ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ವೃತ್ತಿ ಕೌಶಲ್ಯ ಮಾರ್ಗದರ್ಶನಕ್ಕೆ ಒತ್ತು ನೀಡಿ ಕೆಲಸ ಮಾಡುತ್ತಿದೆ ಎಂದು ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಮಹಿಳಾ ಸಬಲೀಕರಣ ಹಾಗೂ ವೃತ್ತಿ ಕೌಶಲ್ಯ ಮಾರ್ಗದರ್ಶನಕ್ಕೆ ಒತ್ತು ನೀಡಿ ಕೆಲಸ ಮಾಡುತ್ತಿದೆ  ಎಂದು ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು

ಅವರು ಇಂದು ತಾಲ್ಲೂಕಿನ ಹರಿಹರಪುರ ಗ್ರಾಮದ ಹರಿಹರೇಶ್ವರ ದೇವಾಲಯದ ಆವರಣದಲ್ಲಿ ನಡೆದ ವಲಯ ಮಟ್ಟದ ಸಾಧನಾ ಸಮಾವೇಶ ಮತ್ತು ಸಹಸ್ರ ಬಿಲ್ವಾರ್ಚನೆ ಪೂಜಾ ಕಾರ್ಯಕ್ರಮ ಹಾಗೂ ಬೀದಿ ವ್ಯಾಪಾರಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಧರ್ಮಸ್ಥಳ ಸಂಸ್ಥೆಯ ವತಿಯಿಂದ ಕೈಗೊಳ್ಳದ ಜನಪರವಾದ ಕಾರ್ಯಕ್ರಮಗಲಿಲ್ಲ ಎನ್ನುವಂತೆ ತುಳಿತಕ್ಕೊಳಗಾದವರು, ಶೋಷಿತರು ಹಾಗೂ ಬಡ ಜನರ ಜೀವನ ನಿರ್ವಹಣೆಗೆ ಬೇಕಾದ ಎಲ್ಲಾ ಬಗೆಯ ಸೌಲಭ್ಯಗಳನ್ನು ಸಕಾಲಕ್ಕೆ ಸರಿಯಾಗಿ ಒದಗಿಸಿಕೊಟ್ಟು ಗ್ರಾಮ ವಿಕಾಸಕ್ಕಾಗಿ ದುಡಿಯುತ್ತಿರುವ ಧರ್ಮಸ್ಥಳ ಸಂಸ್ಥೆಯು ನೊಂದವರು ಹಾಗೂ ಮಹಿಳೆಯರಿಗೆ ದಾರಿ ದೀಪವಾಗಿದೆ ಎಂದು ಕೇಶವ ದೇವಾಂಗ ಅಭಿಮಾನದಿಂದ ಹೇಳಿದರು.

ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೀದಿ ಬದಿ ವ್ಯಾಪಾರಿಗಳ ಸಂಘವನ್ನು ಉದ್ಘಾಟಿಸಿ ಮಾತನಾಡಿ ಧರ್ಮಸ್ಥಳ ಸಂಘವು ಮಹಿಳೆಯರು ಮಾತ್ರವಲ್ಲದೆ ಶ್ರೀಸಾಮಾನ್ಯರ ಆರ್ಥಿಕ ಅಭಿವೃದ್ಧಿಗೆ ವರದಾನವಾಗಿದೆ. ಸರ್ಕಾರಿ ಬ್ಯಾಂಕುಗಳ ಮೂಲಕ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಕೊಡಿಸಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸುವ ಮೂಲಕ ಯುವಜನರು ಸ್ವಾವಲಂಬಿ ಸದೃಢ ಜೀವನ ನಡೆಸಲು ಮಾರ್ಗದರ್ಶಿಯಾಗಿದೆ. ಸಾಮೂಹಿಕ ಸತ್ಯನಾರಾಯಣ ಹಾಗೂ ಲಕ್ಷ್ಮೀ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಬದ್ಧತೆಯಿಂದ ಮಾಡುತ್ತಿದೆ ಎಂದು ಮಲ್ಲಿಕಾರ್ಜುನ ಹೇಳಿದರು. ಹರಿಹರಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದ್ರಮ್ಮ ಮಂಜೇಗೌಡ, ಸಮಾಜ ಸೇವಕರಾದ ವಿಶ್ರಾಂತ ಇಂಜಿನಿಯರ್ ಲಕ್ಷ್ಮೀಪುರ ಕುಮಾರಸ್ವಾಮಿ, ಯೋಜನಾಧಿಕಾರಿ ವೀರೇಶಪ್ಪ, ಜನಜಾಗೃತಿ ವೇದಿಕೆ ಸದಸ್ಯ ಡಿ. ಸಿ.ಕುಮಾರ್, ಸ್ಥಳೀಯ ಒಕ್ಕೂಟದ ಅಧ್ಯಕ್ಷೆ ಯಶೋದಮ್ಮ, ಮುಖಂಡರಾದ ಲಕ್ಷ್ಮೀಪ್ರಸನ್ನ, ಗಂಜಿಗೆರೆ ಮಹೇಶ್, ಕೆ.ಆರ್.ನೀಲಕಂಠ, ಮೇಲ್ವಿಚಾರಕಿ ಭಾಗ್ಯಮ್ಮ, ಸೇವಾಪ್ರತಿನಿಧಿಗಳಾದ ಯಶೋದಾ, ಗೀತಾ, ಶೋಭಾ, ಲಲಿತ, ಲಕ್ಷ್ಮೀದೇವಿ ಸೇರಿದಂತೆ ಪ್ರಗತಿ ಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸದಸ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 *ವರದಿ,ರಾಜು ಜಿ ಪಿ ಕಿಕ್ಕೇರಿ ಕೆ ಆರ್ ಪೇಟೆ

*

What's Your Reaction?

like

dislike

love

funny

angry

sad

wow