ಮುತ್ತತ್ತಿಯ ಮುತ್ತುರಾಯಸ್ವಾಮಿಯ ವಿಶೇಷತೆಗಳು ಏನು ಭಕ್ತರ ಮನದಾಳದ ಮಾತನ್ನು ಕೇಳಿ ?

ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು ಪ್ರದೇಶವಾಗಿದೆ ಎಂಬ ಪ್ರತೀತಿ ಇದೆ. ಇಲ್ಲಿ ಪ್ರಸಿದ್ಧವಾದ ಹನುಮಾನ ಮಂದಿರವಿದೆ ಅದಕ್ಕೆ ಸ್ಥಳೀಯರು ಹನುಮಂತರಾಯ ದೇವಸ್ಥಾನವೆಂದು ಕರೆಯುತ್ತಾರೆ.

ಮುತ್ತತ್ತಿ[೧] ಕರ್ನಾಟಕ ರಾಜ್ಯ, ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ [೨]. ಕಾವೇರಿ ನದಿ ನೀರಿನಲ್ಲಿ ಭಾರಿ ಜನಪ್ರಿಯ ಸಾಹಸಕ್ರೀಡೆ ಕೋರಲ್ ರೈಡ್ ನ್ನು ಇಲ್ಲಿ ಪ್ರವಾಸಿಗರು ಆನಂದಿಸಬಹುದು. ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ[೩] ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ.

ಮಳವಳ್ಳಿ ಪಟ್ಟಣವು ಮಂಡ್ಯ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ರೈತರನ್ನು ಒಳಗೊಂಡಿರುವುದು ಈ ತಾಲೂಕಿನ ವಿಶೇಷವಾಗಿದೆ. ಮಳವಳ್ಳಿ ಇದು ಮಂಡ್ಯ ಜಿಲ್ಲೆಯ ಒಂದು ತಾಲ್ಲೂಕು. ಜಿಲ್ಲೆಯ ಆಗ್ನೇಯ ಭಾಗದಲ್ಲಿರುವ ಈ ತಾಲ್ಲೂಕನ್ನು ಪಶ್ಚಿಮ ಮತ್ತು ದಕ್ಷಿಣದಲ್ಲಿ ಟಿ.ನರಸೀಪುರ,ಪೂರ್ವದಲ್ಲಿ ಕನಕಪುರ,ಆಗ್ನೇಯದಲ್ಲಿ ಕೊಳ್ಳೇಗಾಲ,ವಾಯುವ್ಯದಲ್ಲಿ ಮಂಡ್ಯ,ಉತ್ತರದಲ್ಲಿ ಮದ್ದೂರು ಮತ್ತು ಚನ್ನಪಟ್ಟಣ- ಈ ತಾಲ್ಲೂಕುಗಳು ಸುತ್ತುವರಿದಿವೆ. ಕಿರುಗಾವಲು, ಬೊಪ್ಪಗೌಡನಪುರ, ಮಳವಳ್ಳಿ,ಮತ್ತು ಹಲಗೂರು ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ 804 ಚ.ಕಿಮೀ.

ಮಳವಳ್ಳಿ ತಾಲ್ಲೂಕು ಮೊದಲು ಮೈಸೂರು ಜಿಲ್ಲೆಗೆ ಸೇರಿತ್ತು. 1939 ಜುಲೈ 1 ರಂದು ಹೊಸದಾಗಿ ರಚಿಸಲ್ಪಟ್ಟ ಮಂಡ್ಯ ಜಿಲ್ಲೆಗೆ ಸೇರಿತು. ಈ ತಾಲ್ಲೂಕು ಕಾವೇರಿ ನದಿಯ ಕಣಿವೆಯಲ್ಲಿ ಸಮುದ್ರಮಟ್ಟದಿಂದ ಸುಮಾರು 762 ಮೀಟರ್ ನಿಂದ 914 ಮೀಟರ್ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಮುಂದುವರೆದ ಕಣಶಿಲೆಯ ಬೆಟ್ಟಗಳು ಕಂಡುಬರುತ್ತವೆ. ಮಳವಳ್ಳಿ ಮಂಡ್ಯದಿಂದ ಸುಮಾರು 60 ಕಿಮೀ ದೂರದಲ್ಲಿದೆ,ಮೈಸೂರಿನಿಂದ 87 ಕಿಮೀ ಮತ್ತು ಬೆಂಗಳೂರಿನಿಂದ 106ಕಿಮೀ ದೂರದಲ್ಲಿದೆ. ಮದ್ದೂರಿನಿಂದ 55 ಕಿಲೋ ಮೀಟರ್ ದೂರದಲ್ಲಿದೆ.

