ಅಮವಾಸ್ಯೆ ಎಂಬ ಭಯವನ್ನೋಡಿಸಿ ಅಕ್ಷರದ ಬೆಳಕನ್ನು ಚೆಲ್ಲಬೇಕಿದೆ ಶ್ರೀಧರ್ಮಸ್ಥಳ‌ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಶ್ರೀಮತಿ ಮಮತಾಶೆಟ್ಟಿ ಅಭಿಪ್ರಾ ವ್ಯಕ್ತಪಡಿಸಿದರು

ಅಮವಾಸ್ಯೆ ಎಂಬ ಭಯವನ್ನೋಡಿಸಿ ಅಕ್ಷರದ ಬೆಳಕನ್ನು ಚೆಲ್ಲಬೇಕಿದೆ ಶ್ರೀಧರ್ಮಸ್ಥಳ‌ ಗ್ರಾಮಾಭಿವೃದ್ದಿ ಸಂಸ್ಥೆಯ ಯೋಜನಾಧಿಕಾರಿ ಶ್ರೀಮತಿ ಮಮತಾಶೆಟ್ಟಿ ಅಭಿಪ್ರಾ ವ್ಯಕ್ತಪಡಿಸಿದರು

 

ಕೆ ಆರ್ ಪೇಟೆ ತಾಲ್ಲೋಕಿನ ಸಂತೇಬಾಚಹಳ್ಳಿ ಹೋಬಳಿ ಭಾರತೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ (ಕೊರಟೀಕೆರೆ ಗೇಟ್)ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ನೆಡೆದ ಆರನೆಯ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತಾನಾಡಿದ ಕೆ ಆರ್ ಪೇಟೆ ಶಾಖೆಯ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿಗಳಾದ‌ ಶ್ರೀಮತಿ

ಮಮತಾಶೆಟ್ಟಿರವರು ಅಮವಾಸ್ಯೆ ಎಂಬ ಕಗ್ಗತ್ತಲಿನ ಭಯವನ್ನು ಹೊಡೆದೋಡಿಸಿ ಅಕ್ಷರದ ಜ್ಞಾನವನ್ನು ಬಿತ್ತಿದಾಗ ಮಾತ್ರ ಭಯವು ಹೋಗುವುದಲ್ಲದೆ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದ್ದು ಶ್ರದ್ದೆ ಭಕ್ತಿ ಮನಃಶಾಂತಿ ಶ್ರೀ ಪಂಚಭೂತೇಶ್ವರ ಮಠದಲ್ಲಿ ಲಭಿಸುವುದಲ್ಲದೆ ಮನಸ್ಸನ್ನು ಶುದ್ದಿಕರಿಸಿ ಸನ್ಮಾರ್ಗಾದತ್ತ ಸಾಗುವ ಎಲ್ಲಾ ದೈವ ಶಕ್ತಿಯು ಈ ಶ್ರೀ ಪಂಚಭೂತೇಶ್ವರ ಸ್ವಾಮಿಯ ಮಠದಲ್ಲಿದೆ ಎಂದು ಅಭಿಪ್ರಾಯಪಟ್ಟರು ಇದೇ ಸಂದರ್ಭದಲ್ಲಿ ದಿವ್ಯಾ ಸಾನಿದ್ಯವನ್ನು ವಹಿಸಿದ್ದ ಶ್ರೀ ಪಂಚಭೂತೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀರುದ್ರಮುನಿ ಗುರೂಜಿ,

