*ಚನ್ನರಾಯಪಟ್ಟಣ:ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅಂತನಹಳ್ಳಿಸ್ವಾಮಿಗೌಡ ಉರುಪ್ ಕೃಷ್ಣೆಗೌಡ*

*ಚನ್ನರಾಯಪಟ್ಟಣ:ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅಂತನಹಳ್ಳಿಸ್ವಾಮಿಗೌಡ ಉರುಪ್ ಕೃಷ್ಣೆಗೌಡ*

ಚನ್ನರಾಯಪಟ್ಟಣ:ತಾಲೂಕು ಆಡಳಿತ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಶ್ರೀ ಗುರು ಕಲಾ ಸಂಘದ ಕಾರ್ಯಾಧ್ಯಕ್ಷರಾದಂತಹ ಅಂತನಹಳ್ಳಿ ಸ್ವಾಮಿಗೌಡರಿಗೆ ಅಭಿನಂದನೆ ಸಲ್ಲಿಸಿದ ಶ್ರೀ ಗುರು ಕಲಾ ಸಂಘದ ಪದಾಧಿಕಾರಿಗಳು,

ಚನ್ನರಾಯಪಟ್ಟಣ ತಾಲೂಕಿನಲ್ಲಿ ಅಂತನಹಳ್ಳಿ ಸ್ವಾಮಿಗೌಡರು 15 ವರ್ಷಗಳ ರಂಗಭೂಮಿಯ ಕಲಾ ಸೇವೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ, ನಮ್ಮ ಶ್ರೀ ಗುರುಕಲಾ ಸಂಘದ ಕಾರ್ಯಧ್ಯಕ್ಷರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ಅಭಿನಂದಿಸಿ ಗೌರವಿಸಿರುವುದು ನಮ್ಮ ಶ್ರೀ ಗುರುಕಲಾ ಸಂಘಕ್ಕೆ ಹೆಮ್ಮೆಯ ವಿಷಯ ಎಂದು ಅಧ್ಯಕ್ಷರಾದ ಎಚ್.ಎನ್.ರಾಮಣ್ಣ ಹರ್ಷ ವ್ಯಕ್ತಪಡಿಸಿದರು,ಅವರ ಕಲಾ ಸೇವೆ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು, ಅದೇ ರೀತಿ ಶ್ರೀ ಗುರು ಕಲಾ ಸಂಘದ ವತಿಯಿಂದ ಸ್ವಾಮಿಗೌಡರನ್ನು ಅಭಿನಂದಿಸಿ ಗೌರವಿಸಲಾಯಿತು,ಇವರ ಸೇವೆಯು ಮುಂದೆಯೂ ಸಹ ನಿರಂತರವಾಗಿ ರಂಗಭೂಮಿಗೆ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಲಾಯಿತು, 

ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಪ್ರಶಸ್ತಿಗಳು ಸಿಗಲಿ ಎಂದು ಸಂಘದ ಕಾರ್ಯದರ್ಶಿ ಮಹದೇವ್ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಶ್ರೀ ಗುರುಕಲಾ ಸಂಘದ ಅಧ್ಯಕ್ಷರಾದ ರಾಮಣ್ಣ ,ಕಾರ್ಯದರ್ಶಿಗಳಾದ ಮಹದೇವಣ್ಣ, ಖಜಾಂಚಿಗಳಾದ ಎಚ್ಎನ್ ಲಕ್ಷ್ಮಿ ನರಸಿಂಹಮೂರ್ತಿ, ಶ್ರೀ ಗುರು ಕಲಾ ಸಂಘದ ಕಾನೂನು ಸಲಹೆಗಾರರಾದ ಶ್ರೀನಿವಾಸ್, ಉಪಾಧ್ಯಕ್ಷರಾದ ಬಿ ಎಸ್ ನಾಗಣ್ಣನವರು,ಜಂಟಿ ಕಾರ್ಯದರ್ಶಿಗಳಾದ ಬಿ ಕೆ ಬೆಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾದ ಜೋಗಿಪುರ ಶೇಖರಣ್ಣನವರು, ಕಟ್ಟಡ ಸಮಿತಿಯ ಉಪಾಧ್ಯಕ್ಷರಾದ ಪಂಡಿತ್ ಕೃಷ್ಣಮೂರ್ತಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಎಚ್ ಎನ್ ನಂಜುಂಡೇಗೌಡ, ಕಟ್ಟಡ ಸಮಿತಿಯ ಸಂಘಟನಾ ಕಾರ್ಯದರ್ಶಿಗಳಾದ ಬೆಕ್ಕ ಚೆನ್ನಯ್ಯನವರು, ಶ್ರೀ ಗುರು ಕಲಾ ಸಂಘದ ನಿರ್ದೇಶಕರುಗಳಾದ ಸಿ ಟಿ ಕುಮಾರ್, ಸಂಚಾಲಕರಾದ ಗುರುರಾಜ್ ಅರಳಾಪುರ, ರವರು ಕಟ್ಟಡ ಸಮಿತಿಯ ಕಾರ್ಯದರ್ಶಿಗಳಾದ ಪಡುವನಹಳ್ಳಿರೇವಣ್ಣ, ಸದಸ್ಯರುಗಳಾದ ಗೌಡಗೆರೆ ಸತೀಶ್, ಶೆಟ್ಟಿಹಳ್ಳಿಯ ಸೀನ್ಸ್ ಜಯಣ್ಣ, ಮಲ್ಲವನಘಟ್ಟದ ನಾರಾಯಣ,ಕುವೆಂಪು ನಗರದ ಶಂಕರ್, ಸೇರಿದಂತೆ ಶ್ರೀ ಗುರು ಕಲಾ ಸಂಘದ ಗಣ್ಯರು ಹಾಜರಿದ್ದರು.

What's Your Reaction?

like

dislike

love

funny

angry

sad

wow