ಹತ್ತಿರದ ಪ್ರವಾಸ ತಾಣಗಳು:-

ಬಸವನಬೆಟ್ಟ, ಬೆಂಕಿ ಫಾಲ್ಸ್(ಗಾಣಾಳು ಫಾಲ್ಸ್ ),ಶಿವನ ಸಮುದ್ರ - ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ವಿಶ್ವದ ಎರಡು ಪ್ರಮುಖ 100 ಜಲಪಾತಗಳಲ್ಲಿ ಎರಡಾಗಿವೆ. ಇಡೀ ಏಷ್ಯಾದಲ್ಲೇ ಪ್ರಪ್ರಥಮ ಜಲವಿದ್ಯುತ್ಗಾರ ಇಲ್ಲಿ ಸ್ಥಾಪಿಸಲಾಯಿತು...

ಕಿರುಗಾವಲು,ಇದು ಮಂಡ್ಯ ಜಿಲ್ಲೆಯ ಪ್ರಮುಖ ವ್ಯಾಪಾರಿ ತಾಣ ಪ್ರತಿ ಶನಿವಾರ ಸಾವಿರಾರು ಜನರು ವ್ಯಾಪಾರ ಮಾಡಲು ಬರುತ್ತಾರೆ.

ಹಲಗೂರು,ಇದು ತಾಲೂಕಿನ ಪ್ರಮುಖ ವ್ಯಾಪಾರ ಕೇಂದ್ರ. ಸುತ್ತ ಮುತ್ತಲಿನ ಗ್ರಾಮಗಳ ಜನರು ಎಲ್ಲಾ ದಿನ ಬಳಕೆಯ ವಸ್ತುಗಳನ್ನು ಕೊಂಡುಕೊಳ್ಳಲು ಪ್ರತಿನಿತ್ಯ ಸಾವಿರಾರು ಮಂದಿ ಬರುತ್ತಾರೆ. ಇದು ಬೆಂಗಳೂರಿನಿಂದ ಸುಮಾರು 106 ಕಿ.ಮೀ.ದೂರವಿದೆ ಮತ್ತು ಮಂಡ್ಯದಿಂದ ಸುಮಾರು 60 ಕಿ.ಮೀ ದೂರವಿದೆ.

ಮುತ್ತತ್ತಿ, ಇದು ಈ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದು. ಬೆಂಗಳೂರಿನಿಂದ ಮಳವಳ್ಳಿ ಮಾರ್ಗ ಹಲಗೂರು ಇಂದ 22 ಕಿ.ಮೀ. ಕರಲಕಟ್ಟೆ ಮಾರ್ಗದಲ್ಲಿ ಇದೆ. ಮುತ್ತತ್ತಿ ಎಂಬ ಹೆಸರು ಬರಲು ಕಾರಣಕರ್ಥು ಶ್ರೀ ಆಂಜನೇಯ ಸ್ವಾಮಿ ರಾಮಾಯಣದಲ್ಲಿ ಸೀತಾದೇವಿಯು ನದಿಯಲ್ಲಿ ಸ್ನಾನ ಮಾಡುವಾಗ ಮೂಗುತಿ ನದಿಯಲ್ಲಿ ಜಾರಿದಾಗ ಸೀತಾಮಾತೆಯು ಆಂಜನೆಯಸ್ವಾಮಿಯ ಬಳಿ ಬಿನ್ನವಿಸಿದಾಗ ಸ್ವಾಮಿಯು ತನ್ನ ಬಾಲದಿಂದ ಮೂರು ಸುತ್ತು ಸುತ್ತಿ ಮೂಗುತಿಯನ್ನು ಎತ್ತಿ ಕೊಟ್ಟನೆಂಬ ಪ್ರತೀತಿಯಿದೆ, ಆ ಸ್ತಳದಲ್ಲಿ ಈಗಲು ಕಾವೇರಿ ನದಿ ನೀರೆಲ್ಲ ಮೂರು ಸುತ್ತು ಸುತ್ತಿ ಮುಂದೆ ಸಾಗುತ್ತದೆ, ಆ ಸ್ತಳಕ್ಕೆ "ತಿರುಗಣೆ ಮಡ"ಎಂಬ ಹೆಸರು.
ಬೊಪ್ಪೆಗೌಡನಪುರ : ಐತಿಹಾಸಿಕ ಮತ್ತು ಜನಪದ ಪ್ರಮುಖ ಸ್ಥಳ. ಇದು ಹೋಬಳಿ ಕೇಂದ್ರವಾಗಿದ್ದು, ಪ್ರವಾಸಿ ಸ್ಥಳವಾದ ತಲಕಾಡು ಮತ್ತು ಮುಡುಕುತೊರೆಗೆ ಸಮೀಪದಲ್ಲಿದೆ.