ನಿವೃತ್ತ ಉಪಾನ್ಯಾಸಕರು ಹಾಗೂ ಪತ್ರಿಕಾ ವರದಿಗಾರರಾದ ಶ್ರೀ ಹರಿಚರಣ್ ತಿಲಕ್ ಮಾತನಾಡಿ" ಶ್ರದ್ದೆಯ ಅರ್ಥ ಮೂಢನಂಬಿಕೆ ದೇವರ ಅಸ್ತಿತ್ವದ ಬಗ್ಗೆ ತಿಳಿಯಲು ಅತ್ಯಂತ ಸೂಕ್ಷ್ಮ ಜ್ಞಾನದ, ಶ್ರಮದ, ಶುಧ್ದತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವವರಿಗೆ ದೇವರು ಸೂಕ್ಷ್ಮವೂ ಆಗಬಾರದು, ಜ್ಞಾನವೂ ಆಗಬಾರದು, ಶ್ರಮವೂ ಆಗಬಾರದು, ಸರಳವೂ ಆಗಬಾರದು. ಪ್ರಕೃತಿಯಂತೆ ಸಹಜ ಸ್ವಾಭಾವಿಕ ಆಗಿರಬೇಕು. ನೀರು ಗಾಳಿ ಬೆಳಕು ಕಾಡು ಬೆಟ್ಟ ಗುಡ್ಡಗಳಂತೆ ಸಹಜ ಮತ್ತು ಸ್ವಾಭಾವಿಕ ಆಗಬೇಕು. ಕಾರಣ ಪರಿಣಾಮ ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸಬೇಕು. ಅದು ಇಡೀ ವಿಶ್ವಕ್ಕೆ ಸಾರ್ವತ್ರಿಕ ಸತ್ಯವಾಗಬೇಕು. ಆಗ ಮಾತ್ರ ಅದರ ಅಸ್ತಿತ್ವ ಒಪ್ಪಬಹುದ

ನನ್ನ ಪ್ರೀತಿಯ ದೇವರೆ ನೀನೆಲ್ಲಿರುವೆ, 

ನಿನ್ನನ್ನು ಒಮ್ಮೆ ನೋಡಬೇಕೆನಿಸಿದೆ ,

ನಿನ್ನ ಬಳಿ ತುಂಬಾ ಮಾತನಾಡಬೇಕಿದೆ,

ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಬೇಕಿದೆ, ನಿನ್ನಲ್ಲಿ ನಾನು ಲೀನವಾಗಬೇಕಿದೆ,........

ಇಲ್ಲಿ ಕಟ್ಟಿಸಿರುವ ಗುಡಿ ಗೋಪುರ ಚರ್ಚು ಮಸೀದಿಗಳು ನಿನ್ನವೇನು?

ಈ ಪೂಜಾರಿ, ಸ್ವಾಮಿ, ಪಾದ್ರಿ, ಮೌಲ್ವಿಗಳು ನಿನ್ನವರೇನು?

ಜಾತಿ, ಧರ್ಮ, ಭಾಷೆಗಳನ್ನು ನೀನೇ ಸೃಷ್ಟಿಸಿದ್ದೇ?

ಗಾಳಿ, ನೀರು, ಬೆಳಕು ನಿನ್ನಿಂದಲೇ ಆಗಿದ್ದೇ?

ನನಗೆ ಬುದ್ದಿ ತಿಳಿದಾಗಿನಿಂದ ಹುಡುಕುತ್ತಿದ್ದೇನೆ,

ಎಲ್ಲಾ ಪುಣ್ಯ ಸ್ಥಳಗಳನ್ನು ಸುತ್ತಿದ್ದೇನೆ,

ಎಲ್ಲರೂ ಆಕಾಶ ತೋರುವರು, 

ಚಂದ್ರನಲ್ಲಿಗೂ, ಮಂಗಳನಲ್ಲಿಗೂ ಬಂದಿದ್ದೆ, 

ನೀನು ಕಾಣಲಿಲ್ಲ,

ಈ ಜನರ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ,

ನನ್ನೊಡೆಯ ಒಮ್ಮೆ,- ಒಮ್ಮೆ ಕಾಣಿಸಿಕೋ,

ನಂಬಿಕೆ, ಭಕ್ತಿ, ಶ್ರದ್ಧೆ, ಶುದ್ಧತೆ ಎಂದೆಲ್ಲಾ ಕೇಳಿ ಕೇಳಿ ತಲೆ ಕೆಟ್ಟಿದೆ,

ಅದೆಲ್ಲವನ್ನೂ ಕೊಡುವುದು ನೀನೇ ಆಗಿರುವಾಗ ಇವರ ಒತ್ತಡ ಏಕೆ?

