*ಉತ್ಪಾದನಾ ವೆಚ್ಚ ಕಡಿತಗೊಳಿಸಲು-ಭತ್ತದ ಯಾಂತ್ರೀಕೃತ ನಾಟಿ

*ಉತ್ಪಾದನಾ ವೆಚ್ಚ ಕಡಿತಗೊಳಿಸಲು-ಭತ್ತದ ಯಾಂತ್ರೀಕೃತ ನಾಟಿ

ವರದಿ :-ಪ್ರತಾಪ್. ಎ. ಬಿ 

*ಉತ್ಪಾದನಾ ವೆಚ್ಚ ಕಡಿತಗೊಳಿಸಲು-ಭತ್ತದ ಯಾಂತ್ರೀಕೃತ ನಾಟಿ.*

ಮಂಡ್ಯ ಜಿಲ್ಲೆಯು ಕೃಷಿ ಸಮೃದ್ಧ ಜಿಲ್ಲೆಗಳಲ್ಲಿ ಒಂದಾಗಿದ್ದು ಭತ್ತವು ಇಲ್ಲಿಯ ಪ್ರಮುಖ ಬೆಳೆಯಾಗಿದೆ ಅಲ್ಲದೆ ಬಹು ಮುಖ್ಯ ಆಹಾರ ಬೆಳೆಯು ಹೌದು. ಭತ್ತದಲ್ಲಿ ಅಧಿಕ ಇಳುವರಿ ಪಡೆಯಲು ಉತ್ತಮ ಹವಾಮಾನ, ವಾರ್ಷಿಕ ಮಳೆ, ಸೂಕ್ತವಾದ ಮಣ್ಣು ಮುಂತಾದ ಅನುಕೂಲಕರವಾದ ವಾತಾವರಣವಿದ್ದರೂ ಸಹ ವರ್ಷದಿಂದ ವರ್ಷಕ್ಕೆ ಭತ್ತ ಬೆಳೆಯುವ ಖರ್ಚು ಹೆಚ್ಚಾಗುತ್ತಿದೆ. ಕಾರಣ ಭತ್ತದ ಬೇಸಾಯ ಕ್ರಮಗಳು, ಕೂಲಿ ಕಾರ್ಮಿಕರ ಕೊರತೆ ಮತ್ತು ದಿನೇ, ದಿನೇ ಹೆಚ್ಚಾಗುತ್ತಿರುವ ಕೃಷಿ ಪರಿಕರಗಳ ಬೆಲೆ. ಅದರಲ್ಲೂ ಬಹು ಮುಖ್ಯವಾಗಿ ಕೈ ನಾಟಿ ಪದ್ಧತಿಯಿಂದ ಭತ್ತ ಬೆಳೆಯುವುದು ಮಂಡ್ಯ ಜಿಲ್ಲೆಯಲ್ಲಿ ಸಾಮಾನ್ಯ ಪದ್ಧತಿಯಾಗಿದ್ದು ಇದರಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಕೃಷಿಕರು ಭತ್ತದ ಬೇಸಾಯ ಲಾಭದಾಯಕವಲ್ಲ ಎಂಬ ಭಾವನೆಯಿಂದ ಭತ್ತದ ಬೆಳೆ ಬೆಳೆಯುವಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಸಾಂಪ್ರದಾಯಿಕ ನಾಟಿ ಪದ್ದತಿಯಲ್ಲಿ ಸೂಕ್ತ ಆಳ ಅಂತರದಲ್ಲಿ ಸಸಿಗಳ ನಾಟಿ ಮತ್ತು ನಿಗದಿತ ಸಸಿಗಳ ಸಂಖ್ಯೆ ಕಾಪಾಡಲು ಸಾಧ್ಯವಾಗದೇ ಇರುವುದೆ ಕಡಿಮೆ ಇಳುವರಿಗೆ ಕಾರಣವೆಂದರೆ ತಪ್ಪಾಗಲಾರದು. ಅಲ್ಲದೆ ಭತದ ಕೃಷಿಯ ಅವಿಭಾಜ್ಯ ಅಂಗವಾಗಿರುವ ನರ್ಸರಿ ಮತ್ತು ನಾಟಿ ಮಾಡುವ ಕ್ರಿಯಾಶೀಲ ಚಟುವಟಿಕೆಗಳಿಗೆ ಸಾಕಷ್ಟು ಹೆಚ್ಚಿನ ಕೆಲಸದ ಬೇಡಿಕೆಯಿಂದಾಗಿ ಕಾರ್ಮಿಕರ ಅಗತ್ಯತೆ ಹೆಚ್ಚಿರುತ್ತದೆ. ಇಂತಹ ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಅಭಿವೃದ್ಧಿಯಾದ ನೂತನ ತಾಂತ್ರಿಕತೆಯನ್ನು ಬಳಸುವುದು ಸೂಕ್ತವಾಗಿರುತ್ತದೆ. ಆದುದರಿಂದ ಭತ್ತದ ಬೇಸಾಯದಲ್ಲಿ ನಾಟಿಗಾಗಿ ಯಂತ್ರಗಳ ಬಳಕೆ ರೈತರಿಗೊಂದು ವರದಾನವಾಗಿದೆ.

