*ಮಕ್ಕಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಬೇಸಿಗೆ ಶಿಬಿರಗಳು ವರದಾನವಾಗಿವೆ ಎಂದು ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾದ ಡಾ.ಜೆ. ಎನ್. ರಾಮಕೃಷ್ಣೆಗೌಡ ಹೇಳಿದರು*.

ಅವರು ಇಂದು ಕೆ.ಆರ್.ಪೇಟೆ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವಿವಿಧ ಶಾಲೆಗಳ ಪುಟಾಣಿ ಮಕ್ಕಳಿಗೆ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಮೊಬೈಲ್ ಫೋನ್ ಸಂಸ್ಕೃತಿಯಿಂದ ಹೊರತಂದು ಬಾಲ್ಯದಿಂದಲೇ ಉತ್ತಮವಾದ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ತುಂಬಿ, ಮಕ್ಕಳ ಸಮಗ್ರವಾದ ವ್ಯಕ್ತಿತ್ವವನ್ನು ವಿಕಾಸಗೊಳಿಸುವ ಮಕ್ಕಳ ಬೇಸಿಗೆ ಶಿಬಿರವು ಪಠ್ಯದ ಜೊತೆಗೆ ಪಟೈತರ ಚಟುವಟಿಕೆಗಳಲ್ಲಿಯೂ ಆಸಕ್ತಿ ಬೆಳೆಸಿ ಮಕ್ಕಳು ಉತ್ತಮವಾದ ಸಾಧನೆ ಮಾಡಲು ಬೇಸಿಗೆ ಶಿಬಿರವು ಸಹಕಾರಿಯಾಗಿದೆ. ಬೇಸಿಗೆ ಶಿಬಿರದಲ್ಲಿ ಮಕ್ಕಳು ಹಾಡುತ್ತಾ, ಕುಣಿಯುತ್ತಾ ಶಿಬಿರದಲ್ಲಿ ಭಾಗವಹಿಸಿರುವ ಇತರೆ ಮಕ್ಕಳೊಂದಿಗೆ ಅನ್ಯೋನ್ಯತೆಯಿಂದ ಇರುವ ಜೊತೆಗೆ ಸ್ನೇಹ ಸಹಬಾಳ್ವೆಯ ವೃದ್ಧಿಗೆ ನೆರವಾಗಲಿದೆ ಎಂದು ರಾಮಕೃಷ್ಣೆಗೌಡ ಹೇಳಿದರು.
ವಿಶ್ರಾಂತ ಉಪನ್ಯಾಸಕ ಎಂ.ಕೆ. ಹರಿಚರಣ್ ತಿಲಕ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಮಕ್ಕಳನ್ನು ಮೊಬೈಲ್ ಫೋನ್ ಮೋಹದಿಂದ ಬಿಡಿಸಿ ನಾವು ವಾಸಮಾಡುವ ಸಮಾಜ ಸೇರಿದಂತೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಅರಿವಿನ ಜಾಗೃತಿ ಮೂಡಿಸಲು ಮಕ್ಕಳ ಬೇಸಿಗೆ ಶಿಬಿರಗಳು ನೇರವಾಗಲಿವೆ ಎಂದು ಹರಿಚರಣ್ ಹೇಳಿದರು.
ಹಿರಿಯ ಪತ್ರಕರ್ತ ಡಾ.ಕೆ.ಆರ್. ನೀಲಕಂಠ, ಲೋಕೇಶ್ ವಿ,ಸಂಗೀತ ಶಿಕ್ಷಕ ವೆಂಕಟೇಶ್, ಪ್ರಾಂಶುಪಾಲ ಪ್ರಸಾದೇಗೌಡ, ರಾಮಚಂದ್ರ ಕಾರ್ಯಕ್ರಮದಲ್ಲಿ ಮಾತನಾಡಿದರು.
*ವರದಿ, ರಾಜು ಜಿಪಿ ಕಿಕ್ಕೇರಿ ಕೆ ಆರ್ ಪೇಟೆ*
What's Your Reaction?