ಹಲಗೂರು ಹೋಬಳಿಯಲ್ಲಿರುವ ಮುತ್ತತ್ತಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಪ್ರಸಿದ್ದ ಯಾತ್ರಾ ಸ್ಥಳ ಹಾಗೂ ಪ್ರವಾಸಿ ತಾಣವಾಗಿದೆ. ಕಾವೇರಿ ನದಿಯ ಹರಿವಿನ ಸುಂದರ ಪ್ರಕೃತಿ ಸೌಂದರ್ಯದೊಂದಿಗೆ ಕಂಗೊಳಿಸುವ ಚಿಕ್ಕ ಗ್ರಾಮವೇ ಮುತ್ತತ್ತಿ. ಕಾವೇರಿ ನದಿ ನೀರಿನಲ್ಲಿ ಭಾರಿ ಜನಪ್ರಿಯ ಸಾಹಸಕ್ರೀಡೆ ಕೋರಲ್ ರೈಡ್ ನ್ನು ಇಲ್ಲಿ ಪ್ರವಾಸಿಗರು ಆನಂದಿಸಬಹುದು. ಕಾವೇರಿ ವನ್ಯಜೀವಿ ಧಾಮ ಮತ್ತು ದಟ್ಟ ಅರಣ್ಯಗಳಿಂದ ಸುತ್ತುವರಿದಿರುವ ಮುತ್ತತ್ತಿ ಗ್ರಾಮದ ಪ್ರಕೃತಿ ಸೌಂದರ್ಯ ಮನ ಸೆಳೆಯುತ್ತದೆ. ರಮಣೀಯ ಕಣಿವೆ, ರಭಸದಿಂದ ಹರಿಯುವ ನೀರಿನ ಸೆಳವುಳ್ಳ ಸಣ್ಣ ಹಳ್ಳಗಳು ಇಲ್ಲಿವೆ. ಹಲವಾರು ಬಗೆಯ ಪ್ರಾಣಿ ಪಕ್ಷಿಗಳು ಈ ಅರಣ್ಯದಲ್ಲಿ ನೆಲೆಸಿವೆ.
ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ಮುತ್ತತ್ತಿ ಪೌರಾಣಿಕ ಮಹಾಕಾವ್ಯವಾದ ರಾಮಾಯಣದಲ್ಲಿ ಬರುವ ಒಂದು ಪ್ರದೇಶವಾಗಿದೆ ಎಂಬ ಪ್ರತೀತಿ ಇದೆ.ಇಲ್ಲಿ ಪ್ರಸಿದ್ಧವಾದ ಹನುಮಾನ್ ಮಂದಿರವಿದೆ ಅದಕ್ಕೆ ಸ್ಥಳೀಯರು ಹನುಮಂತರಾಯ ದೇವಸ್ಥಾನವೆಂದು ಕರೆಯುತ್ತಾರೆ.
ಶ್ರೀ ಆಂಜನೇಯಸ್ವಾಮಿ ಮೂರ್ತಿಯು ಮುತ್ತತ್ತಿಯಲ್ಲಿ ಭೂಮಿಯಿಂದ ಮೂಡಿದ್ದು ಸದರಿ ಜಾಗದಲ್ಲಿ ಮೂಡಿರುವ ಮೂರ್ತಿಯನ್ನು ಭೂಮಿಯಲ್ಲೇ ಹೂತು ಹನುಮಂತನ ವಿಗ್ರಹವನ್ನು ಕೆತ್ತಿಸಿ ಪ್ರತಿಷ್ಠಾಪನೆ ಮಾಡಿ ಆ ಜಾಗದಲ್ಲಿ ದೇವಸ್ಥಾನವನ್ನು 1986-87ನೇ ಸಾಲಿನಲ್ಲಿ ಸಾರ್ವಜನಿಕ ಭಕ್ತಾಧಿಗಳ ವಂತಿಕೆಯಿಂದ ಹಣ ಕ್ರೂಢೀಕರಿಸಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಸದರಿ ಜಾಗದಲ್ಲಿ ನಿರ್ಮಿಸಿರುವ ಹನುಮಂತನು ಸಾರ್ವಜನಿಕ ಭಕ್ತಾಧಿಗಳಿಗೆ ಅಭಯ ಹಸ್ತವನ್ನು ನೀಡುತ್ತಾ ನೆಲೆಸಿದ್ದರಿಂದ ಆ ಜಾಗವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.