ನಾಟಿ ಯಂತ್ರದಿಂದಾಗುವ ಉಪಯೋಗಗಳು: ಯಾಂತ್ರೀಕೃತ ನಾಟಿ ಪದ್ಧತಿಯಿಂದ ಕೃಷಿ ಕಾರ್ಮಿಕರ ಸಂಖ್ಯೆ ಮತ್ತು ಅಗತ್ಯತೆಯನ್ನು ಕಡಿಮೆಗೊಳಿಸಬಹುದು, ಸೂಕ್ತ ಸಮಯಕ್ಕೆ ನಾಟಿ, ಆಳ ಅಂತರ ಮತ್ತು ಸಂಖ್ಯೆಗಳನ್ನು ಕಾಪಾಡಬಹುದು. ಬಿತ್ತನೆ ಬೀಜದಲ್ಲಿ ಶೇ.20 ರಷ್ಟು ಉಳಿತಾಯ, ನಾಟಿ ಮಾಡಲು ಬೇಕಾದ ಸಸಿಗಳನ್ನು ಬೆಳೆಸಲು ಕಡಿಮೆ ಜಾಗ ಸಾಕಾಗುತ್ತದೆ. ಕಳೆ ಯಂತ್ರದಿಂದ (ಕೋನೋವೀಡರ್) ಕಳೆಯನ್ನು ಸುಲಭವಾಗಿ ಹತೋಟಿ ಮಾಡಬಹುದು, ಸುಮಾರು 3 ಜನ ಕಾರ್ಮಿಕರ ಸಹಾಯದಿಂದ ದಿನಕ್ಕೆ 3 ಎಕರೆ ನಾಟಿ ಮಾಡಬಹುದು, ಇಳುವರಿಯಲ್ಲಿ ಶೇ.12.15 ರಷ್ಟು ಹೆಚ್ಚಳ ಕಂಡುಬಂದಿರುತ್ತದೆ. ಯಾಂತ್ರೀಕೃತ ನಾಟಿ ಪದ್ಧತಿಯಲ್ಲಿ ಎರಡು ಪ್ರಮುಖ ಚಟುವಟಿಕೆಗಳೆಂದರೆ ಚಾಪೆ ಸಸಿ ಮಡಿ ತಯಾರಿಕೆ ಹಾಗೂ ನಾಟ ಯಂತ್ರದ ಬಳಕೆ