ನೀನೇ ಸರ್ವಶಕ್ತ ಎನ್ನುವರು. ಆದರೆ,

ನಿನ್ನ ಗುಣಾವಗುಣಗಳನ್ನು ಇವರೇ ನಿರ್ಧರಿಸುವರು,

ರಾಶಿ ಭವಿಷ್ಯ ರಾಹು ಕೇತು ಸ್ವರ್ಗ ನರಕ ಶ್ರೇಷ್ಠ ಕನಿಷ್ಠ,

ಎಂದೆಲ್ಲಾ ಹೇಳಿ ನಿನ್ನ ಹೆಸರಲ್ಲೇ ಎಲ್ಲಾ ಮಾಡುವರು,

ನೀನು ಮಾತ್ರ ಪತ್ತೆಯೇ ಇಲ್ಲ.

ಆದರೂ ಕಾಯುತ್ತಿದ್ದೇನೆ ನಿನ್ನ ಬರುವಿಕೆಗಾಗಿ ಶತಶತಮಾನಗಳಿಂದ ದೇವರನ್ನು ಹಿರಣ್ಯ ಆಕಾಶಿಫನು ದೇವರನ್ನ ದ್ವೇಷಿಸುವ ಮೂಲಕ ದರ್ಶನವನ್ನು ಮಾಡುತ್ತಾನೆ. ಮಗ ಪ್ರಹಲ್ಲಾದ ದೇವರನ್ನು ಭಕ್ತಿಯಿಂದ ಪ್ರಾರ್ಥಿಸಿ ದರ್ಶನವನ್ನು ಪಡೆಯುತ್ತಾನೆ ಇದು ಮನುಷ್ಯ ಜನ್ಮದಲ್ಲಿ ಅವರವರ ನಂಬಿಕೆ ಎಂದು ತಿಳಿಸಿದರು.

 ಮಾನ್ಯತೆ ಪಡೆದ ರಾಜ್ಯ ಹಿಂದುಳಿದ ವರ್ಗಗಳ ಸಂಪಾದಕರ ಮತ್ತು ವರದಿಗಾರರ‌ ಸಂಘದ ಅಧ್ಯಕ್ಷರಾದ ಶ್ರೀ ಕೆ ಆರ್ ನೀಲಕಂಠ, ಎಳನೀರು ವ್ಯಾಪಾರಿಗಳು‌ ಹಾಗೂ ಸಮಾಜಸೇವಕರಾದ ಭಾರತೀಪುರ ಪುಟ್ಟಣ್ಣ,ಶ್ರೀಪಂಚಭೂತೇಶ್ವರ ಚಾರಿಟಬಲ್ ಟ್ರಸ್ಟ್ ನ ಖಜಾಂಚಿಗಳು ಮತ್ತು ಶಿಕ್ಷಕರಾದ ಮಹೇಶ್,ಟ್ರಸ್ಟ್,ಕಾರ್ಯದರ್ಶಿ ಶ್ರೀಕಾಂತಣ್ಣ,ಕಾರ್ಯಕ್ರಮದ ವ್ಯವಸ್ಥಾಪಕರು ಶಿಕ್ಷಕರಾದ ಕಾಡುಮೆಣಸಚಂದ್ರು ಟ್ರಸ್ಟ್ ನ ಉಪಾಧ್ಯಕ್ಷ ಶಿವಲಿಂಗೇಗೌಡ,ಪತ್ರಕರ್ತರಾದ ಜಿ ಪಿ ರಾಜು,ಶ್ಯಾರಹಳ್ಳಿಗೋವಿಂದರಾಜು,ಸೇರಿದಂತೆ ಶ್ರೀಮಠದ ನೂರಾರು ಭಕ್ತಾದಿಗಳು ಅಕ್ಷರ ಅಮವಾಸ್ಯೆ ಕಾರ್ಯಕ್ರದಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.

*ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ.*

What's Your Reaction?

like

dislike

love

funny

angry

sad

wow