಡಿ. ರೇವಣ್ಣ ನೆರವೇರಿಸಲಿದ್ದು ಉಪಸ್ಥಿತಿಯನ್ನು ಡಾ.ಸೂರಜ್‌ರೇವಣ್ಣ ವಹಿಸಲಿದ್ದಾರೆ.

ಜ.17ರಂದು 1945ರ ವರ್ತಮಾನಕ್ಕೆ ಸಲ್ಲುವ ಶ್ರೀ ಶೋಭಕೃತ್ ನಾಮ ಸಂವತ್ಸರದ ಮಾರ್ಗಶಿರ ಶುಕ್ಲಪಕ್ಷ ಪ್ರಾತಃಕಾಲದಲ್ಲಿ ಗೋಪೂಜೆ, ಶ್ರೀ ಗಣಪತಿ ಹೋಮ, ವಾಸ್ತು ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ಲಲಿತ ಸಹಸ್ರನಾಮ, ಸುಮಂಗಲಿಯರಿAದ ಸಾಮೂಹಿಕ ಕುಂಕುಮಾರ್ಚನೆ, ಶ್ರೀಗಳ ಅಮೃತ ಹಸ್ತದಿಂದ ಧರ್ಮಧ್ವಜಾರೋಹಣ ಹಾಗೂ ರಥಕ್ಕೆ ನವಕಲಶಾರೋಹಣ ನಡೆಯಲಿದೆ.

ಜ.18ರಂದು ಉಪವಾಸ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ ಮತ್ತು ಸರ್ಪೋತ್ಸವ ಸಂಜೆ6.30ಕ್ಕೆ ಧಾರ್ಮಿಕ ಸಮಾರಂಭ ಜರುಗಲಿದೆ. ಜ.19ರಂದು ಶ್ರೀ ರಂಗನಾಥ ಸ್ವಾಮಿ ರಥೋತ್ಸವ ಹಾಗೂ ಗರುಡೋತ್ಸವ. ಜ.20ರಂದು ಶ್ರೀಕ್ಷೇತ್ರ ಕುಂದೂರು ಮಹಾಸಂಸ್ಥಾನದ ಹಿಂದಿನ ಪೀಠಾಧ್ಯಕ್ಷರಾದ ಪರದೇಶಿರಾಮಯ್ಯನವರ ಪುಣ್ಯಾರಾಧನೆ ಹಾಗೂ ಗುರುಸಂಸ್ಮರಣೋತ್ಸವ. ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪನೆ ನಡೆಯಲಿದೆ ಆದ್ದರಿಂದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಬ್ಬಳಿ ಶಾಖಾ ಮಠದ ಶಿವಪುತ್ರ ಸ್ವಾಮೀಜಿ ಇದ್ದರು.

What's Your Reaction?

like

dislike

love

funny

angry

sad

wow