ಚಾಪೆ ಸಸಿ ಮಡಿ ತಯಾರಿಕೆ: ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಸಿದಂತಹ ಸಸಿಮಡಿ ಯಂತ್ರ ಬಳಸಿ ನಾಟಿ ಮಾಡಲು ಸೂಕ್ತವಾಗಿರುವುದಿಲ್ಲ. ಯಂತ್ರಗಳನ್ನು ಬಳಸಿ ಹದ ಮಾಡಿದ ಕೆಸರು ಗದ್ದೆಯಲ್ಲಿ ಸಸಿ ನಾಟಿ ಮಾಡಬೇಕಾದರೆ ಭತ್ತದ ಸಸಿ ಮಡಿಯನ್ನು ಚಾಪೆ ಮಾದರಿ ಅಥವಾ ಡಾಪೋಗ್ ಮಾದರಿಯಲ್ಲಿ ಬೆಳೆಸಬೇಕು. ಇದೊಂದು ಕಡಿಮೆ ಸ್ಥಳಾವಕಾಶದಲ್ಲಿ ಯಾವುದೇ ವಿಶೇಷ ಖರ್ಚು ಇಲ್ಲದೆ ಮಾಡಬಹುದಾದ ಅತಿ ಸಾಂದ್ರದ ಸಸಿ ತಯಾರಿಕಾ ವಿಧಾನ. ಈ ವಿಧಾನದಲ್ಲಿ ಸಸಿ ಮಡಿ ತಯಾರಿಸಲು ಪ್ಲಾಸ್ಟಿಕ್ ಹಾಳೆಯನ್ನು ಬಳಕೆಮಾಡಬಹುದು (50-60 ಮೈಕ್ರಾನ್), ಅಲ್ಲದೆ ಏರುಮಡಿಯಲ್ಲಾಗಲಿ, ಗಟ್ಟಿ ನೆಲದಲ್ಲಾಗಲಿ ಅಥವಾ ಸಿಮೆಂಟ್ ನೆಲದಲ್ಲಿ ಕೂಡ ತಯಾರಿಸಬಹುದು. ಒಂದು ಎಕರೆಗೆ ಬೇಕಾಗುವ ಸಸಿಗಳನ್ನು ಪೂರೈಸಲು 25-30 ಜಿ.ಮೀ ವಿಸ್ತೀರ್ಣ (25.30ಮಿ ಉದ್ದ ಮತ್ತು 12 ಮೀ ಅಗಲ ಮತ್ತು 10 ಸೆಂ.ಮೀ ಎತ್ತರ) ಸಾಕಾಗುತ್ತದೆ.

ಸಸಿ ಮಡಿ ಮಾಡುವ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಹೆಂಟೆ ಹೊಡೆದು ಸಮಮಾಡಿ ಸುಮಾರು 50-60 ಮೈಕ್ರಾನ್ ದಪ್ಪ ಪ್ಲಾಸ್ಟಿಕ್ ಹಾಳೆಯನ್ನು ಸಮತಟ್ಟು ಮಾಡಿದ ಸಸಿಮಡಿಯ ಮೇಲೆ ಹಾಸಿ ಕಬ್ಬಿಣದ ಚೌಕಟ್ಟು ಇಟ್ಟು (20 ಸೆಂ.ಮೀ ಅಗಲ ಮತ್ತು 55 ಸೆಂ.ಮೀ ಉದ್ದ ಮತ್ತು 2 ಸೆಂ.ಮೀ ಎತ್ತರದ ನಾಲ್ಕು ಭಾಗವಿರುವ ಚೌಕಟ್ಟು) ಅಥವಾ ಪ್ಲಾಸ್ಟಿಕ್ ಟ್ರಿಗಳನ್ನು ಬಳಸಿ ಕೂಡ ಮಾಡಬಹುದು. 20 ಸೆಂ.ಮೀ ಅಗಲ 55 ಸೆಂ.ಮೀ ಉದ್ದದ ಸುಮಾರು 80-100 ಟ್ರಿ ಗಳು ಒಂದು ಎಕರೆಗೆ ಬೇಕಾಗುವ ಸಸಿಗಳನ್ನು ಪೂರೈಸಲು ಬೇಕಾಗುತ್ತದೆ. ನಂತರ ಟ್ರಿ ಒಳಗೆ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್ಟ್ ಗೊಬ್ಬರ ಮತ್ತು ಮರಳಿನ ಮಿಶ್ರಣವನ್ನು 1:1 ಪ್ರಮಾಣದಲ್ಲಿ ಬೆರೆಸಿ ಸುಮಾರು 2 ಸೆಂ.ಮೀ ಮಂದದಲ್ಲಿ ಸಮಾನಾಗಿ ತುಂಬಬೇಕು.

ನಂತರ ಪ್ರತಿ ಟ್ರೇಗೂ 135-150 ಗ್ರಾಂ ಮೊಳಕೆ ಬೀಜವನ್ನು ಒಂದೆ ಸಮಾನಗಿ ಹರಡಿ ಕೈಯಿಂದ ಮೃದುವಾಗಿ ಮಣ್ಣಿಗೂ ಬೀಜಕ್ಕೂ ಸ್ಪರ್ಶವಾಗುವಂತೆ ತಟ್ಟಬೇಕು. ತೇವ ಆರದಂತೆ ಮತ್ತು ಹಕ್ಕಿಗಳಿಂದ ರಕ್ಷಿಸಲು ಆರಂಭದ ಮೂರು-ನಾಲ್ಕು ದಿನಗಳವರೆಗೆ ಬಿಜ ರಹಿತವಾದ ಭತ್ತದ ಹುಲ್ಲಿನಿಂದ ತೆಳುವಾದ ಹೊದಿಕೆಯಿಂದ ಮುಚ್ಚಬೇಕು. ಮೊಳಕೆ ಬರುವವರೆಗೂ ದಿನಕ್ಕೆ 2 ಬಾರಿಯಂತೆ 3-4 ದಿನಗಳವರೆಗೆ ಸಸಿ ಮಡಿ ಒಣಗದಂತೆ ಹೊದಿಕೆಯ ಮೇಲೆ ರೋಸ್‌ಕ್ಯಾನನಿಂದ ನಿಧಾನವಾಗಿ ನೀರುಣಿಸಬೇಕು. ಬೀಜ ಬಿತ್ತಿದ ನಾಲ್ಕನೇ ದಿನ ಭತ್ತದ ಹುಲ್ಲನ್ನು ಹೊರತೆಗೆದು ಸಸಿ ಮಡಿಗಳ ಮೇಲೆ 15 ಸೆಂ.ಮೀ ನೀರು ಇರುವಂತೆ ನೋಡಿಕೊಳ್ಳಬೇಕು. ಈ ವಿಧಾನದಲ್ಲಿ 14-15 ದಿವಸದ ಸಸಿಗಳನ್ನು ನಾಟಿ ಮಾಡಬಹುದು, ಭತ್ತದ ತಳಿಗಳ ಗುಣಧರ್ಮಗಳಿಗೆ ಅನುಸಾರವಾಗಿ ಈ ಅವಧಿಯಲ್ಲಿ ಸುಮಾರು 16-20 ಸೆಂ.ಮೀ ಎತ್ತರ ಬೆಳೆದು 3 ಎಲೆಗಳನ್ನು ಹೊಂದಿರುತ್ತದೆ. ಪ್ರೇಮ್ ಅಥವಾ ಟ್ರ ಅಳವಡಿಸುವುದರಿಂದ ಕಡಿಮೆ ಪ್ರದೇಶ ವೆಚ್ಚದಲ್ಲಿ ಉತ್ತಮ ಸಸಿಗಳನ್ನು ತಯಾರಿಸಬಹುದು.

ಯಾಂತ್ರೀಕೃತ ನಾಟಿ ವಿಧಾನದ ಯಶಸ್ಸು ಭೂಮಿಯ ಸಿದ್ಧತೆಯ ಮೇಲೆ ಅವಲಂಭಿತವಾಗಿರುವುದರಿಂದ ಈ ಕೆಳಗಿನ ಅಂಶಗಳನ್ನು

ಪಾಲಿಸಬೇಕು. ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ಕೆಸರು ಮಾಡಿದ ನಂತರ ನಾಟಿ ಮಾಡುವ ಭೂಮಿಯೂ ಸರಿಯಾಗಿ

ಸಮತಟ್ಟಾಗಿರುವಂತೆ ತಯಾರಿಸಬೇಕು. ಹೆಂಟೆಗಳು ಹಿಂದಿನ ಬೆಳೆಯ ಅವಶೇಷಗಳು ಯಾವುದೇ ಕಳೆ ಗಿಡಗಳು ಇರಬಾರದು ಅಳವಡಿಸುವುದರಿಂದ ಕಡಿಮೆ ಪ್ರದೇಶ ವೆಚ್ಚದಲ್ಲಿ ಉತ್ತಮ ಸಸಿಗಳನ್ನು ತಯಾರಿಸಬಹುದು.

