ಬೆಳಗಾವಿ ಚಲೋ...ಬೆಳಗಾವಿಯಲ್ಲಿ ಗ್ರಾಮ ಸಹಾಯಕರ ಅನಿರ್ಧಿಷ್ಟಾವಧಿ ಮುಷ್ಕರ* .. *ಬೆಳಗಾವಿ ಮುಷ್ಕರದಲ್ಲಿ ಭಾಗವಹಿಸಲು ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ತೆರಳಿದ ಕೆ.ಆರ್.ಪೇಟೆ ಗ್ರಾಮ ಸಹಾಯಕರು

ಬೆಳಗಾವಿ ಚಲೋ...ಬೆಳಗಾವಿಯಲ್ಲಿ ಗ್ರಾಮ ಸಹಾಯಕರ ಅನಿರ್ಧಿಷ್ಟಾವಧಿ  ಮುಷ್ಕರ* .. *ಬೆಳಗಾವಿ ಮುಷ್ಕರದಲ್ಲಿ ಭಾಗವಹಿಸಲು ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ  ತೆರಳಿದ ಕೆ.ಆರ್.ಪೇಟೆ ಗ್ರಾಮ ಸಹಾಯಕರು

ಕೃಷ್ಣರಾಜಪೇಟೆ ತಾಲ್ಲೂಕಿನ ಸರ್ಕಾರಿ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ವತಿಯಿಂದ ರಾಜ್ಯದ 10450 ಜನ ಗ್ರಾಮ ಸಹಾಯಕರು 44 ವರ್ಷದಿಂದ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ಇದುವರೆವಿಗೂ ಗ್ರಾಮ ಸಹಾಯಕರಿಗೆ ಸರ್ಕಾರವು ಖಾಯಂ ಮಾಡಿರು ವುದಿಲ್ಲ ಆದ್ದರಿಂದ. D. ಗ್ರೂಪ್ ಬೇಡಿಕೆಗಾಗಿ ರಾಜ್ಯಾಧ್ಯಕ್ಷರಾದ ದೇವರಾಜು ರವರ ಅಧ್ಯಕ್ಷತೆ ಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸಂಘ ಮತ್ತು ಮಂಡ್ಯ ಜಿಲ್ಲಾ ಸಂಘದ ನಿರ್ಣಯದಂತೆ ಮಂಡ್ಯ ಜಿಲ್ಲಾಧ್ಯಕ್ಷರಾದ ರಾಜಣ್ಣ ಅವರ ನೇತೃತ್ವದಲ್ಲಿ ಡಿಸೆಂಬರ್ 10ರ ಭಾನುವಾರದಂದು ಬೆಳಗಾವಿಗೆ ಹೋಗುತ್ತಿದ್ದು ದಿನಾಂಕ 11ರ ಸೋಮವಾರ ಪಾದಯಾತ್ರೆ ಮತ್ತು ದಿನಾಂಕ12 ರ ಮಂಗಳವಾರ ದಿಂದ ರಾಜ್ಯ ಸರ್ಕಾರವು ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. 

ಕೃಷ್ಣರಾಜಪೇಟೆ ತಾಲ್ಲೂಕಿನ 77 ಜನ ಗ್ರಾಮ ಸಹಾಯಕರು ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳಲು ಕೆಲಸ ಕಾರ್ಯಗಳನ್ನ ಸ್ಥಗಿತಗೊಳಿಸಿ ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್ ಮತ್ತು ತಹಶೀಲ್ದಾರ್ ನಿಸರ್ಗಪ್ರಿಯ ಅವರ ಸಮ್ಮುಖದಲ್ಲಿ ತಾಲೂಕಿನ ಗ್ರಾಮ ಸಹಾಯಕರು ಮುಷ್ಕರದಲ್ಲಿ ಪಾಲ್ಗೊಳ್ಳಲು ಕೇಂದ್ರ ಸ್ಥಾನ ಬಿಡಲು ಅನುಮತಿಯನ್ನ ಕೋರಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಕೆ. ಪಿ.ಮಂಜುನಾಥ, ಉಪಾಧ್ಯಕ್ಷ ನಂಜಪ್ಪ ಕಾರ್ಯದರ್ಶಿ ಮಧು.H.S, ಹೋಬಳಿಯ ನಿರ್ದೇಶಕರಾದ ಶಿವರಾಜ್, ಜೈಕುಮಾರ್. ತಮ್ಮಯ್ಯ, D.V.ಮಂಜುನಾಥ್, ಲಲಿತಮ್ಮ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಸಹಾಯಕರು ಭಾಗವಹಿಸಿದ್ದರು.

 *ವರದಿ,ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ* 

What's Your Reaction?

like

dislike

love

funny

angry

sad

wow