*45ನೇ ವರ್ಷದ ಹುಟ್ಟು ಹಬ್ಬವನ್ನು ಕಾಪನಹಳ್ಳಿ ಗವಿ ಮಠದಲ್ಲಿ ಆಚರಿಸಿಕೊಂಡ; ಕೆಬಿಸಿ ಮಂಜುನಾಥ್*

*45ನೇ ವರ್ಷದ ಹುಟ್ಟು ಹಬ್ಬವನ್ನು ಕಾಪನಹಳ್ಳಿ ಗವಿ ಮಠದಲ್ಲಿ ಆಚರಿಸಿಕೊಂಡ; ಕೆಬಿಸಿ ಮಂಜುನಾಥ್*

ಕೆ.ಆರ್.ಪೇಟೆ ತಾಲೋಕಿನ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ರಮಾಮಣಿ ರವರ ಮಾನಸ ಪುತ್ರ ಎಂದೇ ಹೆಸರುವಾಸಿಯಾಗಿರುವ ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರು ತಮ್ಮ 45ನೇ ವರ್ಷದ ಹುಟ್ಟು ಹಬ್ಬವನ್ನು ಕೆ.ಆರ್.ಪೇಟೆ ತಾಲೋಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರವಾದ ಕಾಪನಹಳ್ಳಿಯ ಗವಿಮಠದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಅರ್ಚನೆ,ಅಭಿಷೇಕ, ಪೂಜೆಯನ್ನು ನೆರವೇರಿಸಿ ಬಿಲ್ವಪತ್ರೆಯ ಗಿಡಗಳನ್ನು ನೆಟ್ಟು ನೀರುಣಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ತಮ್ಮ ಹುಟ್ಟು ಹಬ್ಬವನ್ನು ಶ್ರೀ ಕುವೆಂಪು ಕನ್ನಡ ಗೆಳೆಯರ ಸೇವಾ ಟ್ರಸ್ಟ್ ಹಾಗೂ ಕೂಡಲಗುಪ್ಪೆ.ಕಾಪನಹಳ್ಳಿ ಗ್ರಾಮದ ಯುವಕರು ಆಚರಿಸಿದರು,

ನಂತರ ಗವಿಮಠದ ಶ್ರೀ ಚನ್ನವೀರ ಸ್ವಾಮೀಜೀ ರವರು ಮಾತನಾಡಿ ಕೆಬಿಸಿ ಮಂಜುನಾಥ್ ರವರು ಒಂದು ಟ್ರಸ್ಟ್ ಮಾಡಿಕೊಂಡು ತಾಲೋಕಿನ ಸರ್ಕಾರಿ ಶಾಲೆಗಳಿಲ್ಲಿ ತಮ್ಮ ಹುಟ್ಟು ಹಬ್ಬ ಆಚರಿಸುತ್ತಾ ಬಂದಿದ್ದಾರೆ ಆದರೆ ಗವಿಮಠದ ಶಕ್ತಿಕೇಂದ್ರವಾದ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿ ಮೋಜು ಮಸ್ತಿಯ ಆಚರಣೆಗೆ ತೀಲಾಂಜಲಿ ನೀಡುವ ಮೂಲಕ ಯುವಕರಿಗೆ ಮಾದರಿ ಆಗಿದ್ದಾರೆ ಇವರ ಸೇವಾ ಮನೋಭಾವ ಈಗೇ ಮುಂದುವರಿಯಲು ಭಗವಂತ ಶಕ್ತಿ ನೀಡಲೆಂದು ಹಾರೈಸಿದರು,

ಈ ಸಂದರ್ಭದಲ್ಲಿ ಗವಿಮಠದ ಶ್ರೀ ಚನ್ನವೀರ ಸ್ವಾಮೀಜೀ, ಖ್ಯಾತ ಪಂಡಿತರಾದ ಕುಂದೂರು ಅರುಣ್ ಕುಮಾರ್, ಟ್ರಸ್ಟ್ ನ ಹಿರಿಯರಾದ ಗಂಗಾಧರ್, ಟೈಲರ್ ಸ್ವಾಮಿ, ಟೈಲರ್ ಮಂಜುನಾಥ್, ಉಪಾಧ್ಯಕ್ಷರಾದ ಎಸ್.ರವಿ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ರೋಹಿತ್,ಶ್ರೀನಾಥ್,ಎಲೆಕ್ಟ್ರಿಕಲ್ ಕುಮಾರ್,ಹೂವಿನ ಅಂಗಡಿ ಯೋಗೇಶ್, ಕಿಕ್ಕೇರಿ ನವೀನ್ ಗೌಡ, ಪತ್ರಕರ್ತರಾದ ಶಾರಳ್ಳಿ ಗೋವಿಂದರಾಜು, ಜಗದೀಶ್, ಮಾಕವಳ್ಳಿ ರಂಗನಾಥ್, ಲೋಕೇಶ್.ವಿ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು

*ವರದಿ ರಾಜು ಜಿ ಪಿ ಕಿಕ್ಕೇರಿ ಕೆ ಆರ್

ಪೇಟೆ*

What's Your Reaction?

like

dislike

love

funny

angry

sad

wow