*ಶ್ರೀ ಕ್ಷೇತ್ರ ದಿಂದ ವಾತ್ಸಲ್ಯ ಮನೆ ಹಸ್ತಾಂತರ.*

*ಶ್ರೀ ಕ್ಷೇತ್ರ ದಿಂದ ವಾತ್ಸಲ್ಯ ಮನೆ ಹಸ್ತಾಂತರ.*

ಪರಮ ಪೂಜ್ಯ ಖಾವಂದರರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಸಮಾಜಪರ ಕಾರ್ಯಕ್ರಮಗಳಾದ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಸಮಾಜದಲ್ಲಿನ ದುರ್ಬಲರನ್ನು, ನಿರ್ಗತಿಕರನ್ನು ಗುರುತಿಸಿ ಅವರಿಗೆ ಬೇಕಾದ ಮೂಲಸೌಕರ್ಯಗಳನ್ನು ಹಾಗೂ ನೆರಳಿಗೊಂದು ಸೂರು ಎನ್ನುವಂತೆ ಇಂದು ಮಂಡ್ಯ ತಾಲೂಕಿನ ಬಿ .ಹೊಸೂರು ವಲಯದ ಹಂಪಾಪುರ ಕಾರ್ಯಕ್ಷೇತ್ರದಲ್ಲಿ ವಾತ್ಸಲ್ಯ ಕುಟುಂಬದ ಸದಸ್ಯರಾದ ನಿಂಗಮ್ಮ ರವರು , ಮನೆಯಿಲ್ಲದೆ ಸುಮಾರು ವರ್ಷಗಳಿಂದ ಬಸ್ ಸ್ಟ್ಯಾಂಡ್ ನಲ್ಲಿ ವಾಸವಿದ್ದು, ಮಳೆ ಬಂದಾಗ ವಾಸವಿದ್ದ ಜಾಗದಲ್ಲಿ ನೀರು ತುಂಬಿಕೊಂಡು ಸಮಸ್ಯೆಯಾಗಿ ಕಷ್ಟ ಪಡುತ್ತಿದ್ದರು,ಇವರಿಗೆ ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆಯ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ,ಇಂದು ಅವರಿಗೆ ಮನೆ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲೆಯ ಸಂಸ್ಥೆಯ ನಿರ್ದೇಶಕರಾಗಿರುವಂತಹ ಶ್ರೀಮತಿ ಚೇತನ ಎಂ ರವರು ಹಾಗೂ ಮಂಡ್ಯ ತಾಲೂಕಿನ ಯೋಜನಾಧಿಕಾರಿಗಳಾದ ಮಮತಾ ಶೆಟ್ಟಿ, ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಗಳಾದ ಮೂಕಾಂಬಿಕಾ ರವರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರು ಸತೀಶ್ ಹಾಗೂ ನಿಂಗಮ್ಮರವರಿಗೆ ಮನೆ ಕಟ್ಟಲು ಜಾಗ ನೀಡಿದ ದಾನಿಗಳಾದ ಪುಟ್ಟಸ್ವಾಮಿ ಯವರು ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ವೇತ.ಹೆಚ್ ವಿ. ವಲಯ ಮೇಲ್ವಿಚಾರಕಿ ರೂಪ,ಸೇವಾ ಪ್ರತಿನಿಧಿ ಸುನೀತಾ ಹಾಗೂ ಸಂಘದ ಸದಸ್ಯರುಗಳಿದ್ದು, ಮನೆಯನ್ನು ಅವರಿಗೆ ಹಸ್ತಾಂತರ ಮಾಡಿಸಲಾಯಿತು... ಈ ಸಂದರ್ಭ ಜಿಲ್ಲಾ ನಿರ್ದೇಶಕರಾದ ಚೇತನಾ ರವರು ಮಾತನಾಡಿ ಪರಮ ಪೂಜ್ಯರು ಮತ್ತು ಹೇಮಾವತಿ ಹೆಗ್ಗಡೆಯವರ ಆಶಯದ ಕಾರ್ಯಕ್ರಮ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ,ನಿರ್ಗತಿಕರಿಗೆ ಆಹಾರ,ಬಟ್ಟೆ ಹಾಗೂ ಮೂಲ ಸೌಕರ್ಯ ಗಳಾದ ಮನೆ, ವಿದ್ಯುತ್,ನೀರಿನ ವ್ಯವಸ್ಥೆ ಹಾಗೂ ಇನ್ನು ಮುಂತಾದ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ವಾತ್ಸಲ್ಯ ವನ್ನೂ ನೀಡುತ್ತಿದ್ದಾರೆ..ಇದರ ಪ್ರಯೋಜನವನ್ನು ಸಾವಿರಾರು ಮಂದಿ ಪಡೆಯುತ್ತಿದ್ದು,ನಮ್ಮ ಮಂಡ್ಯ ತಾಲೂಕಿನಲ್ಲಿ ಸುಮಾರು 53 ಮಂದಿಗೆ ಪ್ರತಿ ತಿಂಗಳು 750 ರಿಂದ 1000 ಮಾಸಾಶನ, ಆಹಾರದ ಫುಡ್ ಮಿಕ್ಸ್ ವಿತರಣೆ ಗಳನ್ನು ಒದಗಿಸಲಾಗಿದೆ.. ಈ ಮೂಲಕ ನಿರ್ಗತಿಕರ ಬದುಕಿಗೆ ಆಶಾಕಿರಣವಾಗಿ ಯೋಜನೆ ಸೇವೆ ಸಲ್ಲಿಸುತ್ತಿದೆ ಎಂದರು.

*ಮಂಡ್ಯ ಸುದ್ದಿ*

ವರದಿಗಾರರು:-ಪ್ರತಾಪ್. ಎ. ಬಿ

What's Your Reaction?

like

dislike

love

funny

angry

sad

wow