ರಾಮಾಯಣದ ಕಾಲದಲ್ಲಿ ಶ್ರೀರಾಮಚಂದ್ರಪ್ರಭು ಲಂಕಾಧಿಪತಿ ರಾವಣನನ್ನು ಕೊಂದು ವಿಭೀಷಣನಿಗೆ ಪಟ್ಟಕಟ್ಟಿ, ಶ್ರೀ ರಾಮಚಂದ್ರಪ್ರಭು, ಸೀತಾಮಾತೆ,ಲಕ್ಷ್ಮಣ ಮತ್ತು ಆಂಜನೇಯರ ಸಮೇತ ಲಂಕೆಯಿಂದ ಅಯೋಧ್ಯೆಗೆ ಹಿಂದಿರುಗಿ ಹೋಗುವಾಗ ಬಸವನ ಬೆಟ್ಟ ಅರಣ್ಯ ಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಒಂದು ದಿನ ಇಲ್ಲೇ ತಂಗಿ ಹೋಗಲು ನಿರ್ಧರಿಸುತ್ತಾರೆ ಮರುದಿನ ಬೆಳಗ್ಗೆ ಕಾವೇರಿ ನದಿ ತೀರದಲ್ಲಿರುವ ತಿರುಗಣೆ ಮಡುವಿನಲ್ಲಿ ಕುಳಿತು ತಾಯಿ ಸೀತಾಮಾತೆದೇವಿ ಸ್ನಾನ ಮಾಡುತ್ತಿದ್ದಾಗ ಸೀತಾಮಾತೆಯ ಮುತ್ತಿನ ಮೂಗುತಿಯು ಕಾವೇರಿ ನದಿಯಲ್ಲಿ ಬಿದ್ದು ಹೋಗಿರುವುದಾಗಿ ತನ್ನ ಪತಿಯಾದ ಶ್ರೀ ರಾಮರಿಗೆ ಹೇಳಿದಾಗ ಅಲ್ಲೇ ಇದ್ದ ಹನುಮಂತನು ನೀರಿನಲ್ಲಿದ್ದ ಮೂಗುತಿಯನ್ನು ಹುಡುಕಲು ಶ್ರೀ ರಾಮಚಂದ್ರ ಪ್ರಭು ಹೇಳುತ್ತಾರೆ ಅವರ ಆಜ್ಞೆಯಂತೆ ಆಂಜನೇಯಸ್ವಾಮಿ ಅವರು ತನ್ನ ಬಾಲವನ್ನು ನೀರಿನಲ್ಲಿ ತಿರುಗಿಸಿ ನೀರಿನಲ್ಲಿ ಕಳೆದುಹೋಗಿದ್ದ ಮುತ್ತಿನ ಮೂಗುತಿ ಕಾಣಿಸಿದಾಗ ಹನುಮಂತನು ಮೂಗುತಿಯನ್ನು ಸೀತಾಮಾತೆಗೆ ನೀಡಿದನು. ಹನುಮಂತ ಬಾಲವನ್ನು ನೀರಿನಲ್ಲಿ ತಿರುಗಿಸಿದ ರಭಸಕ್ಕೆ ಆ ಜಾಗದಲ್ಲಿ ಇಂದಿಗೂ ಕಾವೇರಿ ನದಿಯ ನೀರು ಒಂದು ಸುತ್ತು ತಿರುಗಿ ಹೋಗುತ್ತದೆ ಆದಕಾರಣ ಆ ಸ್ಥಳಕ್ಕೆ ತಿರುಗಣೆಮಡು ಎಂದು ಕರೆದು ಪ್ರಸಿದ್ದಿಯಾಗಿದೆ. ಹನುಮಂತನು ಸೀತಾಮಾತೆಗೆ ಮುತ್ತಿನ ಮೂಗುತಿಯನ್ನು ತನ್ನ ಬಾಲದಲ್ಲಿ ಕೊಟ್ಟಿರುವುದಕ್ಕೆ ತಾಯಿ ಸೀತಾಮಾತೆದೇವಿ ಆಂಜನೇಯಸ್ವಾಮಿ ಅವರನ್ನು ಮುತ್ತೆತ್ತಿರಾಯನೆಂದು ಹೆಸರು ಕರೆದರು. ಅಂದರೆ ಸೀತಾಮಾತೆಯ ಮುತ್ತಿನ ಮೂಗುತಿಯನ್ನು ಬಾಲದಲ್ಲಿ ಎತ್ತಿಕೊಟ್ಟ ಕಾರಣ ಮುತ್ತೆತ್ತಿರಾಯ ಎಂಬ ಹೊಸ ನಾಮಕರಣವನ್ನು ತಾಯಿ ಸೀತಾದೇವಿ ಮಾಡಿದರು, ಹಾಗೂ ಆಂಜನೇಯಸ್ವಾಮಿಯನ್ನು ಈ ಕ್ಷೇತ್ರದಲ್ಲಿ ಮುತ್ತೆತ್ತಿರಾಯಸ್ವಾಮಿಯಾಗಿ ನೆಲೆಸು ಹಾಗೂ ಈ ಕ್ಷೇತ್ರಕ್ಕೆ ಮುತ್ತತ್ತಿ ಎಂದು ಹೆಸರು ಈಗ ಆ ಸ್ಥಳವನ್ನು ಮುತ್ತತ್ತಿಯೆಂದು ಕರೆಯುತ್ತಾರೆ.
ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಕೋಣ, ಕಾಡುಹಂಡಿ, ವಿವಿಧ ತಳಿಯ ಅಳಿಲು, ಜಿಂಕೆ, ಸಾಂಬಾರ್ ಮುಂತಾದ ಪ್ರಾಣಿಗಳು ಈ ಕಾಡಿನಲ್ಲಿ ನೆಲೆಸಿವೆ.ಮತ್ತೊಂದು ಪ್ರವಾಸಿ ತಾಣವಾಗಿರುವ ಭೀಮೇಶ್ವರಿ ಬಳಿ ಇರುವ ಮುತ್ತತ್ತಿ ಸುಂದರ ಪ್ರಾಕೃತಿಕ ಸೌಂದರ್ಯದೊಂದಿಗೆ ಚಾರಣಪ್ರಿಯರಿಗೆ ಸಂತಸ ಮೂಡಿಸುತ್ತದೆ. ಅದಕ್ಕೆಂದೇ ಅತೀ ಹೆಚ್ಚಿನ ಪ್ರಮಾಣದ ಚಾರಣಪ್ರಿಯರು ಇಲ್ಲಿಗೆ ಬರುತ್ತಾರೆ.ಅರಣ್ಯ ಇಲಾಖೆಯ ಅನುಮತಿಯೊಂದಿಗೆ ಈ ಅರಣ್ಯದಲ್ಲಿ ಪ್ರವಾಸಿಗರು ಚಾರಣ ಕೈಗೊಳ್ಳಬಹುದು.
ಇಲ್ಲಿರುವ ಸೊಲಿಗೆರೆ ಬೆಟ್ಟ ಸಮುದ್ರ ಮಟ್ಟದಿಂದ 1125 ಮೀ. ನಷ್ಟು ಎತ್ತರದಲ್ಲಿರುವ ಸೊಲಿಗೆರೆ ಬೆಟ್ಟದಿಂದ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿಂದ ಚಾರಣ ಮಾಡುತ್ತ ನಿಸರ್ಗಧಾಮವನ್ನು ನೋಡುತ್ತ ಭೀಮೇಶ್ವರಿ ಮತ್ತು ಸಂಗಮ ತಲುಪಬಹುದು. ಬೆಂಗಳೂರಿನ ಜನತೆಗೆ ಭೀಮೇಶ್ವರಿಯಲ್ಲಿ ಇರುವ ಫಿಶಿಂಗ್ ಕ್ಯಾಂಪ್ ಮತ್ತು ಮುತ್ತತ್ತಿಯು ಅಚ್ಚುಮೆಚ್ಚಿನ ಪಿಕ್ ನಿಕ್ ತಾಣವಾಗಿದೆ. ಪ್ರವಾಸಿಗರು ಇಲ್ಲಿ ಪ್ರಕೃತಿ ಸೌಂದರ್ಯ, ಕಾವೇರಿ ನದಿ, ಅರಣ್ಯ ಹಾಗೂ ಚಾರಣದಂತಹ ಸಾಹಸಕ್ರೀಡೆಯನ್ನು ಆನಂದಿಸಬಹುದು.

What's Your Reaction?

like

dislike

love

funny

angry

sad

wow