ಯಾಂತ್ರೀಕೃತ ನಾಟಿ ವಿಧಾನದ ಯಶಸ್ಸು ಭೂಮಿಯ ಸಿದ್ದತೆಯ ಮೇಲೆ ಅವಲಂಭಿತವಾಗಿರುವುದರಿಂದ ಈ ಕೆಳಗಿನ ಅಂಶಗಳನ್ನು ಪಾಲಿಸಬೇಕು. ಗದ್ದೆಯನ್ನು ಚೆನ್ನಾಗಿ ಉಳುಮೆ ಮಾಡಿ ಕೆಸರು ಮಾಡಿದ ನಂತರ ನಾಟಿ ಮಾಡುವ ಭೂಮಿಯೂ ಸರಿಯಾಗಿ ಸಮತಟ್ಟಾಗಿರುವಂತೆ ತಯಾರಿಸಬೇಕು. ಹೆಂಟೆಗಳು ಹಿಂದಿನ ಬೆಳೆಯ ಅವಶೇಷಗಳು ಯಾವುದೇ ಕಳೆ ಗಿಡಗಳು ಇರಬಾರದು.

ಮತ್ತುಉಳುಮೆಯ ಆಳ 15 ರಿಂದ 30 ಸೆಂ.ಮಿ ಗಿಂತ ಹೆಚ್ಚಿರಬಾರದು. ನಾಟಿಗೆ ಒಂದು ದಿನ ಮುಂಚಿತವಾಗಿ ಸಸಿ ಮಡಿಗಳಿಂದ ನೀರು ಬಸಿದು ಹೋಗುವಂತೆ ಮಾಡಬೇಕು. ಯಂತ್ರದಲ್ಲಿ ಕಬ್ಬಿಣದ ತಟ್ಟೆಗಳು ಜೋಡಿಸಲ್ಪಟ್ಟಿದ್ದು ಟ್ರೈಗಳಲ್ಲಿ ಬೆಳೆದಿರುವ (14-19 ದಿನಗಳ ಸಸಿಗಳನ್ನು) ಇಟ್ಟು ನಿಗದಿಯಂತೆ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ನಾಟಿ ಮಾಡುತ್ತದೆ. ಈ ಯಂತ್ರದ ವಿಶೇಷತೆಯೆಂದರೆ ಇದು ಯಂತ್ರದ ಹಿಂದೆ ನಡೆಯುತ್ತಾ ನಾಟಿ ಮಾಡಬಹುದಾಗಿದೆ. ಈ ಯಂತ್ರದಲ್ಲಿ ಮುಂದೆ ಹೋಗುವ ಹಾಗೂ ಹಿಂದಕ್ಕೆ ಚಲಿಸುವ ಗೇರ್‌ಗಳನ್ನು ಒದಗಿಸಲಾಗಿದೆ. ಕೆಸರು ಗದ್ದೆಯಲ್ಲಿ ಸರಾಗವಾಗಿ ನಡೆಯಲು ರಬ್ಬರ್ ವೀಲ್ ತೇಲುವ ದೋಣಿಗಳನ್ನು ಅಳವಡಿಸಲಾಗಿದೆ. ಚಾಲಕರ ಜೊತೆ 2 ಕಾರ್ಮಿಕರ ಸಹಾಯದಿಂದ ದಿನವೊಂದಕ್ಕೆ 3 ಎಕರೆ ನಾಟಮಾಡಬಹುದು. ಈ ಯಂತ್ರಕ್ಕೆ ಮೂರು ಆಶ್ವ ಶಕ್ತಿ ಪೆಟ್ರೋಲ್ ಚಾಲಿತ ಮೋಟರ್‌ನ್ನು ಆಳವಡಿಸಲಾಗಿದೆ. ಅಲ್ಲದೆ ಒಂದು ಎಕರೆ ನಾಟಿ ಮಾಡಲು 2.5 ಯಿಂದ 3 ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಈ ಯಂತ್ರ ಬಳಸುವುದರಿಂದ ಶೇಕಡ 75-80 ರಷ್ಟು ಕೂಲಿ ಕಾರ್ಮಿಕರ ಉಳಿತಾಯವಾಗುವುದಲ್ಲದೆ ಎಕರೆಗೆ ನಾಟಿ ಮಾಡುವ ಖರ್ಚಿನಲ್ಲಿ ಶೇಕಡಾ 35-40 ರಷ್ಟು ಉಳಿತಾಯವಾಗುತ್ತದೆ.

What's Your Reaction?

like

dislike

love

funny

angry

sad

wow